ಪುಟ:Mrutyunjaya.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೪ ಮೃತ್ಯುಂಜಯ

ಪತಿಯ ಶವ ಗುಡಿಸಲು ತಲಪಿದೊಡನೆ, ನಿದ್ದೆಯಲ್ಲಿ ಚಲಿಸುವ ಹಾಗೆ
ಅದರ ಹಿಂದೆ ನಡೆದು ಬಂದ ಅನ್ಪುವಿನ ವಿಧವೆ ಛಾವಣಿ ಬಿರಿಯುವಂತೆ ರೋದಿಸ
ತೊಡಗಿದಳು.
ಗದರಿಸುವ ಧ್ವನಿಯಲ್ಲಿ ಸೆಬೆಕ್ಖು ನುಡಿದ :
"ಸೈರಿಸಿಕೋ ಸೈರಿಸಿಕೋ. ಮೊಸಳೆ ಬಾಯಿಗೆ ಬಿದ್ದೋ ಕಾಡು
ಹಂದಿ ಗುಮ್ಮಿಯೋ ನಿನ್ನ ಗಂಡ ಸತ್ತಿದ್ದರೆ ಇಷ್ಟೊಂದು ಜನ ಸೇರ್‍ತಿದ್ರಾ ?
ಈಗ ನೋಡು ಇದೂ ದೊರೆಮಗನ ಮರಣ. ನೀನು ಕಣ್ಣೀರು ಸುರಿಸ್ಬಾರ್‍ದು.
ಹೆಮ್ಮೆ ಪಡ್ಬೇಕು.”
ದೊರೆಮಗನ ಮರಣಕ್ಕೆ ಸಮಾನ ನಿಜ. ಆದರೆ ಈ ಬಡವನ ಶವದ
ರಕ್ಷಣೆಗಾಗಿ ಲೇಪನ ಕ್ರಮಗಳಿರಲಿಲ್ಲ. ಮೊದಲೇ ನಿರ್ಮಿಸಿದ ಗೋರಿ
ಇರಲಿಲ್ಲ.
ಅಪೆಟ್‌‌‌ನಿಗೆ ಕರೆ ಹೋಯಿತು.
ಆತ ಬಂದ. ಜನ ಸಮ್ಮರ್ದದೆದುರು ತನ್ನ ಹಿರಿಮೆ ಕುಗ್ಗಿ ಹೋಗದಂತೆ
ಗಾಂಭೀರ್ಯದ ಮುಖವಾಡವನ್ನು ಬಿಗಿಗೊಳಿಸಿ ಅವನೆಂದ :
"ಒಳ್ಳೆಯವನು. ದೇವರು ಕರೆಸಿಕೊಂಡ,"
ಮನೆಪ್‌ಟಾ ಅಪೆಟ್‌ನನ್ನು ಪ್ರಶ್ನಿಸಿದ :
"ಬೆಳಕಿಗೆ ಆಗಮನ; ಪುಸ್ತಕದ ವಿಷಯ ಕೇಳಿದ್ದೇನೆ. ನಿಮ್ಮಲ್ಲಿ ಅದು
ಇದೆಯೆ?”
"ಒಂದು ಪ್ರತಿ ಇದೆ.”
"ಉಳಿದ ಸಿದ್ಧತೆ ಆಗೋ ತನಕ ಅದರ ಪಠಣ ಮಾಡಬಹುದಲ್ಲ ?”
“ಅದು ರಾಜಯೋಗ್ಯವಾದ ಕ್ರಮ. ಇಷ್ಟರವರೆಗೆ ರೂಢಿಯಲ್ಲಿದ್ದುದು
ಮಂತ್ರೋಚ್ಚಾರ ಮಾತ್ರ. ನೀವೆಲ್ಲ ಅಪೇಕ್ಷೆ ಪಡೋದಾದ್ರೆ...”
"ಹ್ಞ__ಹ್ಞ__ ಪುಸ್ತಕ ತರೋದಕ್ಕೆ ದೇವಮಂದಿರಕ್ಕೆ ಯಾರನ್ನಾ
ದರೂ ಕಳಿಸೋಣವಾ ?”
ಅಪೆಟ್ ಅತ್ತಿತ್ತ ನೋಡಿದ. ಗುಂಪನ್ನು ಭೇದಿಸಿಕೊಂಡು, ತಲೆ
ಗೂದಲು ಬೋಳಿಸಿದ್ದ ಹುಡುಗನೊಬ್ಬ ಮುಂದೆ ಬಂದ. ಆತ ಅಪೆಟ್‌‌ನ