ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೪೦ ಮೃತ್ಯುಂಜಯ
ಅಂಥ ವಾತಾವರಣದಲ್ಲಿ ಇಪ್ಯುವರ್ ಮತ್ತು ಖೈಮ್‍ಹೊಟೆಪ್ ಭೂಮಾಲಿಕರನ್ನು ಕಾಣಲು ಹೋದರು, "ನೂತನ ವರ್ಷದ ದಿನ ರಾಜಗೃಹಕ್ಕೆ ಮಾತುಕತೆಗೆ ಬರಬೇಕೂಂತ ನಿಮ್ಮೆನ್ನೆಲ್ಲ ಕರೆದಿದ್ದಾರೆ. ಈ ವರ್ಷದ ಉತ್ತನೆ ಬಿತ್ತನೆ ಇವೆಲ್ಲ ಅವತ್ತು ತೀರ್ಮಾನವಾಗ್ಬೇಕು ಬನ್ನಿ. ತಪ್ಪ ಬಾರ್ದು." ಇಪ್ಯುವರ್ ಆಹ್ವಾನ ನೀಡಿದ. ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ಮೌನ ವಾಗಿದ್ದರು ಸಿನ್ಯುಹೆ ಮಾತ್ರ ಕೃತಕ ನಗೆ ಬೀರಿದ. ಭೂಮಾಲಿಕರನ್ನು ರಾಜಗೃಹಕ್ಕೆ ಬರಹೇಳಿದ ಸುದ್ದಿ ಒಂದೇ ದಿನದಲ್ಲಿ ಮನೆ ಮಾತಾಯಿತು. ಅದರ ಬೆನ್ನಲ್ಲೇ ಇನ್ನೂ ಒಂದು ವದಂತಿ ಅಲೆಯಿತು:'ನೂತನ ವರ್ಷಾರಂಭದ ಉತ್ಸವದಲ್ಲಿ ಭೂಮಾಲಿಕರು ಭಾಗವಹಿಸಾರಂತೆ.'ಖ್ನೆಮ್‍ಹೋಟೆಪ್ ವದಂತಿಯ ಮೂಲವನ್ನು ಕೆದಕಿದ. ಭೂಮಾಲಿಕರ ವಸತಿ ಪ್ರದೇಶದಿಂದಲೇ ಅದು ಬಂದಿತ್ತು. ಮಾರನೇಯ ದಿನ ಬಟಾ ಓಡಿಬಂದ. "ಖೈಮ್, ಸೆತೆಕ್ನಖ್ತ್‌ನ ದೊಡ್ಡ ದೋಣಿ ಇದೆ ನೋಡು-ನಮ್ಮ ಕಟ್ಟೆಯ ಕೆಳಗಡೆ ದಂಡೆಯ ಮೇಲೆ? ತಾಳೆಗರಿ ಮುಚ್ಚಿತ್ತಲ್ಲ? ಅದಕ್ಕೆ ಬಣ್ಣ ಗಿಣ್ಣ ಬಳಿತಿದ್ದಾರೆ," ಎಂದ. "ಉತ್ಸವಕ್ಕೆ ತಯಾರಿ-ಅನ್ತಾರೆ; ಅಲ್ವಾ?" ಹಬ್ಬದ ಮುನ್ನಾದಿನ ಹಿರಿಯರ ಸಮಿತಿ ಅವಸರವಾಗಿ ಸಭೆ ಸೇರಿತು. ಸೆತೆಕ್‌ನಖ್ತ್, ಸೆನ್‌ಉಸರ್ಟ್ ಮತ್ತು ಹೆಜಿರೆ ಸೊಥಿಸ್ ನಕ್ಷತ್ರದ ಉದಯದ ರಾತ್ರೆ ಸಕುಟುಂಬರಾಗಿ ರಾಜಧಾನಿಗೆ ಪಲಾಯನ ಮಾಡುವರೆಂಬ ಖಚಿತ ವಾರ್ತೆ ತಿಳಿದುಬಂದಿತ್ತು. ಖೈಮ್ ಹೊಟಿಪ್ ವರದಿ ಮಾಡಿದ : "ಎಲ್ಲರೂ ಉತ್ಸವದ ಆಚರಣೆಯಲ್ಲಿರುವಾಗ ಓಡಿಹೋಗೋದು
-ಪ್ರಜ್ನ.ಎ. 1PSEng