ಪುಟ:Mrutyunjaya.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

ಮಂದಹಾಸ ಬೀರಿ,"ಆಗಬಹುದಲ್ಲ," ಎಂದ ಆತ.
ದೋಣಿ ದಂಡೆಯನ್ನು ಮುಟ್ಟಿತು.
ಪಯಣದುದ್ದಕ್ಕೂ, ದಕ್ಷಿಣಾಭಿಮುಖವಾದ ಪವನ ಹಾಯಿಯನ್ನು
ತುಂಬಿ, ದೋಣಿಯ ಚಲನೆಗೆ ನೆರವಾಗಿತ್ತು. ಕ್ರಮಿಸಲು ಇನ್ನು ಉಳಿದದ್ದು
ಕೂಗಳತೆಯ ದೂರ ಮಾತ್ರ.
"ಹಾಯಿ ಇಳಿಸಿ!"
__ಬಟಾ ಆಜ್ಞಾಪಿಸಿದ.
ಇಬ್ಬರು ನೌಕರರು ಆ ಆಜ್ಞೆಯನ್ನು ಪಾಲಿಸಲು ಉದ್ಯುಕ್ತರಾದರು.
ಇನ್ನಿಬ್ಬರು ದಂಡೆಗೆ ಧುಮುಕಿ,ಗಾತ್ರದೊಂದು ಕಲ್ಲಿಗೆ ದೋಣಿಯನ್ನು
ಕಟ್ಟಿದರು.
ಹುಡುಕುತ್ತಿದ್ದುದು ದೊರೆತಾಗ ಎಳೆಯ ಮಗು ಅಳು ನಿಲ್ಲಿಸಿ, ಬಾಯಿ
ಚಪ್ಪರಿಸತೊಡಗಿತು....
....ಪ್ರವಾಸಿಗರು ದೋಣಿಯತ್ತ ಮರಳುತ್ತಿದ್ದಂತೆ, ಎಡಗಡೆ ಪೂರ್ವದ
ಮರಳುಗಾಡಿನಾಚೆ ದಿಗಂತದಿಂದ ಕೆಂಪಿನ ಸೂರ್ಯಗೋಲ ಉದಿಸತೊಡಗಿತು.
ಮೆನೆಪ್ಟಾ, ನೆಫಿಸ್, ಅವರ ಮಗ ಮತ್ತಿತರ ಎಲ್ಲರೂ ದಂಡೆಯ ಮೇಲೆ
ಮಂಡಿಯೂರಿ ಸೂರ್ಯದೇವನಿಗೆ ವಂದಿಸಿದರು.
ದೋಣಿ ಮತ್ತೆ ನದಿಯ ದಾರಿಯನ್ನು ಹಿಡಿಯಿತು. ಪ್ರಯಾಣ ಸುಖ
ಕರವಾಗಿ ಕೊನೆಗಾಣುತ್ತಿದೆ ಎಂದು ಎಲ್ಲರಿಗೂ ಸಂತಸ. ಅವರ ಭಾವನೆಗೆ
ಧ್ವನಿ ನೀಡುತ್ತ ಹುಟ್ಟು ಹಾಕುತ್ತಿದ್ದವರು ಹಾಡಿದರು :
“ ಓ ನದ ನೀಲ ಓ ಖ್ನೆಮು ದೇವ
ఓ ನೀಲ ಐಸಾ ಓ ಖ್ನೆಮು ಐಸಾ
ತಟಗಳಿಗೆ
ಹಸಿರು ಬಳೆವ
ಚಿತ್ರಕಾರ !
ಓ ನೀಲ ಐಸಾ ಓ ಖ್ನೆಮು ಐಸಾ
ಈ ಬಸಿರು