ಪುಟ:Mrutyunjaya.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಮೃತ್ಯುಂಜಯ ... ನಮಗಾಕಪ್ಪ ಪೀಠಗೀಠ ? ಅವೆಲ್ಲ ಪೆರೋನ ರಾಣೀವಾಸದವರಿಗೆ. ಚಾಪೆ ಸಾಕು. ಬೇರೆ ಹೆಂಗಸರ ಹಾಗೆ ನಾವೂನೂ.” ಅಲ್ಲಿ ನೆರೆದಿದ್ದ ಎಲ್ಲರ ದೃಷ್ಟಿಗಳೂ ನೆಫಿಸಳತ್ತ ನೆಜಮುಟಳತ್ತ ಹರಿದುವು. ಸ್ತ್ರೀಯರು ಅತ್ತಿತ್ತ ಒತ್ತಿಕೊಂಡು ಎದುರು ಸಾಲಿನಲ್ಲೇ ಅವರಿಗೆ ಸ್ಥಳ ಮಾಡಿಕೋಟ್ಟರು. "ರಾಮೆರಿ" "ರಾಮೆರಿ" ಎಂದು ಹಲವು ಹುಡುಗರ ಕಂಠಗಳಿಂದ ಕರೆ ಬಂತು. ರಾಮೆರಿಪ್ಟಾ ಅತ್ತ ಓಡಿದ.

 ಸೂರ್ಯ ಇಳಿಮುಖನಾಗುತ್ತಲೇ ಕಿರಣಗಳ ಪ್ರಖರತೆ ಕಡಿವೆುಯಾಯಿತು. ಜನರಿಂದ ಬಯಲು ತುಂಬಿತು. ಆ ಮುದುಕರ ಜೊತೆ ಇನ್ನೂ ಮಾತನಾಡುತ್ತ ಕುಳಿತಿರುವರೇನೋ ಎಂದು ಖೈಮ್ ಹೊಟೆಪ್ ತನ್ನೊಳಗೇ ರೇಗಿದ. ಬೇಟೆಯ ಯುವಕ ಮಿತ್ರರು ಕೆಲವರು ಅವನ ಸುತ್ತಮುತ್ತ ಸುಳಿದರು. ಜನ ಕಾಯುತ್ತಿದ್ದಾರೆ ಎಂದು ಸುದ್ದಿ ಮುಟ್ಟಿಸಲು ಇವರಲ್ಲಿ ಒಬ್ಬನನ್ನು ಕಳುಹಲೇ–ಎಂದುಕೊಂಡ. ಕರೆಯಲು ಕೈ ಎತ್ತುವಷ್ಟರಲ್ಲಿ, ಮೆನೆಪ್ಟಾ ಬಳಗ ದೂರದಲ್ಲಿ ಕಾಣಿಸಿತು.
  • ಬರ್ತಿದ್ದಾರೆ !” ಎಂದು ಖೈಮ್ ಹೊಟೆಪ್ ಉದ್ಗರಿಸಿದ.

ಉದಾರ ಕೇಳಿಸದಿದ್ದರೂ, ಖ್ನೆಮ್ ಹೊಟಿಪ್ನ ನೋಟಿ ನೆಟ್ಟ ಕಡೆಗೆ ನೂರಾರು ಜನ ದೃಷ್ಟಿ ಹರಿಸಿದರು. ನೋಡಿದವರು ಎದ್ದರು; ನೋಡದೆ ಇದ್ದವರು ಎದ್ದರು.

  • ನಾವು ಏಳೋಣ, ನೆಜಮುಟ್," ಎಂದಳು ನೆಫಿಸ್.
  • ಸರಿಯಮ್ಮ,” ಎಂದಳಾಕೆ.

ತಾವು ಕಂಡ ಪವಾಡಕ್ಕೆ ಕಾರಣರಾದವರನ್ನು ಸರಿಯಾಗಿ ನೋಡಲು ಇಡಿಯ ಜನಸ್ತೋಮ ಎದ್ದು, ತುದಿಗಾಲ ಮೇಲೆ ನಿಂತು, ಕತ್ತನ್ನು ನೀಳ ಗೊಳಿಸಿತು. ಮೆನೆಪ್ಟಾ ತಲೆಗೂದಲನ್ನು ಎಡಬಲ ಬದಿಗಳಿಗೆ ಇಳಿಬಿಟ್ಟಿದ್ದ. ನಡು ಬಟ್ಟಿ ಶುಭ್ರವಾಗಿತ್ತು. ಪಾದರಕ್ಷೆ ತೊಟ್ಟಿರಲಿಲ್ಲ. ಮೈ ಮೇಲಿನ ಗಾಯ ಗೆರೆಗಳು ಎದ್ದುಕಾಣಿಸುತ್ತಿದ್ದುವು. ಆತ್ಮ ವಿಶಾಸ ಸೂಸುತ್ತ, ಮುಗುಳು