ಪುಟ:Mrutyunjaya.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೯೯

ಅವರ ಜತೆ ತಾನೂ ಜಯಕಾರ ಮಾಡಿದೆನಲ್ಲ ಎಂದು ಇಪ್ಯುವರ್
ಗಾಬರಿಯಾಗಿ, ಬಾಯಿಯನ್ನು ಅಂಗೈಯಿಂದ ಮುಚ್ಚಿಕೊಂಡ. ಮರುಕ್ಷಣವೇ
ಕೈತೆಗೆದು, ಗಟ್ಟಿಯಾಗಿ ನಕ್ಕ.
ಮೆನೆಪ್ಟಾ ತೊಟ್ಟಿಲ ಕೂಸಾದ, ಅಂಬೆಗಾಲಿಡುವ ಮಗುವಾದ,
ಹದಿ ವಯಸ್ಸಿನ ಹುಡುಗನಾದ ಸಹಸ್ರಾರು ಜನರ ಆ ವಾತ್ಸಲ್ಯ, ಒಲವು....
" ಆ ಬಕಿಲ ಎಲ್ಲಿದ್ದಾನೆ ಹುಡುಕಿ!"
___ಖ್ನೆಮ್ ಹೊಟೆಪ್ನ ಧ್ವನಿ.
" ಆ ಅಧಿಕಾರಿ, ಗೇಬು ಎಲ್ಲಿದ್ದಾರೆ ನೋಡಿ !"
___ಇನ್ನೊಬ್ಬನ ಕಂಠ
ಅವರಿರಲಿಲ್ಲ. ಕಂದಾಯ ವಸೂಲಿಗೆ ಬಂದ ಕಾವಲು ಭಟರೂ ಇರಲಿಲ್ಲ.
ರಾಜಗೃಹದ ಕೆಲ ಭಟರೂ ಅಲ್ಲಿರಲಿಲ್ಲ. ಕುದಿಯುವ ನೀರಿಗಾಗಿ ಒಲೆಗೆ ಉರಿ
ಹಾಕಲು ಯತ್ನಿಸುತ್ತಿದ್ದ ಸೇವಕರಲ್ಲೊಬ್ಬ ದಿಡ್ಡಿ ಬಾಗಿಲ ಕಡೆಗೆ ಬೊಟ್ಟು
ಮಾಡಿ, " ಹೊರಟು ಹೋದ್ರು" ಅಂದ.
" ಓಡಿ ಹೋದ್ರು," ಎಂದು ಇನ್ನೊಬ್ಬ ತಿದ್ದಿದ.
ನದಿಯ ದಂಡೆಗೆ ಕಳ್ಳದಾರಿ, ಅಲ್ಲಿಂದ ರಾಜನಾವೆಯನ್ನೇರಿ ಮೆಂಫಿಸಿಗೆ
ಪಲಾಯನ....
ಜನ ರಾಜಗೃಹದ ಪಲ್ಲಕಿಯನ್ನು ತಂದರು. ಮೆನೆಪ್ಟಾನನ್ನು ಅದರಲ್ಲಿ
ಕುಳ್ಳಿರಿಸಿದರು. ಹೊರುವ ಸೌಭಾಗ್ಯಕ್ಕಾಗಿ ಕಿತ್ತಾಡಿದರು.
ಮುರಿದ ಮಹಾದ್ವಾರವನ್ನು ದಾಟಿದ್ದಾಯಿತು. ಖ್ನೆಮ್ ಹೊಟೆಪನ
ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಹೊರಟಿತು.
ರಾಜಗೃಹದಲ್ಲಿ ಸಭಾಮಂದಿರದ ಮೂಲೆಯಲ್ಲಿ ಭೂಮಾಲಿಕರು ನಿಂತೇ
ಇದ್ದರು, ದಂಗಾಗಿ.
ಇಪ್ಯುವರ್ ನನ್ನು ಅಪೆಟ್ ನನ್ನೂ ಜನ ಕರೆದರು :
" ಬನ್ನಿ ! ಬನ್ನಿ!"
ಬಟಾ ಪಲ್ಲಕಿಯ ಮುಂದೆ ಕುಣಿಯುತ್ತ ನಡೆದ.
ನಿದ್ದೆ ? ಎಚ್ಚರ ? ಕನಸು ? ಕನಸು ? ಮೆನೆಪ್ಟಾ ಅರೆತೆರೆದ