ಪುಟ:Mrutyunjaya.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೩೭

ದಾಸಿಯನ್ನು ಕರೆಸಿಕೊಂಡನೆಂದೂ ಸುದ್ದಿ ಹುಟ್ಟಿತು.ಈ ಸುದ್ದಿಗೆ ಮೂಲ ಅಲ್ಲಿನ ಒಬ್ಬ ಸೇವಕ. ದೋಣಿ ಅಪರಾತ್ರಿಯಲ್ಲಿ ಬಂದಿತಂತೆ. ಊರಿಗೆ ದೂರದಲ್ಲೇ ದಂಡೆ ಮುಟ್ಠಿ, ಬೆಳಗಾಗುವುದರೊಳಗೆ ಹೊರಟು ಹೋಯಿತಂತೆ....

 ಹೇಗೋ ಊರಿನ ಹೊರವಲಯದಲ್ಲೇ ಇದ್ದ ವಸತಿ ಪ್ರದೇಶ. ಸೆತೆಕ್ ನಖ್ತ‌‌‌‌‌‌‌‌, ಸೆನ‍ಉಸೈರ್ಱ್,ಹೆಜಿರೆ,ಸಿನ್ಯುಹೆ ತಮ್ಮಷ್ಟಕ್ಕೆ ತಾವಾಗಿ ಇರತೊಡ ಗಿದರು. ರಾಜಧಾನಿಯಿಂದ ದಂಡು ಬರುತ್ತದೆಂದು ಕಾದದ್ದೇ ಬಂತು. ನುಟ್‍ಮೋಸನ ದೂತನ ಚಟುವಟಿಕೆಯ ವಿಷ‍ಯ ತಿಳಿದು ಅವರು ಸಿಟ್ಠಾದರು. ತಮಗೋಸ್ಕರ ಯಾವ ಸಂದೇಶವನ್ನೂ ಅವನು ಕಳುಹಿಸಿರಲಿಲ್ಲ.
 "ಇಷ್ಟು ದಿವಸ ಅವಳನ್ನು బిಟ್ಟು ಹ್ಯಾಗಿದ್ದನೋ ರಾಜಧಾನಿಯಲ್ಲಿ. ಹಾಸಿಗೆ ಸುಖಕ್ಕೆ ಬೇರೆ ಅಂಥದೇ ಬೋಂಬೆ ಸಿಗಲಿಲ್ಲವೇನೋ?" ಎಂದು ಕೂಗಾಡಿದರು.
  ಅವರ ಸೇವಕರಲ್ಲಿ ನಂಬುಗೆಯವರು ದಿನವೂ ಊರಿನೋಳಕ್ಕೆ ಹೋಗಿ ಸುದ್ದಿ ತರುತ್ತಿದ್ದರು.
  "ಭೂಮಾಲಿಕರಲ್ಲಿಗೆ ಕಂದಾಯ ವಸೂಲಿಗೆ ಹೋಗ್ವೇಡಿ. ಆವರಾಗಿಯೇ ತಂದು ಕೊಡ್ತಾರೋ ನೋಡೋಣ,” ಎಂದಿದ್ಧ ಮೆನೆಪ್‍ಟಾ.
  ಬರೇ ಹತ್ತರಲ್ಲಿ ಒಂದು ಭಾಗ. ಆದರೆ ಇಪ್ಯುವರನ ಬಳಿ ಇದ್ದ ಸುಳ್ಳು ದಾಖಲೆಯ ಪ್ರಕಾರ ಅಲ್ಲಿ ಇರುವ ದಾಸ್ತಾನಿನ ಆಧಾರದ ಮೇಲೆ ಆಗಬೇಕಾದ ಸಂದಾಯ.
  ವಸೂಲಿಗೆ ಬರದೇ ಇದ್ದುದನ್ನು ಕಂಡು ಅವರಿಗೆ ಹೆದರಿಕೆ. 'ನಮ್ಮ ತಂಟೆಗೆ ಬರಲಾರರು,' ಎಂದುಕೊಂಡರು ಭೂಮಾಲಿಕರು.
  ಅರ್ಚಕನಿಗೆ ಹೇಳಿ ಕಳುಹಿಸಿದ್ದಾಯಿತು.
  "ದೇವಮಂದಿರಕ್ಕೆ బన్ని" ಎಂದ ಆತ.
  ಸಿನ್ಯುಹೆಯ ಪತ್ನಿಯ ಆರೋಗ್ಯ ತುಸು ಸುಧಾರಿಸಿತು-ಎಡಗೈಯ

ಚಲನೆಯೊಂದನ್ನು ಬಿಟ್ಟು. ಅವಳನ್ನು ನೋಡುವುದಕ್ಕೂ ಅರ್ಚಕ ಬರಲಿಲ್ಲ.