ಪುಟ:Mrutyunjaya.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೧೦೫

ಮಗ-ಮರಿದೇವ ಸೇವಕ.
ತಂದೆ ನಿರ್ದೆಶವಿತ್ತ. “ಬೆಳಕಿಗೆ ಆಗಮನ' ಪುಸ್ತಕ ಬೇಕು. ಗರ್ಭ
ಗುಡಿ ಪಕ್ಕದಲ್ಲಿ ಸಣ್ಣ ಪೆಟಾ ಇದೆಯಲ್ಲ ಅದನ್ನು ತಗೊಂಡ್ಬಾ”
'ಗೊತ್ತು' 'ಆಗಲಿ' ಎನ್ನುವಂತೆ ಹುಡುಗ ತಲೆ ಆಡಿಸಿ, ಮೊಣಕೈ
ಗಳಿಂದ ತಿವಿದು ದಾರಿ ಬಿಡಿಸಿಕೊಳ್ಳುತ್ತ ಓಡಿದ.
ಊರಿನ ಹಿರಿಯ ಬಡಗಿ ಸೆತ್ನಾ ಅಲ್ಲಿಯೇ ಇದ್ದ.

"ಅನ್ವು ನಮ್ಮ ಬಂಧು. ಅವನ ಶವಪೆಟ್ಟಿಗೆ ಮಾಡಿದ್ದಕ್ಕೆ ನನಗೆ ಕೊಡಬೇಕಾಗಿಲ್ಲ,” ಎಂದು ಭಾವೋದ್ವೇಗದಿಂದ ನುಡಿಯುತ್ತ, ಶವದ ಅಳತೆ ತೆಗೆದುಕೊಂಡು ಸೆತ್ನಾ ಅಲ್ಲಿಂದ ಮಾಯವಾದ.

ಸುಗಂಧ ದ್ರವ್ಯಗಳನ್ನು ತರಿಸಿ, ಶವದ ಬಳಿ ಹಚ್ಚಿಟ್ಟರು.

ದರಿದ್ರರಿಗೆಲ್ಲಿಯ ಶವಪೆಟ್ಟಿಗೆ ? ಸಾವು ಬಂದಾಗ, ಬಟ್ಟೆಯ ತುಣುಕಿನ
ಜೊತೆ ಅವರು ಮಣ್ಣಾಗಬೇಕು. ಆದರೆ ಅನ್ವುವಿಗೀಗ ಶವಪೆಟ್ಟಿಗೆ ! ಜನ
ಸಮುದಾಯದಲ್ಲೆಲ್ಲ ಪಿಸುದನಿಯಲ್ಲಿ ಆ ಪದ ಸುಳಿದಾಡಿತು."ಶವಪೆಟ್ಟಿಗೆ !”

"ಶವಪೆಟ್ಟಿಗೆ !”
ತಡವಿಲ್ಲದೆ ಶೋಕಸ್ತ್ರೀಯರೂ ಬಂದು ನೆರೆದರು;« ಓ ಅನ್ವು ಓ ಅನ್ವು ” ಎಂದು ಅವರು ಅಳತೊಡಗಿದರು.

ದೇವ ಮಂದಿರದಿಂದ ಪೆಟಾರಿ ಬಂದೊಡನೆ, ಅರ್ಚಕ ಉಟ್ಟಿದ್ದ ಬಟ್ಟೆ ಯನ್ನು ಒದ್ದೆ ಮಾಡಿ ಪುನಃ ಅದನ್ನೇ ಉಟ್ಟು ಬಂದ ಜನರನ್ನು ಹಿಂದಕ್ಕೆ ಸರಿಸಿ ಜಾಗ ಮಾಡಿಕೊಂಡು, ಪೆಟಾರಿಯ ಮುಂದೆ ಆಸೀನನಾದ. ಪೆಟಾರಿ ಯಿಂದ ಹೊರಬಂದುದು, ಹಾಳೆಗಳನ್ನು ಜೋಡಿಸಿ ಹೊಲಿಗೆ ಹಾಕಿದ್ದ ನೀಳಾ ಕಾರದ ಪುಸ್ತಕ.

ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದ ಅಪೆಟ್‌ಗೆ ಹಿಂದಿನ ರಾತ್ರೆ ಸಾಕಷ್ಟು ನಿದ್ರೆ ಇರಲಿಲ್ಲ.ಬಳಲಿಕೆ ಮುಖದ ಮೇಲೆ ಎದ್ದು ಕಾಣುತ್ತಿತ್ತು. ಆದರೂ ಗುಡಿಸಲಿನ, ಮಬ್ಬು ಬೆಳಕಿಗೆ ತನ್ನ ದೃಷ್ಟಿಯನ್ನು ಹೊಂದಿಸಿ ಕೊಂಡು, 'ಬೆಳಕಿಗೆ ಆಗಮನ ' ಪುಸ್ತಕದ ಹಾಳೆ ತೆರೆದು ರಾಗವಾಗಿ ಆತ ಓದತೊಡಗಿದ: