ಪುಟ:Mrutyunjaya.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೩೩

ಅದು, ಕೊಳ್ಳುವವರಿಲ್ಲದೆ ಆ ವೃತ್ತಿಯೇ ಮೂಲೆಗುಂಪಾಗಿ, ಆ ಜನ ಕಲ್ಲಿನ ಕೆಲಸಕ್ಕೆ ಸೇರಿಕೊಂಡಿದ್ದರು,ಈಗ ಹಲವರು ಅಂಥ ದೋಣಿ ಕಟ್ಟಲು ಅಪೇಕ್ಷೆ ಪಟ್ಟುದರಿಂದ,ಪೆಪೈರಸ್ ದೋಣಿ ನಿರ್ಮಾಣದ ಪರಂಪರಾಗತ ವೃತ್ತಿ ಮತ್ತೆ ಚೇತರಿಸಿಕೋಂಡಿತು.

          ಅಂಥ ದೋಣಿಗಳಲ್ಲಿ ಜನ ನೀರು ಗಿಡಗಳ ನಡುವೆ ಸಾಗಿ, ಕೈಕೊಲೆಸೆದು ಕಾಡುಕೋಳಿಗಳನ್ನು ಬೇಟೆಯಾಡಿದರು. ಬಾತುಕೋಳಿಗಳನ್ನೂ ಕೊಕ್ಕರೆಗಳನ್ನೂ ಸೆರೆಹಿಡಿದು ತಂದರು. ಒಳ್ಳೆಯ ಆಹಾರವಾಗುವಂತೆ ಕಾಳು

ನುಚ್ಚು ನೀಡಿ ಬೆಳೆಸಿದರು.

          ಅನೇಕ ಬಡವರ ಮನೆಗಳು ಹಳೆಯದಾಗಿ ಕುಸಿಯುವ ಸ್ಥಿತಿಯಲ್ಲಿದ್ದುವು ಅಂಥ ಛಾವಣಿಗಳಿಗೆ ಆಧಾರ ಕೊಡಲೆಂದು, ರಾಜಗೃಹದ ವೆಚ್ಚದಲ್ಲಿ ತಾಳೆಯ ತೊಲೆಗಳನ್ನು ಕೊಡಿಸಲಾಯಿತು.
      ರಾಜಗೃಹದ ಸುತ್ತಲೂ ಇದ್ದ ಪ್ರಾಕಾರವನ್ನು ಕೆಡವಿದರು.
  “ಜನರಿಗೆ ಕಾಣಿಸದಂತೆ ಯಾವ ರಹಸ್ಯ ಕಾರ್ಯವೂ ಇಲ್ಲಿ ನಡೆಯೋದಿಲ್ಲ.ಅಂದ ಮೇಲೆ ಗೋಡೆ ಯಾಕೆ?”ಎಂದ ಮೆನೆಪ್ಟಾ.
    ಮಹಾದ್ವಾರದ ಚೌಕಟ್ಟನು ಕಿತ್ತು, ಹಿಂಬದಿಯಲ್ಲಿ ಉಗ್ರಾಣದಲ್ಲಿಟ್ಟಿದ್ದರು.
       ತಾಯಿ,ಅವಿವಾಹಿತೆಯಾಗಿ ಉಳಿದಿದ್ದ ತಂಗಿ, ಹೆಂಡತಿ,ಒಬ್ಬಳೂ ಮಗಳು-ಇಷ್ಟು ಜನರುಳ್ಳ ಪುಟ್ಟ ಸಂಸಾರ ಇಪ್ಯುವರ್ನದು.ಹಿಂಭಾಗದಲ್ಲಿದ ಕೆಳಗಿನ ಎರಡು ಕೊಠಡಿಗಳಲ್ಲಿ ಅವನು ಬೀಡು ಬಿಟ್ಟ.
     ನೆಫೆರುರಾ ಒಂದು ದಿನ ಬಂದು ಪ್ರಾಂತಪಾಲ ಗೇಬುವಿನ ಮತ್ತು ಅವನ ಸಂಸಾರದ ಪೆಟ್ಟಗೆ ಸೊತ್ತುಗಳು ಯಾವುವೆಂಬುದನ್ನು ತೋರಿಸಿಕೊಟ್ಟಳು.ಅವನ್ನು ಎರಡು ಖಾರಿಗಳಲ್ಲಿಟ್ಟ ಮುದ್ರೆಯೊತ್ತಿ ಉಗ್ರಾಣಕ್ಕೆ ಸಾಗಿಸಿದರು. 

ಅವರ ವಾಸದ ಕೊಠಡಿಗಳಲ್ಲಿ ಹೊಸ ಆಡಳಿತ ದಾಖಲೆ ಪತ್ರಗಳನ್ನು ಜೋಡಿಸಿ ಇಟ್ಟರು.

     ದಾಸಿಯರಲ್ಲಿ ಮೂವರಿಗೆ ಮದುವೆಯಾಯಿತು. ಇಬ್ಬರು ಅಲ್ಲಿ ಇಲ್ಲಿ ದುಡಿಮೆಗೆ ಹೋದರು.