ಪುಟ:Mrutyunjaya.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಫ್ಛು ಮಾತು ಬದಲಿಸಿದ. "ಆಹಾ! ಈ ಕಂಬಗಳಲ್ಲಿ ಒಂದಕ್ಕೆ ನಾಯಕರನ್ನು ಬಿಗಿದ್ರು!" ಮೆನೆಪ್ಛಾನನ್ನು ಕಟ್ಟಿದ್ದ ಕಂಬದತ್ತ ಸಾಗಿ, "ಹೌದು; ಈ ಕಂಬಕ್ಕೆ." ಎಂದ ಇಪ್ಯುನರರ.

   ಮೆನೆಪ್ಛಾನನ್ನು ಎದ್ದು ನಿಂತು, "ಸ್ನೋಫ್ರು ಸೆಬೆಕ್ಖು ಇನ್ನೇನು ಬಂದ್ಭಿಡ್ತಾರೆ. ನಾವು ಉದ್ಯಾನ ನೋದ್ತಿರೋಣ," ಎಂದ.
    ಕೆಫ್ಛು ಎದ್ದು ಮೆನೆಪ್ಛಾನನ್ನು ಹಿಂಬಾಲಿಸಿದ. ಸಿಂಹವಿದ್ದಲ್ಲಿಗೆ ಬಂದಾಗ ಎರಡು ಕ್ಷಣ ನ್ಂತು. "ಸೊಗಸಾದ ಪ್ರಸಾದನ ಕೆಲಸ. ಮನುಷ್ಯ ರಕ್ಷಿತ ಶವವಾಗಿ ಗೋರಿ ಕಾಣ್ತಾನೆ. ಪ್ರಾಣಿ ಸೊರಗದ ಬೊಂಬೆಯಾಗಿ ನಿತ್ಯಾಲಂಕಾರಕ್ಕೆ ನೆರೆವಾಗ್ತದೆ....ಕಣಿಗೆ ಕಪ್ಪು ಪಟ್ಟಿ! ಇಲ್ಲಿ ಕಂದಾಯ ಅಧಿಕಾರ ಟಿಹುಟಿಯ ಭಟರ ಮೂಖ್ಯಸ್ಥನ ಒಂದು ಕಣ್ಣು ಹೋಯ್ತಂತಲ್ಲ? ಕೆಳಗಡೆ ಏನೋ ಬರೆದಿದ್ದೀರಿ.ನನಗೆ ಓದಲು ಬರದು. ನಿಮಗೆ ಗೊತ್ತು. ನಮ್ಮದೇಶದಲ್ಲಿ ಆಡುವ ಬಾಶೆಗೆ ಲಿಸಿ ಇಲ್ಲ.

ಏನಿದ್ದರೂ, ನತರ್ಕರ ಗುರುತಿನ ಗೆರೆಗಳು ಮಾತ್ರ. ಇದು ಈ ಸ್ಂಹ ಹೊಡೆದವರ ಹೆಸರು ಇರಬೇಕು."

   "ಹೌದು. ಖ್ನೇಮ್ ಹೋಟಿಪ್ ಹೊಡೆದದ್ದು."
   "ದಳಪತಿ? ಸ್ಂತೋಷ,ಸ್ಂತೋಷ."
   "ಬಕಿಲ? ಕಣ್ಣು ಕಳಕೊಂಡವನು?"
   "ಹೌದು." 
   ಸಿಂಹವನ್ನು ಅದರ ಬಲಗಣ್ಣ ನೋ ಮತ್ತೊಮ್ಮೆ ಕೆಪ್ಛು ನೋಡಿ ಖೋ ಖೋ ಎಂದು ನಕ್ಕ. ಎರಡು ಹೆಜ್ಜೆ ಮುಂದೆ ಸರಿದು ಗಡಿಯಾರದ ಬಳಿ ನಿಂತು, "ಭೇಷ್!" ಎಂದು ಮೆಚ್ಚುಗೆಯ ಉದ್ಗಾರ ತೆಗೆದ.
       ಮಹದ್ವಾರದ ಹೊರಗೆ ಆತನೆಂದು:
   "ಈ ನಿಮ್ಮ ವಿಜಯ ಸ್ತಂಬವೂ ರಮ್ಯ ಕಲ್ಪನೆ, ಪ್ರಾಕಾರವಿಲ್ಲದ ರಾಜ ಗೃಹ; ಮುಖವಾಡವಿಲ್ಲದ ಮನುಷ್ಯರು. ವಿಸ್ಮಯಕರ! ಇಲ್ಲಿಗೆ ಬಂದು ನಾನು ಕಂಡದ್ದನ್ನು ಪೆರೋಗೆ ತಿಳಿಸೋ ವಿಷಯ____"