ಪುಟ:Mrutyunjaya.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಮೆನೆಪ್ ಟಾ "బన్ని," ఎంದ. ದೋಣೆಯ ಒದೆಯ ಹಲ್ಲುಗಳನ್ನು ತೋರ್ಪಡಿಸುತ್ತ, ಆತ್ಮವಿಶ್ವಾಸ ದಿಂದ ವೇದಿಕೆಯ ಬಳಿಗೆ ನಡೆದು, ಮೆನೆಪ್ಟಾನೈಗೆ ಬಾಗಿ ವಂದಿಸಿದ. ವಂದನೆ ಸ್ವೀಕರಿಸಿದ ಮೆನೆಪ್ಟಾ ವೇದಿಕೆಯ ಬಲಮಗ್ಗುಲ್ಲಿದ್ದ ಪೀಠಗಳನ್ನು ತೋರಿಸಿದ. ಆಸೀನನಾದ ಅತಿಥಿ ದೂರದಲ್ಲಿಯೆ ನಿಂತಿದ್ದ ಆಳುಗಳಿಗೆ ಸನ್ನೆ ಮಾಡಿದ. ಅವರು ವೇದಿಕೆಯ ಬಳಿ ಸಾರಿದರು. ಖ್ನೆಮ್ ಹೊಟೆಪ್ ಮತ್ತು ಬಟಾ ತಾವೂ ಅತ್ತ ಬಂದು ಅತಿಥಿಯ ಎದುರು ಸಾಲಿನಲ್ಲಿದ್ದ ಪೀಠಗಳ ಹಿಂದೆ ನಿಂತರು. ಇಪ್ಯುವರನೂ ಬಲಮಗುಲಿಗೆ ಬಂದ. ಅತಿಥಿಯೆಂದ : “ ಮಹಾ ಹಸುರು ಸಮುದ್ರದಿಂದ ನುಬಿಯದವರೆಗೆ ನನ್ನನ್ನು ಕೆಪ್ಟು ಅಂತ ಕರೆತಾರೆ. ಪೆರೋ ಅವರು అಬ್ಟುಗೆ ಹೋದಾಗ ನಾನು ಇದೇ ದಾರಿ ಯಾಗಿ ನುಬಿಯದ ಕಡೆಗೆ ಹೋದೆ. ಅಲ್ಲಿದ್ದಾಗ ನೀರಾನೆ ಪ್ರಾಂತದಿಂದ ಅದ್ಭುತ ಸುದ್ದಿ ಬಂತು. ನಾಲ್ಕು ದೇಶ ಸುತ್ತಿದ್ದೇನೆ. ಕಂಡಿರದ ಕೇಳಿರದ ಘಟನೆ. ವಾಪಸಾಗುವಾಗ ಈ ಪ್ರಾಂತವನ್ನು ಸಂದರ್ಶಿಸಿ ಹೋಗ್ವೇಕು; ಜನನಾಯಕನನ್ನು ಕಂಡು ಮುಂದೆ ಪ್ರಯಾಣ ಬೆಳೆಸ್ಬೇಕು—ಅಂದ್ಕೊಂಡೆ. ದೇವರು ನನ್ನ ಬಯಕೇನ ಈಡೇರಿಸಿದ್ದಾನೆ. ವರ್ತಕನ ಅಲ್ಪ ಕಾಣಿಕೆ ಸ್ವೀಕರಿಸ್ಬೇಕು.” ಆಳುಗಳು ತಾವು ಹೊತ್ತಿದ್ದುದನ್ನು ವೇದಿಕೆಯ ಮುಂದುಗಡೆ ಸಾಲಾಗಿ ಎರಿಸ್ಸಿ, ದೂರ ಸರಿದರು. ಕೆಫ್ಟು ಸಂಜ್ಞೆ ಮಾಡಿದೊಡನೆ ವೇದಿಕೆಗೆ ನಮಿಸಿ ಹೊರಕ್ಕೆ ಉದ್ಯಾನದತ್ತ ಇಳಿದರು. ಕೆಫ್ಟು ತಾನೆದ್ದು, ಕಾಣಿಕೆಗಳಿಗೆ ಮುಚ್ಚಿದ್ದ ವಸ್ತ್ರದ ಚೌಕಗಳನ್ನು ಎತ್ತಿದ. ಮೆನೆಪ್ಟಾ ಅಲ್ಲಿದುದನ್ನು ಗಂಭೀರವಾಗಿ ದಿಟ್ಟಿಸಿದ. ಇತರರು ಕುತೂಹಲದಿಂದ ನೋಡಿದರು. ಅಲಂಕರಿಸಿದ ಹಿಡಿಯ ಕಂಚಿನ ಕಠಾರಿ; ೧೧