ಪುಟ:Mrutyunjaya.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

೧೦೬

"ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ బಳಿ
ಮೃತನು ಈಗ ನಿ೦ತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ! ಮಹಾದೇವನೆ ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದುರು బంದು ನಿ೦ತಿದೇನೆ ನಾನು. నిನ್ನ ಸೌಂದರ್ಯಾತಿಶಯವನ್ನು ಕಾಣಲೆ೦ದು ನನ್ನನ್ನುಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತ೦ತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ, ನಾನೆ೦ದೂ ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಿಮೆ ಮಾಡಿಲ್ಲ. ದೇವರ ನೈವೇದ್ಯವನ್ನೆ೦ದೂಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ, ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ.ಎದೆಹಾಲಿನ ಮಕ್ಕಳ ಬಾಯಿ೦ದ ಹಾಲನ್ನು ಕಸಿದಿಲ್ಲ, ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ...ನಾನು ಪರಿಶುದ್ಧ...ನಾನು ಪರಿಶುದ್ಧ.” ಸುತ್ತಲೂ ಇದ್ದವರನ್ನು ನೋಡಿ ಅಪೆಟ್,"ಹೇಳಿ ನಾನು ಪರಿಶುದ್ಧ ಅ೦ತ ಮೂರು ಸಲ ಹೇಳಿ," ಎ೦ದ. ಮೆನೆಪ್ ಟಾನ ಆದಿಯಾಗಿ,ಅಪೆಟ್ ನ ಮಾತು ಕೇಳಿಸಿದವರೆಲ್ಲ ಅ೦ದರು: “ ನಾನು ಪರಿಶುದ್ಧ...ನಾನು ಪರಿಶುದ್ಧ.ನಾನು ಪರಿಶುದ್ಧ.” ಹೊರಗೆ ನಿ೦ತಿದ್ದವರ ಕಿವಿಗೂ ಅದು ಬಿತ್ತು, ಅವರೂ ಅದನ್ನು ಪುನ ರುಚ್ಚರಿಸಿದರು.... ತಾನು ಸೃಷ್ಟಿಸಿದ ವಾತಾವರಣ ಕ೦ಡು ಅಪೆಟ್ ಉಲ್ಲಾಸಗೊ೦ಡ.