ಪುಟ:Mrutyunjaya.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೮ ಮೃತ್ಯು೦ಜಯ

ಕಂಬಕ್ಕೂ ಏನು ಮಾಡಿದೆ?'
“ಆನ್ಪು :'ನಾವು ಅವನ್ನು ಕೂಗಿ ಕರೆದೆ, ಹೊರಕ್ಕೆಳೆದೆ. ಕಂಬವನ್ನು ಒಡೆದು ಒಂದು ಕೊಳ ಮಾಡಿದೆ' “ವಾಣಿ :'ನೀನು ನಮ್ಮನ್ನು ಬಲ್ಲೆಯಾದ್ದರಿ೦ದ, ಧರ್ಮಭವನದ ದ್ವಾರದ ಮೂಲಕ ನೀನಿನ್ನು ಒಳಕ್ಕೆ ಬರಬಹುದು..' “ ಹೀಗೆ ನಿಗೂಢ ಪ್ರಶ್ನೆಗಳಿಗೆ ನಿಗೂಢ ಉತ್ತರ ನೀಡಿ ನೇಕಾರ ಅನ್ಪು - ಒಸೈರಿಸ್ ದೇವತೆಯ ಆಸ್ಥಾನ ತಲುಪುತ್ತಾನೆ....
"ನ್ಯಾಯಮೂರ್ತಿಯ ಆಸ್ಥಾನ ತಲುಪಿದರೂ ಸಾನಿಧ್ಯ ಲಭಿಸಿಲ್ಲ– ಅನ್ನುವಿಗೆ....ಅದು ಸಾಧ್ಯವಾಗಬೇಕಾದರೆ ಇನ್ನೊದು ಪರೀಕ್ಷೆಯಲ್ಲಿ ಅನ್ನು ಉತ್ತೀರ್ಣನಾಗಬೇಕು. ಆ ಪರೀಕ್ಷೆ ನಡೆಸುವವನು ಅನೂಬಿಸ್. ಅವನ ತಕ್ಕಡಿಯ ಬಲತಟ್ಟೆಯಲ್ಲಿ ಒಂದು ಗರಿ, ಅನ್ಪುವಿನ ಗು೦ಡಿಗೆಯನ್ನು ಎಡ ತಟ್ಟೆಯಲ್ಲಿಡುತ್ತಾರೆ. ತಕ್ಕಡಿ ನೀಡುವ ನಿರ್ಣಯವನ್ನು ಥೊಥ್ ಬರೆದಿಡುತ್ತನೆ. ಗುಂಡಿಗೆ ಗರಿಗೆ ಸಮತೂಕವಾಯಿತೋ ಅನ್ಪು ಮುಂದೆ ಸಹಸ್ರಾರು ವರ್ಷಬಾಳುತ್ತಾನೆ.ಗು೦ಡಿಗೆ ಭಾರವಾಯಿತೋ ಅಲ್ಲಿಯೇ ಮೊಸಳೆಗಳಿಗೆ ಆಹಾರವಾಗುತ್ತಾನೆ....”
ಏರುತ್ತಿದ್ದವರನ್ನು ಹಿಂದಕ್ಕೆ ಜಗ್ಗಿದ ಅನುಭವವಾಯಿತು. ಅಪೆಟ್ ನ ಶ್ರೋತೃಗಳಿಗೆ ಉಸಿರು ಕಟ್ಟಿಸುವ ವಾತಾವರಣದಲ್ಲಿ ಮೆನೆಪ್ ಟಾ ಮುಗುಳು ನಕ್ಕ. ಆದನ್ನು ಗಮನಿಸಿದ ಅಪೆಟ್,ತುಸು ಕಸಿವಿಸಿಗೊ೦ಡು, ನೇರ ಧ್ವನಿಯಲ್ಲಿ ನುಡಿದ:
" ಭಕ್ತ ಜನ ಏನೂ ಚಿಂತಿಸಬೇಕಾಗಿಲ್ಲ, ಅನ್ನು ಮೊಸಳೆಗಳಿಗೆ ಆಹಾರವಾಗುವುದಿಲ್ಲ. ಈ ಪವಿತ್ರ ಗ್ರಂಥ ವಾಚನದ ಫಲವಾಗಿ ಪರಲೋಕದ ಪರೀಕ್ಷೆಯಲ್ಲಿ ಅವನು ಉತ್ತೀರ್ಣನಾಗುತ್ತಾನೆ.”
ಶವದ ಬಳಿ ಕುಳಿತಿದ್ದ ಮೃತನ ವಿಧವೆ ಇದ್ದಕ್ಕಿದ್ದ೦ತೆ ಚೀರಿದಳು :
" ನನ್ನ ಗಂಡ ಸತ್ತಿಲ್ಲ, ಸತ್ತಿಲ್ಲ...”
ಹಾಗೆ ಹೇಳುತ್ತ ಕೈಗಳನ್ನು ಚಾಚಿ ಅವಳು ಶವದ ಮೇಲೆ ಬಿದ್ದಳು. ಅವಳನ್ನು ಹಿಡಕೊಳ್ಳಿ!"ಎ೦ದು ಅಪೆಟ್ ಕೂಗಿ ನುಡಿದ.