ಪುಟ:Mrutyunjaya.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೪ ಮೃತ್ಯುಂಜಯ

ನೆಫೆರುರಾಳನ್ನು ಕಂಡಾಗ ಏನೊ ಸಂಕಟವೆನಿಸಿ ಇಪ್ಯುವರ್, “ನೀನೇನು ಮಾಡ್ತೀಯಾ?”ಎಂದು ಕೇಳಿದ.

  ಅವಳೆಂದಳು:
  “ನಿನಗೇನು ಲಿಪಿಕಾರನಯ್ಯ? ನೀನೀಗ ದೊಡ್ಡಮನುಷ್ಯ. ಸಂಸಾರ ಸಮೇತ ರಾಜಗೃಹ ಸೇರ್ದೆ.”
 ಇಪ್ಯೂವರ್ ನೊಡನೆ ಅವಳಿಗೆ ಮಾತಿನ ಸಲಿಗೆ.
 “ನೀನೂ ಇಲ್ಲೇ ಇರಬಹುದಾಗಿತ್ತು.”
 "ನವುರು ಮಾತು ಬಿಟ್ಬಿಡು.ನಿನ್ನ ತಾಯಿ,ಹೆಂಡತಿ,ತಂಗ, ಮಗಳು ಸುಮ್ನಿರ್ನಾರ?"
 "ವಾಸಕ್ಕೆ ಮನೆನೋಡಿದೀಯಾ?" 
 "ಮುದಿ ತಾಯಿ ಹುಡುಕಿಕೂಂಡು ಬಂದಿದ್ದಾಳೆ.ಕುಡಿದು ಕುಡಿದು ಐವತ್ತು ದೆಬೆನ್ ಬಂಗಾರವೂ ಮುಗೀತು. ಒಟ್ಟಿಗೆ ಮನೆ ಮಾಡಿದ್ದೇನೆ.ಕುಣಿತದ ಮನೆ.ಯಾವತ್ತಾದರೂ ಬೇಜಾರಾದಾಗ ಬಾ.”
 ಅವಳ ಕಣ್ಣಗಳಲ್ಲಿ ಹನಿ ಆಡಿದ್ದನ್ನು ಕಂಡು ಇಪ್ಯುವರ್

ಖಿನ್ನನಾದ.

 ನಿಧಾನವಾಗಿ ಅವನೆಂದ :
 “ನಾನು ದೊಡ್ಮನುಷ್ಯ ಅಂದ್ಯಲ್ಲ,ನೆಫೆರುರಾ? ಅದು ಸರಿಯಲ್ಲ. నిಜವಾದ ದೊಡ್ಡಮನುಷ್ಯ ಮೆನೆಪ್ಟಾ. ಸಾಕ್ಷಾತ್ ದೆವರು...."
 "ಆ ದೇವರು ಈ ನೈವೇದ್ಯ ಬೇಡ ಅಂದ"

ಅಷ್ಟು ಹೇಳಿ, ನಿಟ್ಟುಸಿರು ಬಿಟ್ಟು, ನೆಫೆರುರಾ ಅಲ್ಲಿಂದ ಹೊರಟಳು.

 ನೂರಾರು ರೈತರ ನೇಗಿಲು ಮೊನೆಗಳು ಮೊಂಡಾಗಿದ್ದುವು. ಹಳೆಯದಾಗಿದ್ದುವು ಅಥವಾ ಮುರಿದಿದ್ದುವು. ಅವುಗಳ ದುರಸ್ತಿಯ ವೆಚ್ಚವನ್ನು ರಾಜಗೃಹ ವಹಿಸಿತು.
 ಸೆಬೆಖ್ಖು ರಾಜಗೃಹದ ಸುತ್ತಲೂ ಪುಷ್ಪೋದ್ಯಾನ ನಿರ್ಮಿಸಲು ದುಡಿದ.ಅಂಗಣದಲ್ಲಿದ್ದ ತಾವರೆಕೊಳ ಈಗ ವಿಸ್ತ್ರುತ ಉದ್ಯಾನದ ಒಂದಂಗವಾಯಿತು. ಪ್ರತಿಯೊಂದು ಗಿಡದ, ಬಳ್ಳಿಯ ದೈನಂದಿನ ಬೆಳವಣಿಗೆಯನ್ನು ಸೆಬೆಕ್ಕು ಗಮನಿಸುತ್ತಿದ್ದ.