ಪುಟ:Mrutyunjaya.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಮ್ರತ್ಯುಂಜಯ "ಆವನು ಹಾಗೇ ಸ್ವಲ್ಪ," ಎಂದ ಮೆನೆಪ್ಟಾ ನಸುನಗುತ್ತ, ಆಹೂರಾಳ ತೋಳಸೆರೆಯಿಂದ ಕೆಳಕ್ಕೆ ನುಸುಳಿ ಅವಳ ಮಗ___ಬರಿ ಮೈಯ ಹೆಣ್ಣ-ಅಂಬೆಗಾಲಿಡುತ್ತ ಮೆನೆಪ್ಟಾನ ಬಳಿಗೆ ಬಂತು. ಮೆನೆಪ್ತಾ ಮಗುನನ್ನೆತ್ತಿಕೊಂಡು ಕಚಗುಳಿ ಇಟ್ಟು, ಉಮ್ಮ ಕೊಟ್ಟೂ, ಕೆಳಕ್ಕೆ ಬಿಟ್ಟ, ತಾನು ಮಾಡಿದ ಸಾಹಸದ ವರದಿ ನೀಡಲು ತಾಯಿ ಯತ್ತ ಮಗು ಮತ್ತೆ ಅಂಬೆಗಾಲಿಟ್ಟಿತು. ಅಲ್ಲಿಂದ ಹತ್ತಿರದಲ್ಲೇ ಇದ್ದ ನೆಫಿಸಳೆಡೆಗೆ ಅದು ಹರಿದಾಡಿತು. "ಚೂಟ! ಚೂಟ!" ಎಂದಳು ನೆಫ಼ಿಸ್. ಬಂದವರು ನಾಲ್ಕು ದಿನ ಇದು ಹೋಗಬೇಕು ಎಂಬ ಆಸೆ ಮೆನೆಪ್ಟಾನ ಮಡದಿಗೆ, ಆದರೆ ಅಹೂರಾಗೆ ಸಿಂಹದ್ದೇ ಯೋಚನೆ. ಬೇಟೆಗಾರರನ್ನು ಕರೆದು ತರುತ್ತೇನೆ ಎಂದು ಹೇಳಿ ಬಂದಿದ್ದಳು. ಮರಳುವುದು ತಡವಾಗಿ ಮತ್ತೊಂದು ರಾಸು ನಾಪತ್ತೆಯಾದರೆ? “ ಇಲ್ಲವಮ್ಮ, ದಳಪತಿಯವರನ್ನು ಕರೆದುಕೊಂಡು ನಾಳೆ ನಸುಕಿನಲ್ಲೇ ಹೊರಡ್ಬೇಕು,” ಎಂದಳು ಅಹೂರಾ ದ್ರಡವಾಗಿ. ವಿಷಯ ತಿಳಿದೊಡನೆಯೇ, “ನಾವು ಬರೆವೆ, ನಾವು ಬತ್ತೇವೆ,” ಎಂದರು ನೂರಾರು ಜನ. ಅವರ ಪಾಲಿಗೆ ಎಂದಾದರೊಮ್ಮೆ ಲಭಿಸುವ ಸಿರಿನಂತಿಕೆ ಮೃಗಯಾ ವಿನೋದ.ಖೈಮ ಹೊಟೆಪ್ ಪ್ರಯಾಸಪಟ್ಟು ಸಂಗಡಿಗರ ಸಂಖ್ಯೆಯನ್ನು ಇಪ್ಪತ್ತಕ್ಕೆ ಮಿತಿಗೊಳಿಸಿದ. ಅಹೂರಾ ಎಚ್ಚರಿಸಿದಳು: “ಯಾರೂ ಬುತ್ತಿಗಿತ್ತಿ ತಂದು ನಮಗೆ ಅವಮಾನ ಮಾಡ್ಬಾರ್ದು." ಹೊರದುವ ಮೇಲೆಗೆ ನೆಫ಼ಿಸ್ಲೊಡನೆ ಅವಳೆಂದಳು: "ಮೊದಲಿದ್ದ ಹಾಗೇ ಇದ್ದೀಯಾ.........." ತನ್ನ ಬಸಿರಿನ ಕುರಿತು ಆಡುತ್ತಿರುನಳೇನೋ ಎಂದು ನೆಫ಼ಿಶ್ಗೆ ಕೆಂಪಿ ರುವೆ ಕಡಿದಂತಾಯಿತು.