ಪುಟ:Mrutyunjaya.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಪ್ರಾಂತಪಾಲರ ದಂಡವೇ.” "ಛೆ! ಛೆ! ಪೆಪೈರಸ್ ಕೋಲು." "ಕಾಪೀರು ಹಿಡಿಯುವಂಥಾದ್ದು?" "ಹ್ಞ...ಕಾಪೀರು ದಳಪತಿ ಆಂಥವರ ಕೈಯಲ್ಲಿ ಇರುತ್ತಲ್ಲ?" "ತಿಳೀತು." "ಹಾಗೇ ಒಂದು ಕಠಾರಿ." "ತರ್ತೇನೆ." ಇದನ್ನು ಮೆನೆಪ್ಟಾ ಧರಿಸುವುದು ಹೇಗೆ ಸರಿ-ಎಂದುಕೊಳ್ಳುತ್ತ, ಇಪ್ಯುವರ್ ಮಹಾದ್ವಾರವನ್ನು ದಾಟಿ ಒಳಹೋದ.ಅಲ್ಲಿದ್ದ ಸೇವಕರಿಗೆ ತನ್ನ ಹಿಂದೆ ಬರುವಂತೆ ಸನ್ನೆ ಮಾಡಿದ. ಮೆನೆಪ್ಟಾ ಹೆಂಗಸರ ಗುಂಪಿನತ್ತ ನೋಡಿದ.ಮೊದಲ ಸಾಲಿನಲ್ಲಿದ್ದ ನೆಫಿಸ್ ಕಣ್ಣಿಗೆ ಬಿದ್ದಳು. ಆ ಜನಸಮುದಾಯದ ಎದುರಲ್ಲಿ ಗಂಡ ತನ್ನನ್ನು ಕಂಡನೆಂದು (ಮುಗುಳುನಕ್ಕನೆಂದು) ನೆಫಿಸ್ ನಾಚಿದಳು. ಸೆಬೆಕ್ಖುವಿನ ಪತ್ನಿ ತಬಬುವಾ ಮತ್ತು ಅವರ ಮಗಳು ಸಭಾಪ್ರದೇಶಕ್ಕೆ ಬರುತ್ತಿದ್ದುದು ಮೆನೆಪ್ಟಾಗೆ ಕಾಣಿಸಿತು. ಆತ ಖ್ನೆಮ್ ಹೊಟೆಪ್‍ನ ಕಡೆ ತಿರುಗಿ "ನಿನ್ನ ಹೆಂಡತಿ,ಅತ್ತೆ ಬರ್ತಿದ್ದಾರೆ. ಕರಕೊಂಡು ಬಾ,” ಎಂದ. ಖ್ನೆಮ್ ಮಾತ್ರ, ಆ ಮಾತು ತನಗೆ ಕೇಳಿಸಲೇ ಇಲ್ಲ ಎನ್ನುವಂತೆ ಸುಮ್ಮನೆ ನಿಂತ. ತಬಬುವಾ ತನ್ನ ಮಗಳೊಡನೆ ದೂರದಲ್ಲೇ ಜಾಗ ಮಾಡಿಕೊಂಡಳು.ನೆಜಮುಟಳ ದೃಷ್ಟಿಗೆ ಅವರು ಬೀಳದಿರಲಿಲ್ಲ. ನೀರಿನ ವಿಷಯ ತಬಬುವಾ ಹೇಳಿದ್ದುದು ನೆನಪಾಗಿ, ನೆಜಮುಟ್ ಎದ್ದು ವೇದಿಕೆಯನ್ನು ಸಮೀಪಿಸಿದಳು. ಮೆನೆಪ್‍ಟಾನ బల ಮಗುಲಲ್ಲಿ ಕುಳಿತಿದ್ದ ಸ್ನೊಫ್ರು “ ಏನದು?” ಎಂದು ಗದರಿದ.ಗುಟ್ಟಾಗಿ ಕಿವಿಯಲ್ಲಿ ಹೇಳಿದರಾಯಿತು ಎಂದುಕೊಂಡಿದ್ದ ನೆಜಮುಟ್. ಆದರೆ ಗಂಡನ ಸಿಡುಕು, ಕಂಡು ಕೆರಳಿ ಗಟ್ಟಿಯಾಗಿ ಅಂದಳು :

  • ತಬಬುವಾ ಹೇಳಿದ್ದಾಳೆ, ನಮಗೆ ಮುಖ್ಯವಾಗಿ ಬೇಕಾದ್ದು ನೀರು. ನದಿ ನೀರು ಕಾಲುವೆಗಳಲ್ಲಿ ಸದಾ ಹರಿದು ಬರಬೇಕು. ಹರಿಯೋ ನೀರು ಇದ್ದರೇನೇ ಮನೆ-ಹಿತ್ತಿಲು ಚೊಕ್ಕಟವಾಗಿಡೋದು ಸಾಧ್ಯ ಹಾಂ. ನಿಮಗೆ ತಿಳಿಸಿದ್ದೇನೆ.”