ಪುಟ:Mrutyunjaya.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೧೦೯

ಅಲ್ಲೇ ನಿಂತಿದ್ದ ಕೆಲವರು ಆಕೆಯನ್ನು ತಡೆದರು.
ಅಪೆಟ್ 'ಬೆಳಕಿಗೆ ಆಗಮನ' ಪುಸ್ತಕವನ್ನು ಪೆಟಾರಿಯಲ್ಲಿಟ್ಟು, ಅದರ
ಬಾಗಿಲು ಮುಚ್ಚಿ, ಎದ್ದು ನಿಂತು ನಿರ್ದೇಶವಿತ್ತ :
"ಎಲ್ಲರೂ ಮೂರು ಸಲ ಹೇಳಿ, ನಾನು ಪರಿಶುದ್ಧ !"
ಜನ ಅಂದರು :
"ನಾನು ಪರಿಶುದ್ಧ ! ನಾನು ಪರಿಶುದ್ಧ ! ನಾನು ಪರಿಶುದ್ಧ !"
ಹೊರಗಿನ ಜನರೂ ಪದದ ಎಳೆಯನ್ನೆತ್ತಿಕೊಂಡು ಪುನರುಚ್ಚರಿಸಿದರು.
"ಎಲ್ಲಿ ಶವಪೆಟ್ಟಿಗೆ ?"
___ಅಪೆಟ್ ಕೇಳಿದ.
ಸೆತ್ನಾ ಆಗಲೇ ನುಸುಳಿಕೊಂಡು ಒಳಗೆ ಬಂದಿದ್ದ. ಯಾರಾದರೂ
ಸಿರಿವಂತರ ಮನೆಗೆ ಬೇಕಾಗಬಹುದೆಂದು, ಮೊದಲೇ ಸಿದ್ಧಗೊಳಿಸಿದ್ದ ಹಲಗೆ
ಗಳಿದ್ದುವು. ಸಂದಿ ಕೀಲಿಗಳನ್ನಿರಿಸಿ ಹಲಗೆಗಳನ್ನು ಜೋಡಿಸಿ, ಸ್ವಲ್ಪ
ಸಮಯದಲ್ಲೇ ಪೆಟ್ಟಿಗೆಯನ್ನು ಸೆತ್ನಾ ತಯಾರಿಸಿದ್ದ. ಈಗ ಆವನು ಸನ್ನೆ
ಮಾಡಿದೊಡನೆಯೇ ಆತನ ಸಹಾಯಕ ಶವಪೆಟ್ಟಿಗೆಯನ್ನು ಗುಡಿಸಿಲಿನ ಒಳಕ್ಕೆ
ತಂದ. ಅಪೆಟ್‍ನ ಪವಿತ್ರ ಗ್ರಂಥ ವಾಚನದಷ್ಟೇ ಮಹತ್ವದ್ದು ಈ ಪೆಟ್ಟಿಗೆ
ಕೂಡಾ ಎನ್ನುವ ಹಾಗೆ, ಸೆತ್ನಾ ಸಂತೃಪ್ತಭಾವದಿಂದ ನಿಂತ.
ಕೊನೆಯ ಪಯಣಕ್ಕೆ ಅನ್ಪುವನ್ನು ಅಣಿಗೊಳಿಸುತ್ತಿದ್ದಂತೆ ಶೋಕ
ಸ್ತ್ರೀಯರ ಆರ್ತನಾದ ಮತ್ತೆ ಮೊರೆಯಿತು.
ಕಲ್ಲಿನ ಒಂದು ಪಾತ್ರೆಯಲ್ಲಿ ಒಂದಿಷ್ಟು ರೊಟ್ಟಿ ಚೂರುಗಳನ್ನಿರಿಸಿದರು__
ಶವದ ಜತೆ ಮಣ್ಣು ಮಾಡ‍ಲೆಂದು.
ಖ್ನೆಮ್ ಹೊಟೆಪ್ ನಾಲ್ವರನ್ನು ಕರೆದುಕೊಂಡು ನೆಲ ತೋಡುವು
ದಕ್ಕೋಸ್ಕರ ಗೋರಿಪ್ರದೇಶಕ್ಕೆ ನಡೆದ.

****

ಮೆನೆಪ್‍ಟಾ, ಸ್ನೊಫ್ರು, ಸೆಬೆಕ್ಖು ಪರಸ್ಪರ ಮಾತನಾಡಿ ಖ್ನೆಮ್
ಹೊಟೆಪ್‍ಗೆ ತಿಳಿಸಿದರು. ಗೋರಿ ಪ್ರದೇಶದಿಂದ ಜನ ಚೆದುರುವುದಕ್ಕೆ ಮುನ್ನ
ಆತ ಗಟ್ಟಿಯಾಗಿ ಹೇಳಿದ :