ಪುಟ:Mrutyunjaya.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ಅವಳಿಗಿತ್ತು, ಆದರೆ ಪ್ರಾಂತಪಾಲ ಗೇಬು ಒಪ್ಪಲಿಲ್ಲ, “ಒಂದೇ ಸಲ ನಕ್ಷತ್ರ ಪುಂಜಕ್ಕೆ ಕೈ ಚಾಚಬೇಡ. ಐವತ್ತು ದೆಬೆನ್ ಬಂಗಾರ ಕೊಡ್ತೇನೆ. ಹುಡುಗೀನ ನಮಗೆ ಒಪ್ಪಿಸಿ ಹೋಗು," ಎಂದು.

     ನೆಫೆರುರಾ  ರಾಜಗೃಹದ ದಾಸಿಯಾದದ್ದು ಹಾಗೆ.
     ಅಪೆಟ್ ಗೆ ಸಿಟ್ಟು. ಹಿಂದಿನ ದಿನ ಮೆನೆಪ್ ಟಾನೆಪ್ ಟಾ ದಾಸಿಯರನ್ನೆಲ್ಲ ವಿಮುಕ್ತಗೊಳಿಸಿದನಲ್ಲ, ಅದರ ಅಗತ್ಯವೇನಿತ್ತು ? ಅವರನ್ನು ಮಂದಿರಕ್ಕೆ ಕೊಡಬಹುದಾಗಿತ್ತು, ಈ ಹೊಸ ವಾತಾವರಣದಲ್ಲಿ ಬಿಟ್ಟ ದುಡಿಮೆಗೆ ಜನ 

ಸಿಗುವುದುಂಟೆ ಇನ್ನು ? ವಸತಿಗಾಗಿ ಶಾಲೆಗಾಗಿ ಕಟ್ಟಡಗಳಾದರೂ ಆಗುತ್ತ ವಲ್ಲ ಸಧ್ಯಃ. ಈ ಸಲದ ಕಂದಾಯ ವಸೂಲಿಯಲ್ಲಿ ಮಂದಿರದ ಕಣಜಕ್ಕೆ ಎಷ್ತು ಒಪ್ಪಿಸುಸತ್ತಾರೋ ನೋಡಬೇಕು. ಇಪ್ಯುವರ್ ಸುರೆ ಕುಡಿದ ಕಪಿಯ

ಹಾಗೆ ಕುಣೀತಿದ್ದಾನೆ.
  ತಾನು ಮದುವೆಯಾಗದೇ ಇದ್ದಿದ್ದರೆ ಹಿರಿಯ ಅರ್ಚಕನಾಗಬಹುದಿತ್ತು.

ಲೌಕಿಕದ ಉರುಲಿಗೆ ತಲೆಯೊಡ್ಡಿ ಬರಿಯ ದೇವಸೇವಕನೇ ಆದೆ, ಮಗ ನಾದರೂ ಮೇಲಣ ಶ್ರೇಣಿಗೆ ಏರುವಂತೆ ಮಾಡಬೇಕು. ಅವನ ತಾಯಿ ಅದೆಷ್ಟು ಬೇಗ ಮುದುಕಿಯಾಗಿದ್ದಾಳೆ ! ಅವಳು ಮುದ್ದ್ದು ಮಾಡಿ ಮಗನನ್ನು ಕೆಡಿಸದಂತೆ ನೋಡಿಕೊಳ್ಳಬೇಕು. ಇವನ ಶಿಕ್ಷಣದತ್ತ ತಾನು ಗಮನಹರಿಸ ಬೇಕು. ಶಾಲಾ ಕಟ್ಟಡದಲ್ಲಿ ಇವನಿಂದಲೇ ಅಧ್ಯಪನ. - ಯೂಚಿಸುತ್ತ ಮಂದಿರದತ್ತ ಹೊರಟದ್ಡ ತಂದೆಯ ಹಿಂದೆಯೇ

 ಇದ್ದ ಹುಡುಗ.
        ಅಪೆಟ್ ಕೇಳಿದ :
        "ಬರ್ತಿದ್ದೀಯೇನೊ?"
        "ಹೊಂ."
       " ಕೀಳು ಹುಡುಗರ ಜೊತೆ ಗೋಲಿ ಆಡ್ತಾ ಕಾಲ ಕಳೀಬೇಡ."
 ಲಿಸಿ ಸುರುಳಿ ಹಿಡಕೋಂಡು ಪಾಠಕ್ಕೆ ಕೂಕ್ಕೊ."
        "ಹೋಂ."