ಪುಟ:Mrutyunjaya.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ದಿಂದ ಸಂಪತ್ತು ಸಂಗ್ರಹವಾಗ್ತದೆ. ಮೊದಲ್ನೇದರಲ್ಲಿ ನೀವು ಸಮರ್ಥರು. ಎರಡ್ನೇ ವಿಷಯದಲ್ಲಿ ನನ್ನ ಸೇವೆ ಸಲ್ಲಿಸೋದಕ್ಕೆ ನಾನು ಸಿದ್ಧ.” ಮೆನೆಪ್ಟಾನೆಂದ : "ಬಹಳ ಮಟ್ಟಿಗೆ ನಾವು ಸ್ವಾವಲಂಬಿಗಳು. ಕೆಲವೊಂದು ಸಾಮಗ್ರಿಗಳು ಮಾತ್ರ ನಮ್ಮಲ್ಲಿಲ್ಲ. ನಾರಗಸೆ ಎಣ್ಣೆ, ಹುದುಗು ಪುಡಿ ಇಂಥವು. ನಿಮಗೆ ಗೊತ್ತೇ ಇದೆ. ಮರಗಳಂತೂ ನಮಗೆ ಮಾತ್ರವಲ್ಲ, ಇಡೀ ಐಗುಪ್ತಕ್ಕೆ ಹೊರಹಿನಿಂದ-ಲೆಬನ್ ನಿಂದ-ಬರಬೇಕು. ” “ ಅಂಥ ಸಾಮಗ್ರಿಗಳನ್ನು ಪೂರೈಸೋ ಜವಾಬ್ದಾರಿ ನನ್ನದು. ವರ್ಷಕ್ಕೆ ಎರಡು ಸಾರೆ ಬರ್ತೇನೆ. ಕುಯಿಲು ಆಮದ್ಮೇಲೆ, ನುಬಿಯದ ಕಡೆಗೆ ಹೋಗ್ತಾ, ಒಮ್ಮೆ, ಆಗ ನಿಮಗೆ ಬೇಕಾದ ಸಾಮಗ್ರಿಗಳನ್ನು ಇಳಿಸಿ ಹೋಗ್ತೇನೆ. ಮಹಾ ಪೂರದ ವೇಳೇಲಿ, ನುಬಿಯದಿಂದ ವಾಪಸಾಗ್ತಾ, ಮತ್ತೊಮ್ಮೆ. ಆಗ ನಿಮ್ಮ ಸಿದ್ಧ ಸಾಮಗ್ರಿಗಳನ್ನು ಕೊಂಡ್ಕೋತೇನೆ.” ಮೆನೆಪ್ಟಾ ಇಪ್ಯುವರ್ ನನ್ನು ಕರೆದು ನುಡಿದ : " ವಾಣಿಜ್ಯಕ್ಕೆ ಸಂಬಂಧಿಸಿದ ಈ ಕೆಲವು ವಿಷಯಗಲನ್ನು ಬರಕೊಳ್ಳಿ. (ಅತಿಥಿಯತ್ತ ತಿರುಗಿ) ಕೆಫ್ಟು, ನಮ್ಮ ಪ್ರಾಂತದಿಂದ ನೀವು ಕೊಳ್ಳಬಹು ದಾದ ವಸ್ತುಗಳು ಯಾವುವು ?”

  • ನೀವು ಏನುಕೊಟ್ಟರೂ ಕೊಳ್ತೇನೆ ಅಧಿಕ ಧಾನ್ಯ ನಿಮ್ಮಲ್ಲಿ ಎಷ್ಟಿದ್ದರೂ ನನಗಿರಲಿ. ಭೂಮಿಯ ಹಲವಾರು ಕಡೆ ನನಗೆ ಗಿರಾಕಿ ಗಳಿದ್ದಾರೆ...ಒಳಗೆ ಬರ್ತಾ ಗಡಿಯಾರ ನೋಡಿದೆ. ಉತ್ಕೃಷ್ಟ ! ಬಡಗಿ ಕೆಲಸ ಅಂದರೆ ಹಾಗಿರ್ಬೇಕು. ಎಪ್ಪತೈದು ಉಟೆನ್ ಮೌಲ್ಯ ಕಟ್ಟಬೌದು. ಇಂಥದು ವರ್ಷಕ್ಕೆ ಇಪ್ಪತ್ತು ನನಗಿರಲಿ. ಇನ್ನೊಂದು ಹೊಸ ನಮೂನೆ ಗಡಿಯಾರ ಮೆಂಫಿಸ್ ನಲ್ಲಿ ಸಿದ್ಧವಾಗಿದೆ. ಹಾಲುಗಲ್ಲಿನದು . ಮೇಲೂ ಕೆಳಗೂ ಅಗಲ ಬಾಯಿ. ಮಧ್ಯದಲ್ಲಿ ಸಣ್ಣ ರಂದ್ರ. ನುಣುಪಾದ ಮರಳು ತುಂಬಿದ್ರೆ ಒಂದು ತಾಸಿಗೊಮ್ಮೆ ಬರಿದಾಗ್ತದೆ. ಮುಂದಿನ ಸಲ ಒಂದು ತಂದ್ಕೊಡ್ತೇನೆ. ನಿಮ್ಮ ಕುಶಲಕರ್ಮಿಗಳು ಅಂಥದನ್ನು ಸುಲಭವಾಗಿ ಮಾಡ ಬೌದು. ವರ್ಷಕ್ಕೆ ಹತ್ತು ನಾನು ಕೊಂಡ್ಕೋತೇನೆ. ಮರದ ಗಡಿಯಾರದಷ್ಟೇ