ಪುಟ:Mrutyunjaya.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ೧೨೭ ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು‌ ಬರಕೊಂಡಿಲ್ಲ"ಎಂದ.

  ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ. “
"ರಾತ್ರಿಯೇ ಬರೆದಿಡ್ತೇನೆ..."

ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ: “ನಾನು. ನನ್ನ ಮನೆಯಲ್ಲೇ ಇದ್ದರಾಗದೆ?” “ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.” "ರಾಮೆರಿಪ್ ಟಾಗೆ ಓದು ಬರಹ" “ಎರಡು ದಿನ ಹೋಗಲಿ. ಹೇಳ್ತೇನೆ.” ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು. ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು : “ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!” ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ. ನೆಜಮುಟಾ ಉತ್ತರವೀಯಲಿಲ್ಲ.

           *  *  *  *

ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.

ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ.

ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು