ಪುಟ:Mrutyunjaya.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೨

ಮೃತ್ಯುಂಜಯ

ಮಾಡೋದಿಲ್ಲ. ಪ್ರತಿವರ್ಷ ಪ್ರವಾಹ ಬಂದ್ಮೇಲೆ ಹಿರಿಯರು ಪ್ರಾಂತದಲ್ಲಿ
ಸಂಚರಿಸಿ, ಫಸಲು ಆಂದಾಜು ಮಾಡಿ ಕಂದಾಯ ನಿರ್ಧರಿಸ್ತಾರೆ. ಕುಯಿಲು
ಆದಾಗ ನಿರೀಕ್ಷೆಗಿಂತ ಕಮ್ಮಿ ಫಸಲು ಬಂದರೆ, ಕಂದಾಯವನ್ನೂ ಕಮ್ಮಿ
ಮಾಡ್ತಾರೆ. (ಜಯಕಾರ : "ಓ ಮೆನೆಪ್ಟಾ ! ಓ ನಾಯಕ ಮೆನೆಪ್
ಟಾ !" ಕಲರವ ನಿಂತಾಗ ಒಂದು ಗಂಡಸು ಸ್ವರ : "ಮನೆಗೆ___ಹಿತ್ತಿಲಿಗೆ
ನೀರು....") ಖಂಡಿತ ! ಹೂಳು ತೆಗೆದು ಕಾಲುವೆ ಆಳ ಮಾಡ್ತೇವೆ.
ಷಾಡ್ರೂಪ್ ಗಳನ್ನು ದುರಸ್ತಿ ಮಾಡ್ತೇವೆ. ನಾಳೆಯಿಂದಲೇ ಕೆಲಸ ಆರಂಭ.
(ತಬಬುವಾ ಚಪ್ಪಾಳೆ ತಟ್ಟಿದಳು. ಸಭೆ ಓಗೊಟ್ಟಿತು.) ಇನ್ನೂ ಏನಾದರೂ
ಉಂಟೆ ? (ಇಪ್ಯುವರ್ ಮೆಲ್ಲನೆ : "ರಾಜಗೃಹದ ಸೇವಕರು ಒಂದು ಮನವಿ
ಸಲ್ಲಿಸ್ತಾರಂತೆ.") ಮನವಿ! ಓ! ಆಗಲಿ. ಕರೀರಿ"
ಹದಿನೆಂಟು ಇಪ್ಪತ್ತರಷ್ಟು ಸೇವಕರೂ ಸೇವಿಕೆಯರೂ ಬಂದು ವೇದಿಕೆಯ
ಎದುರು ಬಾಗಿ ನಮಿಸಿದರು. ಸ್ನೊಫ್ರು___ಸೆಬೆಕ್ಖುರೊಡನೆ ಮೆನೆಪ್ಟಾ ಪಿಸು
ಮಾತನಾಡಿದ.
ಮೌನವಾಗಿ ನಿಂತ ಆ ಜನರನ್ನು ಉದ್ದೇಶಿಸಿ ಮೆನೆಪ್ಟಾ ನುಡಿದ :
"ಮಾತನಾಡಿ."
ಅವರು ಮತ್ತೂ ಸುಮ್ಮನಿದ್ದರು. ಇಪ್ಯುವರ್ ನೆಂದ:
"ಪ್ರಾಂತಪಾಲರ ಸೇವೆ ಮಾಡಿದ ಹಾಗೆ ಇವರು ನಿಮ್ಮ ಸೇವೆಯೂ
ಮಾತ್ತಾರಂತೆ."
ಗಂಭೀರವಾಗಿ ಮೆನೆಪ್ಟಾ ಅಂದ :
"ಹೊಸ ವ್ಯವಸ್ಥೆಯಲ್ಲಿ ದಾಸರಿಲ್ಲ, ದಾಸಿಯರಿಲ್ಲ. ಎಲ್ಲರೂ ಮುಕ್ತರು.
ವಿಮುಕ್ತ ದುಡಿಮೆಗಾರರು. ರಾಜಗೃಹದ ಉದ್ಯೋಗಿಗಳಿಗೆ ಮುಂದೆಯೂ
ಕೆಲಸವಿದೆ. ಆದರೆ ಭೋಜನ ಮಂದಿರದ ದಾಸಿಯರ ಅಗತ್ಯವಿಲ್ಲ. ಅವರು
ಸ್ವತಂತ್ರರು. ಹೋಗಬಹುದು."
ದಾಸಿಯರು ಆರು ಜನ___ಬಿಕ್ಕಿ ಬಿಕ್ಕಿ ಅಳತೊಡಗಿದರು.
ಖ್ನೆಮ್ ಹೊಟೆಪ್ , "ಸುಮ್ನಿರಿ!" ಎಂದು ಗದರಿದ.
"ಇಪ್ಯುವರ್, ಅಳಬೇಡಿ. ನೆಪೆರುರಾ ನೀನು ಮಾತನಾಡು," ಎಂದ.