ಪುಟ:Mrutyunjaya.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೪

ಮೃತ್ಯುಂಜಯ

"ಬಸಿರು ನಿಲ್ಲಲೇ ಇಲ್ಲ."
ಅವನು ಮಗುವಾಗಿ ಅವಳ ಸ್ತನಗಳನ್ನು ಚೀಪಿದ.
ಪುಲಕಗೊಳ್ಳುತ್ತ ಅವಳು ರಾಗವೆಳೆದಳು :
"ಊ ಊ ಪ್ಟಾ ಪ್ಟಾ...."
"ನಾಳೆ ಹೊಸ ವರ್ಷ ನೆಫಿ."
ತಡೆ ತಡೆದು ಅವಳೆಂದಳು :
"ಇವತ್ತು ಐಸಿಸ್‌ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ."
"ಬಾ ಐಸಿಸ್."
ಸೃಷ್ಟಿಕಾರ್ಯದಲ್ಲಿ ತನ್ಮಯರಾಗುವ ಸುಖ. ಕರಗದಂತೆ ಆ ಸ್ಥಿತಿ
ಯನ್ನು ಸೆರೆ ಹಿಡಿದು ಇಡುವ ಯತ್ನ.
("ಹೀಗೆಯೇ ಇರೋಣ." "ಹೂಂ. ಹೀಗೆಯೇ ಇರೋಣ.")
ಸುದೀರ್ಘವೆಂದು ಭ್ರಮೆ ಹುಟ್ಟಿಸುತ್ತ ಮುಂಜಾವದೆಡೆಗೆ ಧಾವಿಸಿದ
ಇರುಳು.
ನಿದ್ದೆ ಇಲ್ಲ. ("ಎಚ್ಚರವಾಗದೇ ಇದ್ರೆ ?") ಅದು ಇದು ಮಾತು.
"ನನ್ನ ಚಿಕ್ಕಮ್ಮನ ಹಳ್ಳಿಗೆ ಒಮ್ಮೆ ಹೋಗ್ಬೇಕು. ಖ್ನೆಮ್
ಹೊಟೆಪ್ ನೇ ಭಾಗ್ಯಶಾಲಿ. ಕಂದಾಯ ವಸೂಲಿಗೆ ಹೋದವನು ಮಾತಾ
ಡಿಸ್ಕೊಂಡು ಬಂದ."
"ಅವರನ್ನೇ ಇಲ್ಲಿಗೆ ಕರೆಸೋಣ."
"ಕರೆಸ್ಬಹುದು. ಆದರೆ ಇಲ್ಲೇನಿದೆ ? ರಾಣಿಯ ಹಾಗಿದ್ದಾಳೆ ನೆಫಿಸ್
ಅಂತ ಅವರು ತಿಳಕೊಂಡಿದ್ದಾರೆ. ಇಲ್ಲಿಗೆ ಬಂದು, ಅಯ್ಯೋ ಇಷ್ಟೇನೇ
ಅನ್ಬೌದು."
"ನನಗೆ ನೀನು ಯಾವಾಗಲೂ ರಾಣಿಯೇ ಅಲ್ವಾ ?"
"ಮಾತಿನಲ್ಲೇ ಆಯ್ತು ನನ್ನ ರಾಣೀತನ."
"ಹೊಲ ಇದೆ. ದುಡೀತೇವೆ, ಬೆಳೆಸ್ತೇವೆ. ಸಾಲ್ದೆ ?"
"ಅದಲ್ಲ....ನೆಜಮುಟ್ ಯಾವಾಗಲೂ ಪರಿಹಾಸ್ಯ ಮಾಡ್ತಾಳೆ."
"ಅವಳಿಗೆ ಹೊತ್ತು ಹೋಗೋದಿಲ್ಲ."