ಪುಟ:Mrutyunjaya.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೦

ಮೃತ್ಯುಂಜಯ

ವಿಷಯ ಮರೆತ್ಬಿಡು. ನಮಗೆ ಹೋರಿಗಳು ಬೇಕು ನಿಜ. ಮುಂದಿನ ವರ್ಷ
ಕೊಂಡ್ಕೊಳ್ಳೋಣ."
ನುಟ್ ಮೋಸ್ ನ ಕುಟುಂಬ ಸಿನ್ಯುಹೆಯ ಮನೆಯಲ್ಲಿ ನೆಲೆಸಿತು.
ಇಪ್ಯುವರ್ ಹೇಳಿದ :
"ನಿಮ್ಮ ಮನೆಯಲ್ಲೇ ನೀವಿರಬಹುದಲ್ಲ. ನಮ್ಮ ಆಕ್ಷೇಪವಿಲ್ಲ.
నిಮ್ಮ ಜೀವನೋಪಾಯಕ್ಕೆ ಸಾಲುವಷ್ಟು ಹೊಲಗಳನ್ನು ನಿಮಗೆ
ಬಿಟ್ಟಿದ್ದೇವೆ."
ನುಟ್ ಮೋಸನ ಪತ್ನಿ ಹೊಲಗಳ ವಿಷಯ ಏನನ್ನೂ ಹೇಳಲಿಲ್ಲ. ಆದರೆ
ವಾಸ ಮಾತ್ರ ಸಿನ್ಯುಹೆಯ ಮನೆಯಲ್ಲೇ ಎಂದಳು.
ಹೀಗಾಗಿ ನಾಲ್ಕು ದೊಡ್ಡ ಮನೆಗಳೂ ಬಡವರ ವಾಸಕ್ಕೆ ದೊರೆತುವು.
ಹೊಸ ಯಜಮಾನರಿಗೆ ಹೊಲಗಳನ್ನು ಹಸ್ತಾಂತರಗೊಳಿಸಿದ ದಿನ
ರಾಜಗೃಹದ ವಿಹಾರೋದ್ಯಾನದಲ್ಲಿ ಜನ ನೆರೆದರು. ಸುರೆ ಹರಿಯಿತು.
ಹಾಡು__ಕುಣಿತಗಳಲ್ಲಿ ಕಾಲ ಕಳೆಯಿತು.
ನದೀ ತಟಕ್ಕೆ ಹೋಗಿ ಬಂದವನೊಬ್ಬ : "ನಾಲ್ಕು ಬೆರಳು ನೀರು
ಏರಿದೆ," ಎಂದ.
ಪರಿಸರದ ಹೊಲಗಳೆಲ್ಲ ಜಲಾವೃತವಾಗಲು ನೀರಿನ ಮಟ್ಟ ನಾಲ್ಕಾಳು
ಏರಬೇಕು.
ಅದನ್ನು ಇದಿರು ನೋಡುತ್ತ ಜನ ಇತರ ದುಡಿಮೆಗಳಲ್ಲಿ ಮಗ್ನ
ರಾದರು.

****

ಧಾರಾಕಾರವಾದ ಮಳೆ ಎಂದರೇನೆಂಬುದನ್ನು ಅರಿತಿದ್ದವರು ನದಿಯ
ಮೂಲದತ್ತ ಸಂಚಾರಮಾಡಿದ್ದ ಅಂಬಿಗರು ಮಾತ್ರ.
ಅರ್ಚಕ ಒಮ್ಮೆ ಹೇಳಿದ್ದ :
" ರಾ ದೇವರು ತನ್ನ ಐಗುಪ್ತ ಸಂತಾನಕ್ಕಾಗಿ ನೆಲದ ಮೇಲೆಯೇ
ಒಂದು ನೀಲ ನದಿಯನ್ನು ಕೊಟ್ಟ; ಬೇರೆ ಜನರಿಗಾಗಿ ಆಕಾಶದಲ್ಲೊಂದು