ಪುಟ:Mrutyunjaya.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಮೃತ್ಯುಂಜಯ

  ಡಂಗುರದವನು ಊರಲ್ಲಿ ಸಾರಿದ :
  "ತಮ್ಮ ಮಕ್ಕಳು ಓದು ಬರಹ ಕಲೀಬೇಕೂಂತ ಇಷ್ಟ ಪಡೊ ತಾಯಿ ತಂದೆ ಲಿಪಿಕಾರ ಇಪ್ಯುವರ್ ಹತ್ತಿರ ಹೆಸರು ಕೊಡ್ಬೇಕು.”
  ನೆಫಿಸ್ ಗಂಡನನ್ನು ಕೇಳಿದಳು :
  "ರಾಮೆರಿಗೆ ಬೆರೆಯೇ ಪಾಠ ಹೇಳಿಸೋದಕ್ಕಾಗೋಲ್ವಾ?”
   ಮೆನೆಪ್ಟಾ ತಿಳಿಯಹೇಳಿದ :
  “ಭೇದ ಭಾವ ಸಲ್ಲ ನೆಫಿಸ್.ಬೇರೆಯವರೂ ಒಟ್ಟಿಗಿದ್ದರೆ ರಾಮೆರಿ ಅವರಿಗಿಂತ ಚೆನ್ನಾಗಿ ಕಲೀಬೌದು."
  ಡಂಗೂರ ಕೇಳಿದೊಡನೆಯೇ ಧಾವಿಸಿ ಬಂದವನು ಅಪೆಟ್.
   "ಶಾಲೆ ಉಗ್ರಾಣ ವಸತಿ-ನೆನಪಿದೆ. ಮಹಾಪೂರ ಬರೋದಕ್ಕೆ ಮುಂಚೆ ಕೆರೆ ಬಾವಿ ಕೂಳ ಕಾಲುವೆಗಳ ಹೂಳು ತೆಗಿಬೇಕಲ್ಲ?.ಅದಕ್ಕೆ ಆದ್ಯತೆ. ಪ್ರವಾಹದ ಅವಥೀಲಿ ಕಟ್ಟಡದ ಕೆಲಸ. ಶಾಲೆ ಸಿದ್ದವಾದ ಮೇಲೆ ಅಲ್ಲೀಯೇ ಪಾಠಗಳು ನಡೀತವೆ."
   "ಇಪ್ಯುವರ್ ಗೆ ವೃಥಾ ತೂಂದರೆ. ನಾನೇ ಪಾಠ ಹೇಳ್ತೇನೆ."
   "ಶಾಲ ಕಟ್ಟಡ ಸಿದ್ದವಾಗೂವರೆಗೂ ಇಪ್ಯುವರ್ ಹೇಳ್ಲಿ."
   "ಮಂದೆ ಪಾಠ ಹೇಳೋ ಕೆಲಸ ನನ್ನ ಮಗ ಮಾಡ್ತಾನೆ."
   "ಸಂತೋಷ."
        
      *      *      *      *    
   ನೀರಾನೆ ಪ್ರಾಂತ ತನ್ನದೇ ಆಡಳಿತ ರೂಪಿಸಿಕೊಂಡು ಮೂರು ತಿಂಗಳಾದರೂ ಭೂಮಾಲಿಕರ ಸಮಸ್ಯೆ ಬಗೆಹರಿದಿರಲಿಲ್ಲ.
  ಮೊದಲನೆಯ ತಿಂಗಳಲ್ಲೇ ನುಟ್ಮೋಸ್ ರಾಜಧಾನಿಯಿಂದ ಒಬ್ಬ ದೂತನನ್ನು ಗುಟ್ಟಾಗಿ ತನ್ನ ಮನೆಗೆ ಕಳಿಸಿದ್ದನೆಂದೂ ತನ್ನ ಪ್ರೀತಿಪಾತ್ರ