ಪುಟ:Mrutyunjaya.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಮೃತ್ಯುಂಜಯ

ಮಾಡಿದರು.

ಸಭೆಯನ್ನು ಉದ್ದೇಶಿಸಿ ಮೆನೆಪ್ ಟಾ ಅಂದ :

“ಸದ್ಯಕ್ಕೆ ಇಷ್ಟೇ. ನೀವೆಲ್ಲಾ ಮನೆಗೆ ಇನ್ನು ಹೋಗ್ಬಹುದು."        ವೇದಿಕೆ ಬರಿದಾಯಿತು. ಜನ ಕದಲಲಿಲ್ಲ. ಸ್ನೊಫ್ರು ಸೆಬೆಕ್ಖು ಮತ್ತು ಹಿರಿಯರನ್ನು ಕರೆದುಕೊಂಡು ಮೆನೆಪ್ ಟಾ ರಾಜಗೃಹದೊಳಗೆ ನಡೆದ. ಬಯಲಿನಲ್ಲಿದ್ದ ಜನರೂ ನುಗ್ಗಲೆತ್ನಿಸಿದರು.  "ಶಿಸ್ತು! ಶಿಸ್ತು!" ಎಂದು ಖ್ನೆಮ್ ಹೊಟೆಪ್ ಕೂಗಾಡಿದ. ಮೆನೆಪ್ ಟಾನೆಂದ: "ಇದು ಅವರದೇ ಭವನ ಸಣ್ಣ ಸಣ್ಣ ತಂಡಗಳಾಗಿ ಒಳಗೆ ಬಂದು ನೋಡಿ ಹೋಗಲಿ." ಖ್ನೆಮ್ ದ್ವಾರದಲ್ಲಿ ನಿಂತು. "ಐವತ್ತು ಐವತ್ತರ ಹಾಗೆ ಜನ ಒಳಕ್ಕೆ ಬನ್ನಿ," ಎಂದ.
        ರಾಜಗೃಹದ ದೀಪಗಳನ್ನು ಹಚ್ಚಿದರು. ಒಂದನ್ನು ಮಹಾದ್ವಾರದ ಹೊರಗೂ ಇನ್ನೊಂದನ್ನು ಅಲಂಕೃತ ನೆಡುಗಂಬದ ಬಳಿಯಲ್ಲೂ ಇಟ್ಟರು. ಜನರ  ಜತೆ ನೆಫಿಸ್ ನೆಜಮುಟರೂ ತನ್ನ ಮಗಳೊಡನೆ  ತಬಬುವಾನೂ ಒಳ ಬಂದರು. ಮೆನೆಪ್ ಟಾ ತನ್ನನ್ನು ಬಿಗಿದಿದ್ದ ಕಂಬವನ್ನೊಮ್ಮೆ ನೋಡಿ , ನಸುನಕ್ಕು, ತನಗೆ ಅಪರಿಚಿತವಾಗಿದ್ದ ಮಹಡಿಯನ್ನು ನೋಡಲು ಹೋದ. ಅಲ್ಲಿ ಪಾಂತಪಾಲ ಗೇಬುವಿನ ಪತ್ನಿಯೂ ಪುತ್ರಿಯರೂ ವಾಸಿಸುತ್ತಿದ್ದ ಕೊಠಡಿಗಳಿದ್ದುವು. ಒಂದರಲ್ಲಿ ಅಲಂಕರಣದ ಮತ್ತಿತರ ಸಾಮಗ್ರಿಗಳಿದ್ದ ಪೆಟ್ಟಿಗೆಗಳಿದ್ದುವು.

“ಪೆಟಾರಿಗಳಲ್ಲಿ ಆಭರಣಗಳೂ ಇರಬಹುದು,” ಎಂದ ಇಫ್ಯೂವರ್. ಮೆನೆಪ್ ಟಾ ನಿರ್ದೇಶವಿತ್ತ :

“ಈಗಲೇ ಅವರವರ ಸಾಮಾನುಗಳನ್ನೆಲ್ಲ ಒಂದೆರಡು ಪೆಟಾರಿಗಳಲ್ಲಿಟ್ಟು ಭದ್ರಪಡಿಸಿ ; ಈ ಕೊಠಡಿಯ ಬಾಗಿಲೆಳೆದುಕೊಂಡು ಮುದ್ರೆ ಒತ್ತಿ. ಒಂದು ಸಾಮಾನೂ ಅತ್ತಿತ್ತ ಸರಿಯಬಾರದು.”

“ಆಗಲಿ," ಎಂದು ಇಪ್ಯುವರ್ ಆ ಕೊಠಡಿಯ ಬಾಗಿಲೆಳೆದುಕೊಂಡು, ಬೀಗಮುದ್ರೆಗಾಗಿ ಆವೆಮಣ್ಣು ತರಲು ಹೋದ.

ರಾಮೆರಿಪ್ ಟಾ ತನ್ನ ತಂದೆ ಕಂದಾಯದ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳವನ್ನೂ ತನ್ನ ತಂದೆಯನ್ನು ಬಿಗಿದು ಕಟ್ಟಿದ್ದ ಕಂಬವನ್ನೂ