ಪುಟ:Mrutyunjaya.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೌಲ್ಯ. ನಿಮ್ಮಲ್ಲಿ ಒಳ್ಳೇ ಬೇಟೆಗಾರರಿದ್ದಾರೆ ಅಂತ ಕೇಳಿದ್ದೇನೆ. ಕೇಳೋದೇನು ಬ್ಂತು? ಸಿಂಹವೆ ಸಾಕಶಿಯಾಗಿ ನಿಂತಿದಿಯಲ್ಲ? ಹರಿಣದ್ದು, ಚಿರತೇದು, ಸಿಂಹದ್ದು ಚಮರ್ ಒಂದು ಚದರ ಮೊಳ್ ತುಂಡಿಗೆ ಎರಡು ಉಛಿನ್. ಹೊಲಿದು ಯೋಧರ ಉಡುಗೆ ರೂಪದಲ್ಲಿ ಕೊಡೋದಾರೆ ಒಂದಕ್ಕೆ ಐದು ಉಛಿನ್. ಕೆತ್ತನೆ ಕೆಲಸದ ಕ್ಯಗೋಲು ಊರುಗೋಲು ಒಂದು ಉಛಿನ್. ನೇಗಿಲು ಎರಡು ಉಛಿನ್. ಒಂದು ಜಾಡಿ ಚೇನು ಒಂದು ಉಛಿನ್. ಒಳೇ ರಾಸುಗಳಿದ್ದರೆ ತಿಳಿಸಿ. ಬೇಕು. ಸಾಗಿಸೋದಕ್ಕೆ ರಾಸುದೊಣಿ ಕಳಿಸ್ತೇನೆ. ಒಂದು ಹೋರಿಗೆ ನೂರ ಹತ್ತೋಂಭತ್ತು ಉಛಿನ್. ಇಷ್ಟ ಬೆಲೆ ಕೊಡ್ತಾ ನಲ್ಲ-ಇವನಿಗೆ ಇದರ ಎಷ್ಟು ಪಟ್ಟು ಲಾಭವಿದೆಯೊ ಏನೊ ಅಂತ ನೀವು ಆಶ್ಚಯರ್ ಪಡಬೌದು. ನಿಮ್ಮದೇಶದಲ್ಲಿ ಹೇಳೋ ಹಾಗೆ ಮಾಛ್ನನ ಆಣೆಯಾಗಿ ನುಡೀತೀನೆ: ವ್ಯಾಪಾರದಲ್ಲಿನಷ್ಟವೂ ಉಂಟು, ಲಾಭವೂ ಉಂಟು. ನಷ್ಟವಾಯ್ತು ಅಂತ ಕುಗ್ಗೋದಿಲ್ಲ; ಲಾಭವಾಯ್ತು ಅಂತ ಹಿಗ್ಗೋದಿಲ್ಲ. ಮಾಛ್ ನನ್ನನ್ನು ನೆಡಸ್ಕೊಂಡು ಹೊಗ್ತದೆ."

         ಈ ಬಗೆಯ ವಾಣಿಜ್ಯದ ಉಪಯುಕ್ತತೆಯನ್ನು ಮೆನೆಪ್ಛಛಾ ಆಗಲೇ ಮನಗಂಡಿದ್ದ. ವಿವರ ತಿಳಿದಾಗ ಹಷಿರ್ತನಾದ.
         ಶಸ್ತ್ರಾಸ್ತ್ರಗಳ ಸಮಸ್ಯೆಯೂ ಅವನನ್ನು ಕಾಡಿತ್ತು. ಖ್ನೆಮಾನ ಕಡೆಗೊಮ್ಮೆ ನೋಡಿ ಆತ ಕೀಳಿದ:
                   "ಕೆಫು, ನಮಗೆ ಶಸ್ತ್ರಾಸ್ತ್ರ ಸರಬರಾಜು ಮಾಡ್ತೀರಾ?"
                  " ಎಷ್ಟು ಶಾಂತಿಪ್ರಿಯನಾದರೂ ಹೋರಾಟ ಮನುಷ್ಯನಿಗೆ ತಪ್ಪಿದ್ದಲ್ಲ. ಈಛ್ ಕಠಾರಿ ಬಿಲ್ಲು ಬಾಣ ತರಬಲ್ಲೆ."
          "ಹಾಗೆಯೇ ಹತ್ತು ಹತ್ತು ಸುತ್ತಿಗೆ ಗರಗಸ ಭೈರಿಗೆಗಳೂ ಬೇಕು."
          "ಇವು ಎರಡೆರಡು ಈಗಲೇ ಸಿದ್ಧ. ವಿನಮೆಯನಾಗಿ___"
          "ಬಟ್ಟೆಗಿಟ್ಟೆ?'
          "ಓಹೋ!"
          " ನಮ್ಮ ಮುಖಂಡರು ಸ್ನೋಪ್ರು ಅಂತ ಇದ್ದಾರೆ."
          ಕೆಸ್ಟು ನಸುನಕ್ಕು ಅಂದ: