ಪುಟ:Mrutyunjaya.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಮೃತ್ಯುಂಜಯ

  "ಸಾಧ್ಯವಿದ್ದದ್ದನ್ನೆಲ್ಲ ಮಾಡಿಯಾಯ್ತಲ್ಲ,"ಎಂದ ಆತ.
ಸೆತೆಕ್‍ನಖ್ತ್ ಮಂದಿರಕ್ಕೆ ಹೋಗಿ ರೇಗಾಡಿದ.
  "ಅಪೆಟ್ ! ನಿಜ ಹೇಳಿ. ನೀವು ನಮ್ಮ ಪಕ್ಷವೊ ? ಅವರ 
ಪಕ್ಷವೊ ?"
  "ನಾನು ದೇವರ ಪಕ್ಷ."
  "ಬುದ್ಧಿವಂತರು !”
  ನೀರಾನೆ ಪ್ರಾಂತದ ಎದುರು ದಂಡೆಯಲ್ಲಿದ್ದುದು ಟಗರು ಪ್ರಾಂತ ; ಉತ್ತರ ದಿಕ್ಕಿನಲ್ಲಿ ಮೊಸಳೆ ಪ್ರಾಂತ;  ಜಿಂಕೆ ಪ್ರಾಂತ ದಕ್ಷಿಣದಲ್ಲಿ. ಮೊಸಳೆ, ಜಿಂಕೆ ಪ್ರಾಂತಗಳ ಗಡಿಯನ್ನು ಕಾಲ್ನಡಿಗೆಯಿಂದಲೇ ದಾಟುವುದು ಸಾಧ್ಯ ವಿತ್ತು. ದೋಣಿಗಳಲ್ಲಿ ನದಿ ದಾಟಿ ಟಗರು ಪ್ರಾಂತವನ್ನು ಮುಟ್ಟಿತ್ತಿದ್ದರು. ಸೆತೆಖ‍್ ನಖ್ತ್ ಮತ್ತು ಸೆನ್ಉಸರ್ಟ್ ಆ ಪ್ರಾಂತಗಳ ಭೂಮಾಲಿಕರಲ್ಲಿಗೆ ಸೇವಕರನ್ನು ರಹಸ್ಯವಾಗಿ ಕಳುಹಿಸಿದಳು. ಏನು ನಡೆಯಿತೆಂಬುದನ್ನು ತಿಳಿಯಲು ಅಲ್ಲಿ ಕುತೂಹಲವಿತ್ತೇ ಹೊರತು, ನೆರವಿನ ಯಾವ ಆಶ್ವಾಶನೆಯೋ ಅಲ್ಲಿಂದ ಬರಲಿಲ್ಲ.
  (ಟಿಗರು-ನೀರಾನೆ ಪ್ರಾಂತಗಳ ಕೆಲವರಲ್ಲಿ ಪರಸ್ಪರರನ್ನು ಕಾಣಲು ಬರುವ ಹೋಗುವ ಪದ್ಧತಿ ಇತ್ತು. ಬುಡಕಟ್ಟಗಳು ಬೇರೆ ಬೇರೆಯಾದರೂ, ಕಟ್ಟಳೆ ಮಿಾರಿದ ಒಂದೆರಡು ವಿವಾಹಗಳೂ ಜರುಗಿದುವು. ಇಲ್ಲಿನ ಘಟನೆ ಗಳಿಂದ ಎದುರು ದಂಡೆಯ ರೈತರೂ ಇತರ ಶ್ರಮಜೀವಿಗಳೂ ಚಕಿತರಾದರು. ಇಲ್ಲಿ ಭೂಕಂದಾಯ ಅರ್ಧಕ್ಕೆ ಇಳಿಯಿತೆಂಬ ಸುದ್ದಿಯಿಂದ ಅಲ್ಲಿನವರಿಗೆ ಅಚ್ಚರಿ. ನದಿ ದಾಟಿ ಬಂದು ಇಲ್ಲಿನ ನಿರ್ಮಾಣ ಕಾರ್ಯಗಳನ್ನು ಕಂಡು ಹೋಗುವ ತವಕ ಅವರಿಗೆ ಎದುರು ದಂಡೆಯಲ್ಲಿ ಅಲ್ಲಿ ಊರಿರಲಿಲ್ಲ, ದೋಣಿಕಟ್ಟಿ ಇರಲಿಲ್ಲ. ಅವು ಇದುದು ಉತ್ತರದಲ್ಲಿ. ಒಪ್ಪೊತ್ತಿನ ದೋಣಿ ದೂರದಲ್ಲಿ. ಆದರೂ ಜನ ಬರುತ್ತಿದ್ದರು. ಅಂಥವರ ಸಂಖ್ಯೆ ಹೆಚ್ಚಿದಾಗ, "ನೀರಾನೆ ಪ್ರಾಂತಕ್ಕೆ ಯಾರೂ ಹೋಗಬಾರದು" ಎಂದು ಅಲ್ಲಿನ ಪ್ರಾಂತಪಾಲ ಆಜ್ಞೆ ವಿಧಿಸಿದ್ದ. ಈ ಸುದ್ದಿ ಈಸಿ ಬಂದಾಗ ಇಲ್ಲಿನವರಿಗೆ ಹೆಮ್ಮೆ.)
  ಮೆನೆಪ್ಟಾನೋಂದಿಗೆ ಸ್ನೊಫ್ರು ಮತ್ತು ಸೆಬೆಕ್ಖು ಮಾತ್ರ ಇದ್ದ

                               -ಪ್ರಜ್ನ.ಎ.
                                1PSEng