ಪುಟ:Mrutyunjaya.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೦೦

ಮೃತ್ಯುಂಜಯ

ಕಣ್ಣುಗಳಿಂದ ಪಂಜು ಬೆಳಕಿನಲ್ಲಿ ಕುಣಿಯುತ್ತಿದ್ದ ಬಟಾನನ್ನು ನೋಡಿದ....
ಕರಡಿ ಕುಣಿತ ?.... ನೆಫಿಸ್....ರಾಮೆರಿಪ್ಟಾ....


ಮಾರನೆಯ ಬೆಳಿಗ್ಗೆ ಅರಾಜಕವಾಗಿದ್ದರೂ ಶಾಂತವಾಗಿತ್ತು, ನೀರಾನೆ
ಪ್ರಾಂತ. ಮುಖ್ಯ ಪಟ್ಟಣದ ಜನ ತಡವಾಗಿ ಕಣ್ಣು ಹೊಸಕಿಕೊಂಡು
ಎದ್ದರು. ಕಂದಾಯ ವಸೂಲಿಗೆ ಬಂದಿದ್ದವರು ಬದುಕಿ ಉಳಿದರೆ ಸಾಕೆಂದು
ಓಡಿ ಹೋದ ಸುದ್ದಿ ಗ್ರಾಮಾಂತರ ಪ್ರದೇಶಗಳಿಗೆ ಹಬ್ಬಲು ಹಾತೊರೆ
ಯುತ್ತಿತ್ತು. ಅದರ ವಾಹಕರಾಗಲು ಅಬ್ಟು ಯಾತ್ರಿಕರ ತಂಡದಲ್ಲಿದ್ದ
ಹಳ್ಳಿಗರು ಸಿದ್ಧವಾಗಿದ್ದರು.
ಹೊರಡುವುದಕ್ಕೆ ಮುನ್ನ, ಚಾಟಿಗೆರೆಗಳು ಊದಿಕೊಂಡಿದ್ದರೂ
ಸುಪ್ರಸನ್ನನಾಗಿದ್ದ ಮೆನೆಪ್ಟಾಗೆ ಅವರು ನಮಿಸಿದರು; ನೆಫಿಸ್ ಗೆ ವಿದಾಯ
ನುಡಿದರು; "ಹೋಗಿ ಬರ್ತೇವೆ" ಎಂದು ರಾಮೆರಿಪ್ಟಾಗೂ ಹೇಳಿದರು.
ಗಾಯಗೊಂಡಿದ್ದವರಿಗೆ ಅರ್ಚಕ ವೈದ್ಯ ಅಪೆಟ್ ನಿಂದ ಚಿಕಿತ್ಸೆ.
ಎಲ್ಲವೂ ರಕ್ತ ಸೋರುತ್ತಿದ್ದ ಹೊರಗಿನ ಗಾಯಗಳು. ಮಂತ್ರಪಠಣದ
ಅಗತ್ಯವಿರಲಿಲ್ಲ . ಆದರೆ, ಅವರಲ್ಲಿ ಬಾಣ ಆಳಕ್ಕೆ ನೆಟ್ಟಿದ್ದ ಒಬ್ಬನ ಸ್ಥಿತಿ
ಮಾತ್ರ ಗಂಭೀರವಾಗಿತ್ತು.
ಸ್ನೊಫ್ರು ಮೆನೆಪ್ಟಾನೊಡನೆ ನುಡಿದ :
"ನೇಕಾರ ಅನ್ಪು ಬದುಕ್ತಾನೋ ಇಲ್ಲವೋ...."
".... ...."
"ಪಟ್ಟಿ ಕಟ್ಟಿದೆ ಆದರೂ...."
"ಅಪೆಟ್ ಏನು ಹೇಳ್ತಾರೆ ?"
"ದೇವರ ಮೇಲೆ ಭಾರ ಹಾಕೋಣ ಅಂದ್ರು ,"
ನಿಟ್ಟುಸಿರು ಬಿಟ್ಟು ಮೆನೆಪ್ಟಾ ನುಡಿದ: