ಪುಟ:Mrutyunjaya.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಅಪೆಟ್ ಕೇಳಿಕೊಂಡ: “ನೀರಾನೆ ಪ್ರಾಂತಕ್ಕೆ ಶುಭವನ್ನು ಕರುಣಿಸು, ಎಲ್ಲ ಪೀಡೆಗಳಿಂದಲೂ ಅದನ್ನು ಪಾರು ಮಾಡು, ನೀಲನದಿಯಲ್ಲಿ ಮಹಾಪೂರ ಎಂದಿನಂತೆ ಬರಲಿ ಕೆರೆ ಬಾವಿಗಳಲ್ಲಿ ನೀರು ನಿಲ್ಲಲಿ, ಗೋಧಿ, ಯವೆ, ಸಾವೆ ಹೇರಳವಾಗಿ ಬೆಳೆಯಲಿ, ನಾಡಿನ ಈ ಮುಖಂಡರು ವಿನಮ್ರ ಭಕ್ತರು, ಪರಂಪರಾಗತ ರೀತಿ ರಿವಾಜುಗಳು ಕಟ್ಟುಕಟ್ಟಳೆಗಳು ಒಂದಿಷ್ಟೂ ತಪ್ಪದೆ ಮುಂದುವರೀತವೆ."

ಇಷ್ಟು ನುಡಿದು ಮೆನೆಪ್ಟಾನತ್ತ ಹೊರಳಿ ಅಪೆಟ್ ನೆಂದ:

ದೇವರಿಗೆ ಇಷ್ಟವಾಗುವಂಥದು ಏನಾದರೂ ಹೇಳಿ.” “ ಏನು ಹೇಳಲಿ ?” ಮಂದಿರದ ಶಾಲೆ, ಉಗ್ರಾಣ,ಅರ್ಚಕನ ವಸತಿ ಕಟ್ಟಿಸಿಕೊಡ್ತೇನೆ ಅನ್ನಬಹುದು.” ಮೆನೆಪ್ಟಾ ಹತ್ತಿರದಲ್ಲೇ ಇದ್ದ ಸ್ನೊಪ್ರು-ಸೆಬೆಕ್ಖುರತ್ತ.ಹಿರಿಯರತ್ತ ದೃಷ್ಠಿ ಹಾಯಿಸಿದ. ಅವರೆಲ್ಲಾ ಭಕ್ತಿಯಿಂದ ತಲೆಬಗ್ಗಿಸಿ ನಿಂತಿದ್ದರು. “ ಆಗಲಿ, ಕಟ್ಟಿಸಿಕೊತ್ತೇವೆ,” ಎಂದ ಮೆನೆಪ್ ಟಾ. ನಾಯಕನ ತಂಡದ ಸ್ತ್ರೀ ಪುರುಷರಿಗೆಲ್ಲ ಅಪೆಟ್ ಒಂದೊಂದು ಹಿಡಿ ಹೂ ನೀಡಿದ: ಕಟಾಂಜನದ ಆಚೆಗೆ ನಿಂತಿದ್ದ ಜನರಿಗೂ ಹಂಚಲು ಹೂ ಕಳುಹಿದ. ಬಂದವರ ಜತೆ ಅರ್ಚಕ ನೂರು ಮಾರು ನಡೆದು, ಅವರನ್ನು ಗೌರವದಿಂದ ಬೀಳ್ಕೊಟ್ಟ. ನೆಫೆರುರಾ ಕನ್ಯೆಯಾಗಿದ್ದಾಗಲೇ ಅವಳನ್ನು ಪಡೆಯಲು ಅಪೆಟ್ ಯತ್ನಿಸಿದ್ದ. ಸ್ತ್ರೀಗೆ ದೇವಸೇನೆಯೇ ಭೂಷಣ, ಎಂದು ನೆಪಪುರಾಳ ತಾಯಿಯೊಡನೆ ವಾದಿಸಿದ್ದ. ಆದರೆ ಆ ತಾಯಿಗೆ ನೆಫುರುರಾ ಪೆರೋನ ರಾಣೀವಾಸ ಸೇರಬೇಕೆಂಬ ಆಸೆ. ತಾನೇ ರಾಜಧಾನಿಗೆ ಮಗಳನ್ನು ಕರೆದೊಯ್ಯಬೇಕು ಎನ್ನುವ ಯೋಚನೆಯೂ