ಪುಟ:Mrutyunjaya.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೨ ಮೃತ್ಯುಂಜಯ

ಇಬ್ಬರ ಮುಖಗಳನ್ನೂ ಪರೀಕ್ಷಕ ನೋಟದಿಂದ ದಿಟ್ಟಿಸಿ, ಖ್ನೆಮ್
ಹೊಟಿಪ್ ಕೇಳಿದ:
"ಯಾವ ವಿಷಯ?"
"ರಾಜಗೃಹಕ್ಕೆ ಸಂಬಂಧಿಸಿದ್ದು," ಎಂದ ಸ್ನೊಫ್ರು.
"ಅದಾ? ನಾನು ವಯಸ್ನಲ್ಲಿ ಚಿಕ್ಕೋನು. ಉದ್ಢಟ ಅಂತ ನೀವು
ಬಯ್ಬಹುದು. ಆದರೂ ಮನಸ್ನಲ್ಲಿ ಇರೋದನ್ನ ಹೇಳಿಯೇ ಬಿಡ್ತೇನೆ.
ಇನ್ನು ನೀರಾನೆ ಪ್ರಾಂತಕ್ಕೆ ಹೊರಗಿನ ಪ್ರಾಂತಪಾಲರೂ ಬೇಡ, ಅಧಿಕಾರಿ
ಗಳೂ ಬೇಡ. ಮೆನೆಪ್‌‌‍ಟಾ ಆಣ್ಣ ನಮ್ಮ ನಾಯಕ, ಅವರೇ ಪ್ರಾಂತಪಾಲ,
ಅವರೇ ಅಧಿಕಾರಿ. ನಮ್ಮನ್ನು ನಾವೇ ಆಳೋಣ."
ಮೆನೆಪ್‌‍ಟಾ ಭಾವೋದ್ವೇಗವನ್ನು ಹತ್ತಿಕ್ಕಿದ. ಸ್ನೊಪ್ರು ಸರಾಗವಾಗಿ
ಉಸಿರಾಡಲೆತ್ನಿಸುತ್ತ ಅಂದ:
"ನೀನು ಬಡಬಡ ಅಂತ ಹೇಳ್ಬಿಟ್ಟಿ. ಅದೇ ತೀರ್ಮಾನಕ್ಕೆ ಯೋಚಿಸಿ
ಯೋಚಿಸಿ ನಾವೂ ಬರ್‍ತಾ ಇದ್ವಿ."
ಖ್ನೆಮ್ ಹೊಟಿಪನ ಮುಖದ ಮೇಲೆ ಹರ್ಷ ಅರಳಿತು. ಆತ ಮೆನೆಪ್‌‌‍
ಟಾನ ಬಳಿಗೆ ಚಂಗನೆ ಹಾರಿ ಮಂಡಿಯೂರಿ ಅವನ ಬಲಗೈಯನ್ನು ಚುಂಬಿಸಿದ.
ಸ್ನೊಫ್ರುವಿಗೂ ಅದೇ ರೀತಿ ಗೌರವ ತೋರಿದ.
"ನೆಫಿಸ್ ಅಕ್ಕ! ನೆಫಿಸ್ ಅಕ್ಕ! ಏನು ಕೊಡ್ತೀರಿ? ಕೇಳಿಸ್ತಾ?
ಕೇಳಿಸ್ತಾ?" ಎಂದು ಕೂಗಿ ನುಡಿದ.
ಮಾತುಕತೆಯನ್ನು ಅರ್ಥ ಮಾಡಿಕೊಳ್ಳಲೆತ್ನಿಸುತ್ತ ರಾಮೆರಿಪ್‌‌‌‌‍ಟಾ
ಜೊತೆ ನೆಫಿಸ್ ಹಿತ್ತಲ ಬಾಗಿಲ ಬಳಿ ನಿಂತಿದ್ದಳು.
"ಏನಾಗ್ತಿದೆ ಇಲ್ಲಿ?" ಎಂದು ಕೇಳುತ್ತ ಸೆಬೆಕ್ಖು ಒಳಬಂದ.
"ನಿನ್ನನ್ನು ಬರ ಹೇಳ್ಬೇಕು ಅನ್ನುವಷ್ಟರಲ್ಲಿ ನೀನೇ ಬಂದ್ಬಿಟ್ಟಿ,"
ಎಂದು ಸ್ನೊಫ್ರು ಸಂತಸ ಸೂಚಿಸಿದ.
ಮೆನೆಪ್‌ಟಾ ವಿವರಿಸಿ ಹೇಳಿದುದನ್ನು ಕೇಳಿ, ಸೆಬೆಕ್ಖು ಒಂದು ಕ್ಷಣ
ಸುಮ್ಮನಿದ್ದ. ಬಳಿಕ ಅಂದ:
"ಪೆರೋ ಒಪ್ತಾರಾ?"