ಪುಟ:Mrutyunjaya.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೧೫೪

ಮೃತ್ಯುಂಜಯ

ರೂಪಿಸಿಕೊಂಡ.
ಮುಖ್ಯಪಟ್ಟಣದಿಂದ ಭಟರು ಬಂದರೆಂದು ಹಳ್ಳಿಗರಿಗೆ ಈಗ ಭಯವಿಲ್ಲ.
ಆ ಭಟರ ನಾಯಕ ಖ್ನೆಮ್ ಅವರಿಗೆ ಅಪರಿಚಿತನಲ್ಲ.
"ಮೂರು___ನಾಲ್ಕು ತಿಂಗಳ ಹಿಂದೆ ಕಂದಾಯ ವಸೂಲಿಗೆ ಬಂದಿದ್ದಿರಿ
ಅಲ್ಲವಾ ಅಣ್ಣ ?" ಎಂದರು ಕೆಲವರು ಖ್ನೆಮ್ ನೊಡನೆ. ಅವನು ಮಹಾ
ಶೂರ. ನಿಷ್ಣಾತ ಬಿಲ್ಗಾರ ಎಂಬುದನ್ನೂ ಅವರು ಬಲ್ಲರು.
"ಬೇಟೆ ಹಗಲೊ ? ರಾತ್ರೆಯೊ ?"
___ತಿಳಿಯುವ ತವಕ ಹಲವರಿಗೆ.
ಫಲಿತಾಂಶದ ಬಗೆಗೆ ಯಾರಿಗೂ ಸಂದೇಹವಿರಲಿಲ್ಲ.
ಇಬ್ಬರು ಹೆಂಗಸರು ಬಂದು ರೊಟ್ಟಿ ತಟ್ಟಲು ಅಹೂರಾಗೆ ನೆರವಾದರು.
ಸಾಕಷ್ಟು ಹಿಟ್ಟಿತ್ತು.
ಗ್ರಾಮ ಸಮಿತಿಯವರೆಂದರು :
"ಅಹೂರಾ, ನಿನ್ನೊಟ್ಟಿಗೆ ಜಗಳವಾಡಿ ನಾವು ಬದುಕೋದುಂಟೆ ?
ಮಧ್ಯಾಹ್ನದ ಆತಿಥ್ಯ ನಿನ್ನದು; ಬೇಟೆ ಆದ ಮೇಲೆ ಔತಣ ಗ್ರಾಮದ್ದು."
ಖ್ನೆಮ್ ಹೊಟೆಪ್ ಅಹೂರಾಗೆ ಹೇಳಿದ:
"ಮಧ್ಯಾಹ್ನ ಹೊಟ್ಟೆ ಭಾರವಾಗಬಾರ್‍ದು ಅಕ್ಕಾ. ಒಬ್ಬೊಬ್ಬರಿಗೆ
ಒಂದೊಂದು ರೊಟ್ಟಿ. ಅಷ್ಟೇ. ಅದೂ ಇದೂ ತಿನ್ನಿಸಿದೆ ಅಂದ್ರೆ ನಿದ್ದೆ
ಬಂದ್ಬಿಟ್ಟೀತು. ಇನ್ನೂ ಬಿಸಿಲು ಜೋರಾಗಿರುವಾಗ್ಲೇ ನಾವು ಖರ್ಜೂರ
ತೋಪು ತಲಪ್ಬೇಕು."
"ಗೊತ್ತಪ್ಪ, ಗೊತ್ತು," ಎಂದಳು ಅಹೂರಾ, ತಯಾರಾಗಿದ್ದ ರೊಟ್ಟಿ
ಗಳನ್ನು ಎಣಿಸುತ್ತ........
ತುತ್ತು ಊಟವಾದೊಡನೆಯೇ ಹಳ್ಳಿಗರನ್ನು ಕರೆದುಕೊಂಡು ಬೇಟೆ
ಗಾರರು ಹೊರಟರು. ತೋಪಿನ ದೇವತೆಗೆ ಅರ್ಪಿಸಲೆಂದು ಖರ್ಜೂರ, ಸೌತೆ,
ಈರುಳ್ಳಿಗಳನ್ನು ಖ್ನೆಮ್ ಹೊಟೆಪ್ ಕಟ್ಟಿಸಿಕೊಂಡ. ಗಾಳಿ ಪಶ್ಚಿಮದಿಂದ
ಬೀಸುತ್ತಿತ್ತು. ದಿಬ್ಬ ತಲಪುವವರೆಗೂ ಮನುಷ್ಯರ ಸುಳಿವು ಸಿಂಹಕ್ಕೆ ಹತ್ತ
ಲಾರದು. ಖ್ನೆಮ್ ಮತ್ತು ಹತ್ತು ಜನ ದಿಬ್ಬವನ್ನೇರಿದಂತೆ, ಉಳಿದವರು