ಪುಟ:Mrutyunjaya.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೧೪೧

ಸುಲಭವಾಗ್ತದೇಂತ ಈ ಏರ್ಪಾಟು."
ಹೆಮ್ ಟಿ ಅಭಿಪ್ರಾಯವಿತ್ತ :
"ಬಟಾನ ಒಂದು ದೋಣಿ ಸಾಕು. ನಡುನದೀಲೇ ಅವರನ್ನೆಲ್ಲ
ಹಿಡೀಬೌದು."
"ಹಿಡಿದು ಮಾಡೋದೇನು ?" ಎಂದು ಕೇಳಿದ ಮೆನೆಪ್‌ಟಾ.
"ಹ್ಞ. ಅದು ಬೇರೆಯೇ ಪ್ರಶ್ನೆ. ಚರ್ಚಿಸ್ಬೇಕು."
ಥಾನಿಸ್ ಕೇಳಿದ :
"ಹಿಡೀಲೇಬೇಕೇನು ?"
ಸೆಮನೆಂದ :
"ಹಿಡಿದರೆ ಇಲ್ಲಿಯೇ ಸೆರೆಯಲ್ಲಿಡಬೇಕು. ಕಾವಲು ಏರ್ಪಡಿಸ್ಬೇಕು.
ಹೋಗೋದಕ್ಕೆ ಬಿಟ್ಟರೆ ? ಈಗ ನುಟ್ ಮೋಸ್ ಹೋಗಿಲ್ವಾ ? ಗೇಬು
ಟೆಹುಟಿ ಓಡಿಲ್ವಾ ?"
ಹೆಮೋನ್ ನುಡಿದ :
"ಇವರ ಹೊಲಗಳು, ರಾಸುಗಳು ?"
"ಅವು ಜನರ ಸೊತ್ತು," ಎಂದ ಮೆನೆಪ್‌ಟಾ.
ಥಾನಿಸ್ ಗೊಂದು ಸಂದೇಹವಿತ್ತು :
"ಇವರೆಲ್ಲ ಮರಳಿ ಬಂದಾಗ ಏನಾಗ್ತದೆ ?"
ಮೆನೆಪ್ಟಾ ದೃಢವಾಗಿ ಅಂದ :
"ಮರಳಿ ಬಂದರೆ___ಅಲ್ಲವಾ ? ಅಂಥ ಪರಿಸ್ಥಿತೀಲಿ ಯಾವುದು
ನ್ಯಾಯೋಚಿತ ಅನಿಸ್ತದೋ ಅದನ್ನು ಮಾಡೋಣ."
ಹೆಮ್ ಟಿ ಹೇಳಿದ :
"ಆಕ್ರಮಣಕಾರರು ಬಂದ ಮೇಲೆ ಶಸ್ತ್ರಾಭ್ಯಾಸ ಸಲ್ಲದು. ನಮ್ಮ
ದಂಡು ನಾವು ಸಿದ್ಧಗೊಳಿಸ್ಬೇಕು. ನಾನು ತರಬೇತಿ ಕೊಡ್ತೆನೆ."
ಓಡಿಹೋಗುವವರನ್ನು ತಡೆಯುವುದು ಬೇಡವೆಂದೂ ನೀರಾನೆ
ಪ್ರಾಂತದ ರಕ್ಷಣೆಗಾಗಿ ದಂಡು ಕಟ್ಟಬೇಕೆಂದೂ ಹಿರಿಯರ ಸಮಿತಿ ನಿರ್ದೇಶ
ನೀಡಿತು.