ಪುಟ:Mrutyunjaya.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೧೨೩ ಮುಚ್ಚಂಜೆಯಾಗುತ್ತ ಬಂತು. ಸ್ತಬ್ಧತೆಯಲ್ಲಿ ದಾಸಿಯರ ಅಳು ಮಾತ್ರ ಕೇಳಿಸುತ್ತಿತ್ತು. ಅವರು ಕೈ ಬೆರಳುಗಳಲ್ಲಿ ಕಣ್ಣೀರೊರೆಸಿಕೊಂಡರು, ನೆಫರುರಾ ಅವರಲ್ಲಿ ಅತ್ಯಂತ ಸುಂದರಿ. ಆಕೆ ಅಂದಳು :

“ಅಣ್ಣ; ಈ ದಾಸಿಯರಿಗೆ ನಾನು ಮುಖ್ಯಸ್ಥೆ. ವಿಷಯ ಇಷ್ಟೆ ಅಣ್ಣ. ಹಿರಿಯರಿಗೆಲ್ಲ ಗೊತ್ತಿರೋ ಹಾಗೆ ಐಗುಪ್ತದ ಸ್ತ್ರೀಯರಿಗೆ ಇರೋ ಉದ್ಯೋಗಗಳು ನಾಲ್ಕು, ದೇವಸೇವಿಕೆಯಾಗೋದು, ಸೂಲಗಿತ್ತಿಯಾಗೋದು, ಶೋಕ ಸ್ತ್ರೀಯಾಗೋದು, ನರ್ತಕಿಯಾಗೋದು. ಹಂದಿಯ ಮುಸುಡಿಗೆ ಬಂಗಾರದ ಉಂಗುರ ಹಾಕಿ ಏನು ಫಲ? ವಿವೇಚನೆ ಇಲ್ಲದ ಸುರದ್ರೂಪಿಣಿಯ ಅವಸ್ಥೆಯೂ ಅಷ್ಟೆ. ನೀವೇ ಹೇಳಿ, ನಮಗೆ ಯಾರು ಕೆಲಸ ಕೊಡ್ತಾರೆ ? ರಾಜಗೃಹದಲ್ಲೇ ಇರೋದಕ್ಕೆ ಅಣ್ಣನವರು ಅವಕಾಶ ಕೊಟ್ಟರೆ....."

ಮಾತು ಸುಸಂಬಧ್ಧವಾಗಿರಲಿಲ್ಲ. ಆದರೆ ಕಂಠ ಇಂಪಾಗಿತ್ತು, ಪದಗಳು ಮೋಹಕವಾಗಿ ಕುಣಿದುವು. ನೀರವತೆಯನ್ನು ಮುರಿದು ಮೆಚ್ಚುಗೆಯ ಉದಾರಗಳು ಕೇಳಿಸಿದುವು.. ನೆಫರುರಾ ಒಳ್ಳೆಯ ಹೆಸರು ಎಂದುಕೊಂಡ ಮೆನೆಪ್ ಟಾ.

ಆತನೆಂದ:

“ನೆಫರುರಾ, ಇನ್ನು ರಾಜಗೃಹದಲ್ಲಿ ಔತಣ-ನರ್ತನ-ಹಾಡುಗಾರಿಕೆ ಇಲ್ಲ. ದಾಸಿಯರಿಗೆ ಇಲ್ಲಿ ಕೆಲಸವಿಲ್ಲ. ನೀವೀಗ ಯಾರ ಸೊತ್ತೂ ಅಲ್ಲ, ಸ್ವತಂತ್ರರು. ಮದುವೆಯಾಗಬಹುದು. ದುಡಿದು ಸಂಪಾದಿಸಬಹುದು. ಇಲ್ಲಿರುವ ಸ್ತ್ರೀಯರ ಹಾಗೆ ತಲೆಯೆತ್ತಿ ನಡೆಯಬಹುದು. ಏನಾದರೂ ಏರ್ಪಾಟು ಆಗೋವರೆಗೆ ನಿಮಗೆ ರಾಜಗೃಹದ ಕಣಜದಿಂದ ಧಾನ್ಯ ಮತ್ತಿತರ ಸಾಮಗ್ರಿ ಸಿಗ್ರವೆ..... ಅಳೋದರ ಬದಲು, ನೀವು ಸಂತೋಷಪಡಬೇಕು........ "

ಹೌದು, ಹೌದು," ಎಂದಿತು ಸಭೆ. ಕವಡೆಯ ಕಂಠಾಭರಣಗಳಿಂದ ಆವೃತ್ತವಾಗಿದ್ದ ನೆಫರುರಾಳ ವಕ್ಷಸ್ಥಲ ಉದ್ವೇಗದಿಂದ ಮೇಲಕ್ಕೂ ಕೆಳಕ್ಕೂ ಚಲಿಸಿತು. ಅವಳು ವೇದಿಕೆಗೂ ಸಭೆಗೂ ತಲೆಬಾಗಿ ವಂದಿಸಿದಳು. ಇತರ ವಿಮುಕ್ತ ದಾಸಿಯರೂ ಹಾಗೆಯೇ