ಪುಟ:Mrutyunjaya.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೧೦೭

ಹಾಳೆ ಮಗುಚಿ, ಕಣ್ಣಾಲಿಗಳನ್ನು ಉರ್ಧ್ವಮುಖವಾಗಿ ಹೊರಳಿಸಿ,
ಧ್ವನಿ ಏರಿಸಿ ಅವನು ಮು೦ದುವರಿದ :
"ಅನ್ಪು ಹೆಬ್ಬಾಗಿಲನ್ನು ಹೊಕ್ಕು ನೆಲಮಾಳಿಗೆ ತಲುಪಿದಾಗ, ದೈತ್ಯ
ಗಾತ್ರದ ಭೀಕರ ರೂಪದ ಹನ್ನೆರಡು ಪ್ರಾಣಿಗಳು ಅವನಿಗೆ ಎದುರಾಗುತ್ತವೆ.
ಅವುಗಳತ್ತ ದೃಷ್ಟಿ ಹರಿಸಿ ಅನ್ಪು ಹೇಳಬೇಕು:
"ಉಘೇ ! ದೇವರ್ಮಕ್ಕಳೇ ! ನಿಮ್ಮನ್ನು ನಾನು ಬಲ್ಲೆ. ನಿಮ್ಮ
ಹೆಸರುಗಳೂ ನನಗೆ ಗೊತ್ತಿವೆ. ಹೊಡೆತಗಳಿಂದ ನನ್ನನ್ನು ನೀವು ಕೆಡವಬೇಡಿ.
ನೀವು ಅನುಸರಿಸುವ ಹಿರಿಯ ದೇವರಿಗೆ ನನ್ನೊಳಗಿರುವ ಕೆಡುಕನ್ನು ವರದಿ
ಮಾಡಬೇಡಿ :
"ಆಗ ಒಂದು ವಾಣಿ ಕೇಳಿಬರುತ್ತದೆ : "ಯಾರಪ್ಪ ನೀನು ? నిನ್ನ
ಹೆಸರೇನು?"
"ಅನ್ಪು ಉತ್ತರವೀಯಬೇಕು: ಹುಲ್ಲಿನ ಕೆಳಗೆ ಬೆಳೆಯುವಾತ
ನಾನು, ಜೀವವೃಕ್ಷದ ನಿವಾಸಿ___ಅ೦ತ ನನ್ನ ಹೆಸರು."
"ವಾಣಿ: 'ಅದನ್ನು ದಾಟಿ ಹೋಗು.'
"ಅನ್ಪು: 'ಜೀವವೃಕ್ಷದ ಉತ್ತರದಲ್ಲಿರುವ ಸ್ಥಳ ತಲಪಿದೆ.'
"ವಾಣಿ: 'ಅಲ್ಲಿ ಏನು ನೋಡಿದೆ?'
"ಅನ್ಪು: 'ಒ೦ದು ತೊಡೆ ಒ೦ದು ಕಾಲು'
"ವಾಣಿ: 'ಅವು ನಿನಗೆ ಏನು ಹೇಳಿದುವು ?'
"ಅನ್ಪು: 'ಅಲ್ಲಿ ಫೆಹ್ ಖುವಿನ ರಾಜ್ಯದಲ್ಲಿ ಸ್ವಾಗತ ಕಾದಿದೆ
ಎ೦ದವು'
"ವಾಣಿ: 'ಅವು ನಿನಗೆ ಏನು ಕೊಟ್ಟವು?'
"అನ್ಪು: 'ಅಗ್ನಿಯ ಒ೦ದು ಜ್ವಾಲೆ ಮತ್ತು ಸ್ಫಟಿಕದ ಒ೦ದು ಕ೦ಬ.
"ವಾಣಿ: 'ನೀನು ಅವನ್ನೇನು ಮಾಡಿದೆ?'
"ಅನ್ಪು: 'ಸ೦ಜೆಯ ಬುತ್ತಿ ಅ೦ತ ಮಾಯಿಟ್ ತಟಾಕದ ದಡದಲ್ಲಿ
ಹೂಳಿದೆ'
"ವಾಣಿ: 'ಹೂಳಿದ ಮೇಲೆ ಬೆ೦ಕಿಯ ಜ್ವಾಲೆಗೂ ಸ್ಫಟಿಕದ