ಪುಟ:Mrutyunjaya.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೩೯

ಒಂದು ದಿನ, ಖ್ನೆಮ್‍ಹೊಟಿಪ್ ಅಸಹನೆಯ ಸ್ವರದಲ್ಲಿ ಕೇಳಿದ:
  "ಎಷ್ಥು ದಿನ ಅಂತ ಹೀಗೆಯೇ ಬಿಡೋದು ఈ ಭೂಮಾಲಿಕರನ್ನು ?"
  ಮೆನೆಪ್‌‌‌‌‌‌‌‍ಟಾನೆಂದ :
  "ಮಹಾಪೂರ ಬಂದು ಇಳಿಯೋ ವೇಳೆಗೆ ಸಮಸ್ಯೆ ತಾನೇ ಬಗೇಹರೀತದೆ. ಅವರ ನೂರಾರು             ಹೊಲಗಳಲ್ಲಿ ಉಳುಮೆ ಬಿತ್ತನೆ ಮಾಡೋದಕ್ಕೆ ಕೆಲಸಗಾರರು ಎಲ್ಲಿ ಸಿಗ್ತಾರೆ? ಆಗ ಅವರು ಮಾತುಕತೆಗೆ  ಬರಲೇಬೇಕು."
  "ಇನ್ನೂ ನಾಲ್ಕೈದು ತಿಂಗಳು ಕಾಯ್ಬೇಕೆ ? ಅವರು ನಮ್ಮಪಾದಗಳಿಗೆ ನೆಟ್ಟಿರೋ ಮುಳ್ಳು. ಕೀವಾಗಿ, ತೊಂದರೆಯಾದೀತು."
  "ಅವರಿಂದ ಅಪಾಯ ಇಲ್ಲ ಅಂತ ನಾನು ಹೇಳ್ತಾ ಇಲ್ಲ, ಹೊಗೆ ಕಾಣಿಸಿದ ತಕ್ಷಣ ನೀರೋ ಮರಳೋ ಉಗ್ಗೊಣ. ನಮ್ಮ ಗೂಢಚಾರರು ಎಚ್ಚರವಾಗಿರ್ ಬೆಕು. ಅವರ ಉಸ್ತುವಾರಿ ನೋಡ್ಕೋ."
  ಮೆನೆಪ್ಟಾನೇನೋ ಹೀಗೆ ಹೇಳಿದ. ಆದರೆ ಖೈಮ್ಹೊಟೆಪ್‌‌‌‌‌‌‌‍ನ ಅಸಮಾಧಾನ ಅಂಟಿಕೊಂಡಿತು. ಆ ತಿಂಗಳು ಹಿರಿಯರು ಸಮಿತಿಯ ಸಭೆಯಲ್ಲಿ ಭೂಮಾಲಿಕರ ಪ್ರಶ್ನೆ ಚರ್ಚೆಗೆ ಬಂತು.
  "ಹೋರಾಟ ಅವರಿಂದ ಸಾಧ್ಯವಿಲ್ಲ. ನಮ್ಮ ಇಪ್ಪತ್ತು ಯುವಕರು ಸಾಕು. ಅವರ ಆಸ್ತಿಪಾಸ್ತಿ ಎಲ್ಲಾ ವಶಪಡಿಸ್ಕೋಬೌದು,” ಎಂದ ಹೆಮ್‌ಟಿ.
  ಸೆಮನೆಂದ:
  "ಮಾತುಕತೆಗೆ ಕರೆಯೋಣ. ಸೊಥಿಸ್ ಉದಯಕ್ಕೆ ಹತ್ತು ದಿನ ಇದೆ ಎನ್ನುವಾಗ ಆಮಂತ್ರಣ ಕಳಿಸೋಣ. ನೂತನ ವರ್ಷಾರಂಭದ ದಿವಸವೇ ಇತ್ಯರ್ಥವಾಗ್ಲಿ.”
  ಉಳಿದವರು ಒಪ್ಪಿದರು. ಇಪ್ಯುವರ್ ಹೋಗಿ ಕರೆಯಬೇಕು, ಖ್ನೆಮ್ ಹೊಟಿಪ್ ಜತೆಗಿರಬೇಕು-ಎಂದು ತೀರ್ಮಾನವಾಯಿತು.
        *                *                *             *           
  ಹೊಸ ವರ್ಷದ ಆರಂಭ ಹತ್ತಿರ ಬಂದಿತೆಂದು ಊರಿನ ಜನರಿತೆಲ್ಲ ಸಡಗರ. ನದೀ ದಡದವರ ಉತ್ಸಾಹ ಒಳನಾಡಿಗೂ ಹಬ್ಬಿತು.
                             
                                  - ಪ್ರಜ್ನ.ಎ.
                                    1 PSEng