ಪುಟ:Mrutyunjaya.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೧೨೧

ಸೆಬೆಕ್ಖು ಸಲಹೆಗಾರರು. (“ಒಪ್ಪಿಗೆ”) ಇದು ತೀರಾ ಹೊಸ ವ್ಯವಸ್ಥೆ. ಇದರ ಜತೆ ಬಹಳ ಹಳೆಯ ವ್ಯವಸ್ಥೆಯೂ ఇದೆ. ಅದು ಹಿರಿಯರ ಸಮಿತಿ. ಇಲ್ಲಿ, ಮುಖ್ಯ ಪಟ್ಟಣದಲ್ಲಿ. ಗ್ರಾಮಗಳಲ್ಲಿ ಅಲ್ಲಲ್ಲಿನ ಸಮಸ್ಯೆಗಳನ್ನು ಅಲ್ಲಲ್ಲೇ ಬಗೆಹರಿಸೋದಕ್ಕೆ ಗ್ರಾಮ ಸಮಿತಿಗಳಿರ್ತವೆ. ಹಿರಿಯರ ಸಮಿತಿಯ ತೆರವಾದ ಒಂದು ಸ್ಥಾನಕ್ಕೆ ಹೆಮ್ ಟಿಯವರನ್ನು ನೇಮಿಸಿದ್ದೇವೆ. ಇನ್ನು ಇಪ್ಯೂವರ್ ರಾಜಗೃಹದಲ್ಲಿರ್ತಾರೆ. (ಇಪ್ಯೂವರ್ ಗೆ ದಿಗ್ಭ್ರ್ ಮೆ. ಸಭೆಯಿಂದ: “ನೀವು?” “ನೀವು?”) ನಾನು ಮನೆಯಲ್ಲಿದ್ದುಕೊಂಡೇ ಆಡಳಿತದ ಕೆಲಸ ನೋಡುತ್ತೇನೆ. ಇಪ್ಯೂವರ್ ಇವತ್ತಿನಿಂದ ಕಣಜಗಳು ಬೊಕ್ಷಸದ ಲೆಕ್ಕಿಗ, ಅಧಿಕಾರಿ. ಪ್ರಾಂತ್ಯದ ಮುಖ್ಯ ಲಿಪಿಕಾರನೂ ಅವರೇ. (ಇಪ್ಯೂವರ್ ಕಣ್ಣುಗಳನ್ನು ಉಜ್ಜಿಕೊಂಡ. ಸಂಜೆ ಹೊತ್ತು. ಬೆಳಕಿತ್ತು. ಕನಸಲ್ಲ, ಕನಸಲ್ಲ... ಸವಿ ? ಖಿವವದಂತೆ ಸವಿ?) ನದೀದಂಡೆಗಳಿಗೆ, ದೋಣಿ ಕಟ್ಟೆಗೆ, ರಾಜಗೃಹಕ್ಕೆ ನಿಶ್ಯಸ್ತ್ರ ಜನರಿಗೆ ರಕ್ಷಣೆ ಬೇಕು, ಸುಭದ್ರ ಕಾವಲು ಅಗತ್ಯ ಅನ್ತಾರೆ ಹಿರಿಯ ಯೋಧ ಹೆಮ್ ಟಿ. ಇನ್ನು ಮುಂದೆ ಖ್ನೆಮ್ ಹೋಟೆಪ್ ನಮ್ಮ ದಳಪತಿ (ಸಭೆಯಲ್ಲಿ ಹಲವರಿಂದ: “ಓ ಖ್ನೆಮ್ ! ಓ ಖ್ನೆಮ್ !") ಖ್ನೆಮ್, ಹೀಗೆ ಬರಬೇಕು. (ಮೆನೆಪ್ ಟಾ ಬಾಗಿ ಕಠಾರಿಯನ್ನೆತ್ತಿ, ಹತ್ತಿರ ಬಂದ ಖ್ನೆಮ್ ಹೋಟೆಪ್ ಟೊಂಕದ ಪಟ್ಟಿಗೆ ಅದನ್ನು ಸಿಕ್ಕಿಸಿದ. “ ಇದು ಸರಿ ఎనిಸಿತು ಇಪ್ಯುವರ್ ಗೆ. ಆ ಎತ್ತಿಕೊಟ್ಟ ಕೋಲನ್ನು ಮೆನೆಪ್ ಟಾ ನಿಯೋಜಿತ ದಳಪತಿಯ ಕೈಗಿತ್ತ.) ಕಳ್ಳಕಾಕರು ಹುಷಾರಾಗಿರೋದು ವಾಸಿ ! ( ಸಭೆಯಲ್ಲಿ ನಗೆ ) ನೀಲನದಿ ನಮ್ಮ ಜೀವನಾಡಿ, ಸಾರಿಗೆಯೇ ಉಸಿರು, ನುರಿತ ಅಂಬಿಗ ಬಟಾರನ್ನು ನಮ್ಮ ಸಾರಿಗೆ ಅಧಿಕಾರಿಯಾಗಿ ನೇಮಿಸಿದ್ದೇವೆ. (ಹರ್ಷೋದ್ಗಾರ. ಪ್ರಾಕಾರಕ್ಕೆ ಒರಗಿ ನಿಂತಿದ್ದ ಬಟಾನಿಗೆ ಅಚ್ಚರಿ, ಆನಂದ.) ಇನ್ನು ಕಂದಾಯದ ವಿಷಯ.. (ಜನ, “ಅದನ್ನು ಹೇಳಿ ".... “ಅದನ್ನು ಹೇಳಿ.”) ಅರ್ಧಕ್ಕೆ ಇಳಿಸಬೇಕೂಂತ ತೀರ್ಮಾನಿಸಿದ್ದೇವೆ. ಎಲ್ಲ ಸಂದಾಯವೂ ರಾಜಗೃಹದ ಕಣಜಕ್ಕೆ. ದೇವಮಂದಿರದ ಖರ್ಚಿಗೆ ಇಲ್ಲಿಂದಲೇ ಕೊಡ್ತೇವೆ. ಮುಖ ಕಪ್ಪಿಟ್ಟರೂ ಗಂಭೀರವಾಗಿ ಕುಳಿತ ಅಪೆಟ್. “ಪ್ರವಾಹ ಕಮ್ಮಿ ಬಂದಾಗ ಕಂದಾಯ ವಸೂಲಿ ಮಾಡಬಾರ್ದು"--- ಒಂದು ಧ್ವని.