ಪುಟ:Mrutyunjaya.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಲುಪಿದೊಡನೆ ಆಶೀರ್ವಾದದ ಭಂಗಿಯಲ್ಲಿ ಕೈ ಎತ್ತುವುದು. ಆಗ ಬಾಗಿ ನಮಿಸದೆ ಇರುತ್ತಾರೆಯೆ? ಅಪೆಟ್ ಬಹಳ ಯೋಚಿಸಿದ್ದ. ಇನ್ನೂರು ವರ್ಷಗಳ ಹಿಂದೆ ಪೆರೋ ಖೂಫು ಪಿರಮಿಡ್ಡುಗಳನ್ನು ಕಟ್ಟಿಸಲು ಹಣಸಾಲದೆ ಬಂತೆಂದು.ದೇಶದ ಎಲ್ಲ ದೇವಮಂದಿರಗಳ ಸಂಪತ್ತನ್ನೂ ಸ್ವಾಧೀನಪಡಿಸಿ ಕೊಂಡು ಬೀಗಮುದ್ರೆ ಒತ್ತಿದ. ಏನಾಯಿತು? ದೇವರು ಬದುಕಲಿಲ್ಲವೆ? ದೇವಸೇವಕರು ಉಳಿಯಲಿಲ್ಲವೆ? ಸತ್ತಮೇಲೆ ಖೂಫು ಮೋಸಗಳಿಗೆ ಆಹಾರವಾಗಿರ್ಬೇಕು. ಅವನ ಅಂತ್ಯಕ್ರಿಯೆಗೆ ಅರ್ಚಕರು ಸಿಕ್ಕಿದರೊ ಇಲ್ಲವೊ ? ಅವನ ಆಳ್ವಿಕೆ ಮುಗಿದ ಮೇಲೆ ದೇವರು ಮತ್ತೆ ವೈಭವದಿಂದ ರಾರಾಜಿಸಿದ. ಜನ ಎದ್ದು ನಿಲ್ಲುತಿದ್ದರೆ. ಅವಮಾನದ ಮಾತೇ ఇల్ల.ಈ ಬಯಲು ನಾಟಕ ಇನ್ನೆಷ್ಟು ದಿನವೊ ನೋಡೋಣ.) ಮೆನೆಪ್‍ಟಾ ಮುಂದುವರಿದ : “ಅರ್ಚಕರು ಬಂದು, ಸಂತೋಷದ ಸಂಗತಿ. ಆದರೆ, ಇನ್ನೂ ಕೆಲವು ಪೀಠಗಳು ಖಾಲಿಯೇ ಇವೆ.... ಸೆತೆಕ್‍ನಖ್ತ್, ಸೆನ್‍ಉಸರ್ಟ್, ಹೆಜಿರೆ, ಸಿನ್ಯುಹೆ ಮೊದಲಾದವರು ನಿನ್ನೆ ಸಭೇಲಿದ್ರು.... (ಸಭೆಯಲ್ಲಿ ಧ್ವನಿಗಳು: “ಅವರು ಇವತ್ತು ಬರೋದಿಲ್ಲ.” “ಹೆದರ್ಕೊಂಡಿದ್ದಾರೆ”....) ಯಾಕೆ ಹೆದರಿಕೆ? ನಾವೇನು ಕಾಡು ಹಂದಿಗಳೆ? ಮೊಸಳೆಗಳೆ? ನಾವೂ ಅಷ್ಟೇ. ಹೆದರಿದರೆ ಹೇಡಿಗಳಾಗ್ತೇವೆ. ನಮ್ಮ ಮಕ್ಕಳು ಚಿಕ್ಕಂದಿನಿಂದಲೇ ಧೀರರಾಗುವಂತೆ ಮಾಡ್ಬೇಕು. (" ರಾಮೆರಿ ಎಲ್ಲ ಹುಡುಗರ ಗುಂಪಿನಲ್ಲಿದ್ದಾನೇಂತ ತೋರ್ತ್ತದೆ. ಎಲ್ಲ ಪಿಳಿ ಪಿಳಿ ಕಣ್ಣುಗಳು. ಓ ಅಲ್ಲಿದ್ದಾನೆ! ಇನ್ನೇನು ಹೇಳಲಿ ಜನರಿಗೆ ? ಇಪ್ಯೂವರ್ ಬಂದ.” ವೇದಿಕೆಯ ಬಳಿಗೆ ಕಠಾರಿ ಮತ್ತು ಕೋಲು ತಂದುದಾಯಿತು.) ಇವತ್ತಿನಿಂದ ಪ್ರಾಂತದಲ್ಲಿ ಆಡಳಿತ ಹ್ಯಾಗಿರ ಬೇಕೂಂತ ಮುಖ್ಯಸ್ಥರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ. ಇನ್ನು ಪ್ರಾಂತಪಾಲರಿಲ್ಲ. (“ನೀವೇ ಆಗಿ” “ನೀವೇ ಪ್ರಾಂತಪಾಲ”) ಊಹೂಂ, ಇದು ಬೇರೆ ವ್ಯವಸ್ಥೆ. (ಖ್ನೆಮ್ ಹೊಟೆಪ್ ಕೂಗಿ ಹೇಳಿದ: “ಮೆನೆಪ್ಟಾ ನಮ್ಮ ನಾಯಕರು-ನಾಯಕರು!” ಜನ “ಆಗಬಹುದು. ಆಗಬಹುದು.”)ಸ್ನೊಫ್ರು