ಪುಟ:Mrutyunjaya.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



               ಮೃತ್ಯುಂಜಯ        ೧೩೫
  "ಇಲ್ಲಿ ಹೂ ಅರಳಿದ ಕೂಡಲೇ ಮುಖಮಂಟಪದಲ್ಲಿ ಜೇನುಹುಳಗಳು ಗೂಡು ಕಟ್ತವೆ ನೋಡ್ಕೊ," ಎಂದ ಸ್ನೊಫ್ರು ತನ್ನ ಮಿತ್ರನಿಗೆ.
 ನಕು ಸೆಬೆಕು ನೋಡಿದ :
 “ ಈ ಜೇನು ಯಾರೂ ಮುಟ್ಟಬಾರ್ದು.ಇದು ರಾಜಗೃಹದ ಆಸ್ತಿ-ಅಂತ ನಾಯಕರು ಅಪ್ಪಣೆ ಕೊಡಸ್ತಾರೆ !”
 ನೆಫಿಸ್ ಮನೆಯಲ್ಲಿ ಎರಡು ಮೂರುಬಾರಿ ರಾಮೆರಿಪ್ಟಾನ ಶಿಕ್ಷಣದ ಪ್ರಸ್ತಾಪ ಮಾಡಿದ್ದಳು,ಗಂಡನೊಂದಿಗೆ.
 ಪ್ರತಿಸಲವೂ, "ಆಗಲಿ ನೆನಪಿದೆ" ಎಂದಿದ್ದ, ಮೆನೆಪ್ಟಾ. ಎರಡು ಸಂಗತಿಗಳು ನಾಯಕನನ್ನು ಕಾಡುತ್ತಿದ್ದುವು:ತನ ಮಗನೊಬ್ಬನಿಗೇ ಓದು ಬರಹ ಕಲಿಸುವುದು ಸರಿಯೇ? ಅಲ್ಲದೆ, ಇಪ್ಯುವರ್ಗೆ ಈಗಿರುವ ಕೆಲಸದ ಹೊರೆಯೇ ಹೆಚ್ಚಲ್ಲವೆ?
  ಹುಡುಗನ ವಿದ್ಯಾಭಾಸದ ಬಗೆಗೆ ಮೆನೆಪ್ಟಾ ತಾನಾಗಿ ಹೇಳಬಹುದೆಂದು ಇಪ್ಯುವರ್ ಬಹಳ ದಿನ ಕಾದ. ಏನೂ ಹೇಳದೇ ಇದ್ದಾಗ ಸ್ವತಃ ಮತ್ತೊಮ್ಮೆ ಆ ಮಾತು ಎತ್ತಿದ.
 "ನಿಮಗೆ ಶ್ರಮವಾಗೋದಿಲ್ವಾ ಇಪ್ಯುವರ್?" 
 “ನನಗೆ ಶ್ರಮವೆ? ಇಲ್ಲ, ನಾಯಕರೇ....”
 "ಹೆಚ್ಚು ಹುಡುಗರು ಬಂದರೇ?"
 "ಅಯ್ಯೋ! ಯಾರು ಬರ್ತ್ತಾರೆ?”
 “ಹಾಗಲ್ಲ.ವಿಚಾರಿಸಿ ನೋಡೋಣ.”
 "ರಾಮೆರಿಪ್ಟಾ ಜತೆ ಎಷ್ಟು ಜನ ಬೇಕಾದರು ಬರಲಿ.. ಪಾಠ ಹೇಳ್ತೇನೆ.”
 "ಸ್ಥಳ-ರಾಜಗೃಹದ ಮಹಡಿ ಆಗಬಹುದಲ್ಲ?”
 "ಪ್ರಶಸ್ತವಾಗಿದೆ.”
 "ಸೊಥಿಸ್ ನಕ್ಷತ್ರ ಉದಯಿಸುವುದು ಯಾವತ್ತು?”
 "ಇನ್ನು ಇಪ್ಪತ್ತೆಂಟು ದಿನ ಇದೆ,”
 "ನೂತನ ವರ್ಷಾರಂಭದಿಂದಲೇ ಪಾಠ ಆರಂಭಿಸೋಣ.”