ಪುಟ:Mrutyunjaya.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

ಮಗನಿಗೆ ತಾಯಿ ದಪ್ಪ ರೊಟ್ಟಿಯ ಎರಡು ತುಣುಕನ್ನೂ ಈರುಳ್ಳಿ
ಯನ್ನೂ ಕೊಟ್ಟಳು.
ಸುರುಳಿಗಳೊ೦ದಿಗೆ ಪಕ್ಕದಲ್ಲಿ ಕುಳಿತಿದ್ದ ಲಿಪಿಕಾರನೊಬ್ಬ ಮೂವರ ಈ
ಪುಟ್ಟ ಸಂಸಾರವನ್ನು ನೋಡುತ್ತಿದ್ದ. ಗಟ್ಟಿಯಾಗಿ ಆತನೆಂದ:
“ಚೂಟಿ ಹುಡುಗ. ವಿದ್ಯಾವಂತನಾಗ್ತಾನೆ. ಸ೦ಶಯವಿಲ್ಲ.”
ತಾಯಿ ತಂದೆ ಇಬ್ಬರ ಕಿವಿಗೂ ಆ ಮಾತು ಬಿತ್ತು.
“ಕೇಳಿಸ್ತೇನೋ ರಾಮೆರಿ?” ಎಂದಳು ತಾಯಿ.
ತಾನು ಗೆದ್ದೆ ಎನಿಸಿತು ಲಿಪಿಕಾರನಿಗೆ. ಆತ ಮುಂದುವರೆಸಿದ :
“ವಿದ್ಯೆ ಸುಮ್ಸುಮ್ನೆ ಬರೋದಿಲ್ಲವ್ವ. ಪಾಠಗಳ್ನ ಕೊಂಡ್ಕೋಬೇಕು,
ಮಗನನ್ನು ಮಂದಿರಕ್ಕೆ ಕಳಿಸ್ಬೇಕು.”
ನೆಫಿಸ್ ಗಂಡನತ್ತ ನೋಡಿದಳು :
“ಕೊಡಿಸ್ತೇನೆ ಅಂದಿದ್ದೆಯಲ್ಲ?”
ಮೆನೆಪ್ಟಾಗೆ ಅದು ಹೆಮ್ಮೆಯ,ಸ೦ತೋಷದ ವ್ಯವಹಾರ. ಆತ ಲಿಪಿ
ಕಾರನತ್ತ ಹೊರಳಿದ.
ಗತ್ತಿನಿಂದ ಅವನ ಕಡೆ ತಿರುಗಿ ಲಿಪಿಕಾರ ಕೇಳಿದ:
“ನೀನೇ ಆರಿಸ್ತೀಯೊ ?”
“ಹೌದು.”
“ಓದೋಕೆ ಬರ್ತದೋ ?”
“ಇಲ್ಲ ಗುರುಗಳೆ, ನೀವೇ ಓದಿ ಹೇಳಿ.”
“ಬಡ ಲಿಪಿಕಾರನನ್ನು ಗುರು ಅಂತ ಕರೆದೆಯಲ್ಲ! ಪ್ಟಾ ದೇವ ನಿನಗೆ
ಒಳ್ಳೇದು ಮಾಡ್ಲಿ.ಓದಿ ಹೇಳಿದ್ದಕ್ಕೆ ಒ೦ದು ರೊಟ್ಟಿ ಶುಲ್ಕ. ನೀನು
ಆರಿಸಿದ ಪಾಠಕ್ಕೆ ಬೇರೆ.”
“ಆಗಲಿ,ಆಗಲಿ,”ಎ೦ದಳು ನೆಫಿಸ್.ದಾರಿಯ ಧೂಳು ಬೀಳದ೦ತೆ
ಗಂಟನ್ನು ತುಸು ಮುಚ್ಚಿದಳು;ಎತ್ತಿ ಲಿಪಿಕಾರನ ಗೂಡೆಯ ಬಳಿ ಇರಿಸಿದಳು.
ಹುಡುಗ ಈರುಳ್ಳಿ ಕಚ್ಚಿ ರೊಟ್ಟಿ ಮೆಲ್ಲುತ್ತ ತಂದೆಯ ಹತ್ತಿರ ನಿ೦ತ .ಅವನ
ಮಗ್ಗುಲಿಗೆ ತಾಯಿ ಸರಿದಳು.