ಪುಟ:Mrutyunjaya.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೧೫೯

ತ್ತಿದ್ದಾಗ, ಖ್ನೆಮ್ ಹೊಟೆಪ್ ಮತ್ತು ಬಟಾ ಅವಸರದ ಹೆಜ್ಜೆ ಇಡುತ್ತ ಅಲ್ಲಿಗೆ
ಬಂದರು.
ಬೆಳಗಾದ ಮೇಲೆ ಮೂರು ತಾಸು ಕಳೆಯಿತೆಂದು ಗಡಿಯಾರ ತೋರಿಸು
ತ್ತಿತ್ತು. ಅರಳಿದ ಕಣ್ಣುಗಳಿಂದ ಗಡಿಯಾರವನ್ನು ನೋಡಿ, ಬಟಾ ಮತ್ತು
ಖ್ನೆಮ್ ಬದಿಗೆ ಸರಿದರು. ಏನೋ ಮಹತ್ವದ ವಿಷಯವಿದೆ ಎಂದು ಅರಿತ
ಮೆನೆಪ್ಟಾ ಅವರ ಬಳಿ ಸಾರಿದ.
ಬಟಾ ಅಂದ :
"ಕಟ್ಟಿಗೆ ಒಂದು ವ್ಯಾಪಾರೀ ದೋಣಿ ಬಂದಿದೆ. ದೊಡ್ಡದು.
ಮೂವತ್ತು ಮಾರುದ್ದ___ನಾಲ್ವತ್ತು ಹುಟ್ಟುಗಳಿವೆ. ಬೆಳಿಗ್ಗೆ ಬಂತು.
ಮೇಲಿನಿಂದ ನುಬಿಯದ ದಿಕ್ಕಿನಿಂದ. ದೋಣಿ ಆ ಕಡೆಯದಲ್ಲ, ವ್ಯಾಪಾರ
ಕ್ಕಾಗಿ ಆ ದಿಕ್ಕಿಗೆ ಹೋಗಿತ್ತಂತೆ. ನದಿಯಲ್ಲಿ ಒಂದೆರಡು ಸಲ ಇದನ್ನ ನೋಡಿದ
ನೆನಪಿದೆ."
"ಇಲ್ಲಿಂದ ಈ ದೋಣಿ ಮೆಂಫಿಸಿಗೆ ಹೋಗ್ತದಂತೆ," ಎಂದ ಖ್ನೆಮ್
ಹೊಟೆಪ್.
"ದೋಣಿಯ ಯಜಮಾನ ಸಿಕ್ಕಿದ್ನೆ ?"
ಖ್ನೆಮ್ ಉತ್ತರಿಸಿದ :
"ಇಲ್ಲ. ಆದರೆ ಅವನ ದೂತ ಬಂದಿದ್ದಾನೆ. ಉದ್ಯಾನದಲ್ಲಿದ್ದಾನೆ.
'ನಾಯಕರನ್ನು ನೋಡ್ಬೇಕು, ಅನುಕೂಲ ತಿಳಿಸಿದರೆ ಬರ್ತೇನೆ'___ಅಂತ ಆತ
ಹೇಳಿಕಳಿಸಿದ್ದಾನೆ."
ನಸುನಗೆ ಬೀರಿ ಮೆನೆಪ್ಟಾ ನುಡಿದ :
"ಅವನು ವರ್ತಕ. ಬರಲಿ, ಆಗದೆ ?"
ಖ್ನೆಮ್ ಮತ್ತು ಬಟಾ 'ಸಮ್ಮತ' ಎನ್ನುವಂತೆ ತಲೆ ಆಡಿಸಲು,
ಮೆನೆಪ್ಟಾ ಗಡಿಯಾರದತ್ತ ನೋಡಿ, "ಈಗಲೇ ಬರಲಿ," ಎಂದ.
ಈ ಉತ್ತರವನ್ನೊಯ್ಯುವಂತೆ ದೂತನಿಗೆ ತಿಳಿಸಲು ಬಟಾ ಹೊರಟು
ಹೋದ.
ಮೆನೆಪ್ಟಾ ವೇದಿಕೆಯ ಮೇಲಿನ ಪೀಠದಲ್ಲಿ ಕುಳಿತ. ಇಪ್ಯುವರ್