ಪುಟ:Mrutyunjaya.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ತೊಗಲಿನ ಬತ್ತಳಿಕೆ: ಜಿಂಕೆಯ ಚರ್ಮ; ಸೊಗಸಾದ ಪೆಪೈರಸ್ ಹಾಳೆಗಳು; ಲಿಪಿ ಸುರುಳಿ ಇಡುವ ಅಲಂಕೃತ ಜಾಡಿ; ಪುಟ್ಟ ಪೆಟ್ಟಿಗೆ-ಅದರ ಮುಚ್ಚಳದ ಮೇಲೆ ಹಸ್ತಿದಂತದಿಂದ ಮಾಡಿದ ಒಸೈರಿಸನ ಕೆತ್ತನೆ ಚಿತ್ರ. ಮತ್ತೆ ಕುಳಿತು, ಒಲಿಸುವ ಧ್ವನಿಯಲ್ಲಿ, ಕೆಫ್ಟು ಅಂದ: “ನೆಬೆತ್ ಪೆರ್ ರಾಜಗೃಹದಲ್ಲಿ ವಾಸ ಮಾಡೋದಿಲ್ಲ, ಇಲ್ಲಿ ಕುಡಿತ ಕುಣಿತ ಇಲ್ಲ-ಅನ್ನೋದು ನುಬಿಯಕ್ಕೆ ಹೋಗ್ತಿ ದ್ದಾಗಲೇ ನನಗೆ ಗೊತ್ತಾಯ್ತು. (ಸ್ವರ ತಗ್ಗಿಸಿ) ಸೈನೆ ಹತ್ತಿರ ನನ್ನ ನಾವೆ ನಿಲ್ಲಿಸ್ತೇನೆ. ಸಣ್ಣ ದೋಣಿ ಗೊತ್ತು ಮಾಡಿ ತಿರುವಿನಿಂದ ಮೇಲಕ್ಕೆ ಸಾಮಾನು ಕಳಿಸ್ತೇನೆ. ಒಮ್ಮೊಮ್ಮೆ ನನ್ನ ಸಹಾಯಕರೇ ನುಬಿಯದ ವ್ಯಾಪಾರ ಮುಗಿಸಿ ಬರ್ತಾರೆ, (ವೊದಲಿನ ಸ್ವರದಲೇ) ನಾಯಕರು ತಮ್ಮ ಮನೇಲೇ ವಾಸಿಸ್ತಾರೆ ಅಂತಲೂ ತಿಳೀತು. ಬಾಹುಬಲದಿಂದ ಗದ್ದುಗೆಗೆ ಬಂದೋರು ದರ್ಪದಿಂದ ಆಳ್ತಾರೆ, ಕಿರಿಚ್ತಾರೆ, ಕೂಗಾಡ್ತಾರೆ. ನೀವು ಜನರ ఒలವನ್ನು ಗೆದ್ದು ನಾಯಕರಾದೋರು. ಇಂಥದು ಈವರೆಗೆ ಎಲ್ಲಿಯೂ ಆಗಿಲ್ಲ: ಮುಂದೆ ಆಗ್ತದೋ ಇಲ್ವೋ ಹೇಳಲಾರೆ. ಅಂಥವರ ಸನ್ನಿಧಿಗೆ ಯಾವ ಕಾಣಿಕೆ ಒಯ್ಯಬಹುದು ? ಅಮೂಲ್ಯ ಹರಳಿನ ಆಭರಣಗಳೆ ? ಅಲಂಕರಣ ಸಾಮಗ್ರಿಗಳೆ ? ಸುಗಂಧ ದ್ರವ್ಯಗಳೆ ? ಎಷ್ಟು ಸುತ್ತು ಸುತ್ತಿದರೂ ಮೈ ಕಾಣಿಸುವ ಮಿನೋ ದ್ವೀಪದ ವಸ್ತ್ರವೆ? ವಿದೇಶೀ ಪೀಯೂಷವೆ ? ಅಂತಃಪುರಕ್ಕೆ ಸೇರಿಸಲು ಯೋಗ್ಯರಾದ ಅಂಗನೆ ಯರೆ ? ಯೋಚಿಸಿ ಯೋಚಿಸಿ ತಲೆ ಬಿಸಿಯಾಯ್ತು, ಆಡಂಬರವಿಲ್ಲದ ಬದುಕು. ಮುಚ್ಚುಮರೆ ಇಲ್ಲದ ನಡವಳಿಕೆ, ಕಡಲ ಮಧ್ಯದ ಒಂಟಿ ಜೀವಕ್ಕೆ ಹಠಾತ್ತನೆ ದೇವದರ್ಶನವಾದರೆ ಹೇಗಾಗ್ಬೇಡ ? ಈಗ ನನ್ನದು ಅದೇ ಪರಿಸ್ಥಿತಿ." ಕೆಫ್ಟು ಮಾತು ನಿಲ್ಲಿಸಿದ. ಹೊಗಳಿದ್ದು ಇಷ್ಟು ಸಾಕು ಅನಿಸಿತು. ಆತ ರಾಜನೀತಿ ನಿಪುಣ. ಆ ಬಗೆಗೆ ಅವನಿಗೆ ಹೆಮ್ಮೆಯೇ, ವಾಸ್ತವವಾಗಿ ಇಲ್ಲಿ ಎದ್ದು ನಿಂತು ಮಾತನಾಡುವುದು ಕೂಡಾ ಅನಗತ್ಯ, ನಿಸ್ಸಂದೇಹವಾಗಿ, ಅವನ ಪಾಲಿಗೆ ಅದೊಂದು ವಿಶಿಷ್ಟ ಪರಿಸ್ಥಿತಿ. ತಾನು ಇಟ್ಟ ಹೆಜ್ಜೆ ಸರಿಯೊ,