ಪುಟ:Mrutyunjaya.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾಯಿಗೂ ಆಕೆಯ ಜತೆ ಇದ್ದವರಿಗೂ ತೋರಿಸಿದ.

ಮಹಡಿಯ ಮುಖಮಂಟಪದ ಚಾಪೆ ಪರದೆಗಳನ್ನು ಸುರುಳಿ ಸುತ್ತಿ ಮೇಲಕ್ಕೆ ಕಟ್ಟಿದರು.
 ಮೆನೆಪ್ ಟಾನ ಹಿಂದೆಯೇ ಇದ್ದ ಜನರ ತಂಡದ ಒಬ್ಬನೆಂದ:
"ನಾವು ಅಲ್ಲಿ ಹೋರಾಡ್ತಾ ಇದ್ದಾಗ,ಟಿಹುಟಿ ಮತ್ತು ಗೇಬು ಇಲ್ಲಿ ಬಚ್ಚಿಟ್ಕೊಂಡು ನೋಡ್ತಾ ಇದ್ರು."
 ಈಗ ಬಯಲಲ್ಲಿದುದು ಹಬ್ಬದ ವಾತಾವರಣ. ಜನ ಗುಂಪು ಗುಂಪಾಗಿ ನಿಂತು,ತಮ್ಮ ತಮ್ಮೊಳಗೆ ನಗುತ್ತಾ ಮಾತನಾಡುತ್ತಾ, ತಾವು ವಶಪಡಿಸಿಕೊಂಡಿದ್ದ ರಾಜಗೃಹಗಳನ್ನು ಹೊಕ್ಕು ನೋಡಲು ತಮ್ಮ ಸರದಿಗಾಗಿ ಕಾಯುತ್ತಿದ್ದರು.ಕೆಳಗೆ ಊರಿನ ಹಲವು ಮನೆಗಳಲ್ಲಿ ದೀಪಗಳು ಒಂದೊಂದಾಗಿ ಮೂಡುತ್ತಿದ್ದವು.
 ಪ್ರಜೆಗಳ ವಿಹಾರಕ್ಕೆಂದು ರಾಜಧಾನಿಯಲ್ಲಿ ಒಂದು ಉದ್ಯಾನ ನಿರ್ಮಿಸಿರುವರೆಂದು ಬಟಾ‌ ಹೇಳಿದ್ದನ್ನು ಮೆನೆಪ್ ಟಾ ಕೇಳಿದ್ದ.ಇಲ್ಲಿಯೂ ಅಂತಹದೊಂದು? ರಾಜಗೃಹಕ್ಕೆ ಬರುವ ಬೀದಿಯ ಇಕ್ಕೆಲಗಳಲ್ಲಿ ಸಾಲು ಮರಗಳು.ಎದುರುಗಡೆ ಜನ ನೆರೆಯುವಲ್ಲಿ,ಹೂಗಿಡಗಳು ಸುತ್ತುವರಿದ ಹಸುರು ನೆಲ.ರಾಜಗೃಹದ ಎಡಬಲಗಳಲ್ಲೂ ಹಿಂದೆಯೂ ಉದ್ಯಾನ....
ಮಹಡಿಯ ಮೆಟ್ಟಿಲುಗಳನ್ನೇರುತ್ತ ನೆಜಮುಟ್ ಮೆಲ್ಲನೆ ಗೊಣಗಿದಳು:

"ಇಪ್ಯುವರ್ ರಾಜಗೃಹದಲ್ಲಿ ಇರ್ತಾನಂತೆ.ಬೇರ ಯಾರೂ ಇಲ್ವೇನೊ? ನೀವೇ ಯಾಕೆ ವಾಸ ಮಾಡಬಾರದು? ಅಥವಾ ನಾವು? ನೀನು ಇಷ್ಟು ಮೆತ್ತಗಿರೋದು ಸರಿಯಲ್ಲ ನೆಫಿಸ್."

 ಈ ಮಾತು ಯಾರಿಗಾದರೂ ಕೇಳಿಸಿತೇನೋ ಎಂದು ನೆಫಿಸ್ ಗಾಬರಿಯಿಂದ ಅತ್ತಿತ್ತ ನೋಡಿದಳು. " ಸುಮ್ನಿರ್ ನೆಜಮುಟ್," ಎಂದಳು.
  ನೆಜಮುಟ್ ಗೆ ಪ್ರಾಂತಪಾಲನ ಮಡದಿಯ ಕೊಠಡಿ ನೋಡುವ ತವಕ.ಆದರೆ ಇಪ್ಯುವರ್ ಆಗಲೆ‌ಮುದ್ರೆಯೊತ್ತಿದ್ದ.
"ಇದ್ಯಾಕೆ ಹೀಗೆ ಮಾಡಿದಿರಿ?" ಎಂದಳು ಆಕೆ.

"ನಾಯಕರ ಆಜ್ಞೆ," ಎಂದ ಲಿಪಿಕಾರ.