ಅಷ್ಟು ಹೇಳಿ ನೆಜಮುಟ್, ಕತ್ತು ಕೊಂಕಿಸಿ ಸ್ವಸ್ಥಾನಕ್ಕೆ ಹೋದಳು.
ಮೆನೆಪ್‍ಟಾ ನಸುನಕ್ಕ. ಆಕೆಯ ಮಾತು ಕೇಳಿಸಿದ್ದು ಕೆಲವರಿಗೆ
ಮಾತ್ರ, ಆದರೂ ಕೆಲವೇ ಕ್ಷಣಗಳಲ್ಲಿ, ಇಲ್ಲದ ನೀರು ಸಭಾಂಗಣವನ್ನೆಲ್ಲ
ಆವರಿಸಿತು. ಗುಸು ಗುಸು ಸದ್ದು ತನ್ನ ಪ್ರಾಬಲ್ಯವನ್ನು ಮೆರೆಯಿತು.
ಒಮ್ಮೆಲೆ ಮೆನೆಪ್‍ಟಾ ಗಟ್ಟಿಯಾಗಿ,"ಮಹಾಜನರೇ"ಎಂದ.
“ನಮಗೆ ಕೇಳಿಸೋದಿಲ್ಲ” – ಎಂದರು, ಸಭೆಯ ಅಂಚಿನಲ್ಲಿದ್ದ
ಕೆಲವರು.
ಧ್ವನಿಯನ್ನು ಇನ್ನು ಎತ್ತರಿಸಿ ಮೆನೆಪ್‍ಟಾ ಅಂದ ಕುಳಿತಲ್ಲಿಂದಲೇ :
“ ನೀರಾನೆ ಪ್ರಾಂತದ ಮುಖ್ಯ ಪಟ್ಟಣದ ಮಹಾಜನರೇ ! ನಿಮಗೆ
ನಮ್ಮ ಪ್ರಣಾಮ. ನಮ್ಮ ಅಂದರೆ ಸ್ನೊಫ್ರು, ಸೆಬೆಕ್ಖು ಮತ್ತು ನನ್ನ
ಪ್ರಣಾಮ ಅಂತ (ಸಭೆಯಲ್ಲಿ ನಗೆ). ಸಭೆಯಲ್ಲಿ ಮಾತಾಡೋದಕ್ಕೆ ನನಗೆ ಒಂದು ಥರಾ. ನಿನ್ನೆ ಮನವಿ ಸಲ್ಲಿಸೋದಕ್ಕೆ ನಿಂತೆ.ನೀವೇ ನೋಡಿದಿರಲ್ಲ ಏನಾಯ್ತು ಅಂತ. ಅದಕ್ಕೋಸ್ಕರ ಕೂತ್ಕೊಂಡೇ ಮಾತಾಡ್ತಿದ್ದೇನೆ.(ಮತ್ತಷ್ಟು ನಗೆ) ಅಗೋ ಅರ್ಚಕರು ಬರ್ತಿದ್ದಾರೆ. (ಜನರ ದೃಷ್ಟಿ ಬಯಲನ್ನು ಸೇರುವ ದಾರಿಯತ್ತ) ಈಗ ಆಗಿರೋ ಪವಾಡಕ್ಕೆ ಜನರ ತ್ಯಾಗ ಕಾರಣ. ನಮ್ಮ ಅನ್ಪುವೀರ ಪ್ರಾಣವನ್ನೇ ತೆತ್ತ.ಅರ್ಚಕರ ಪ್ರಕಾರ,ನಾವು ಅನ್ಪುವಿಗೆ ಕೊಟ್ಟಿದ್ದು ರಾಜಯೋಗ್ಯವಾದ ವಿದಾಯ. ಅರ್ಚ್ಕರು'ಬೆಳಕಿಗೆ ಆಗಮನ' ಓದಿದ್ರು. ಆಸ್ಥೆ ವಹಿಸಿ ಗಾಯಗೊಂಡವರ ಚಿಕಿತ್ಸೆ ಮಾಡಿದ್ರು. ಎದ್ದುನಿಂತು ಅವರಿಗೆ ಗೌರವ ಸಲ್ಲಿಸೋಣ.”
ಇಡೀ ಸಭೆ ಎದ್ದು ನಿಂತಿತು. ಅಪೆಟ್ ಹಸನ್ಮುಖಿಯಾಗಿ, ಗೋಣು ಆಡಿಸುತ್ತ ವೇದಿಕೆಯತ್ತ ಸಾಗಿ, ಥಾನಿಸ್‍ನ ಮಗ್ಗುಲಲ್ಲಿದ್ದ ಪೀಠದ ಮೇಲೆ ಆಸೀನನಾದ. ಜನರೂ ಕುಳಿತರು.
(ಬಯಲಿನ ಸಭೆಯನ್ನು ದೂರದಿಂದಲೇ ಕಂಡು ಅಪೆಟ್‍ಗೆ ವಿಸ್ಮಯ ವಾಗಿತ್ತು. ಈ ಜನ ತನಗೆ ಗೌರವ ತೋರುವರೋ ಇಲ್ಲವೋ ಎಂಬ ಶಂಕೆ ಮೂಡಿತ್ತು. ದೇವಸೇವಕನಾದ ತನ್ನನ್ನು ಅಗೌರವದಿಂದ ಕಾಣಲಾರರು ಎಂದುಕೊಳ್ಳುತ್ತ ಬಂದ. ಹಾಗೇನಾದರೂ ಆದರೆ ಇದ್ದೇಇದೆ : ಸಭೆಯನ್ನು