ಪುಟ:Mrutyunjaya.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್‍ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್‍ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."


ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್‍ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆ‍ಮ್‍ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."


ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.