ಪುಟ:Mrutyunjaya.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೧೭೩

"ಪಶ್ಚಿಮ ತಲಪೋದು ಅಂದರೆ ಸಾಯೋದು. ಗೋರಿ ಕಾಣೋದು__
ತಿಳೀತೇನ್ರೋ?"
ಹುಡುಗರು ತಲೆ ಆಡಿಸುತ್ತಿದ್ದರು.
ಇಪ್ಯುವರ್ ಗೆ ಈಗ ಬಹಳ ಅರ್ಥಪೂರ್ನವಾಗಿ ಕಂಡ ಒಂದು ಹಳೆಯ
ಮಾತು ಇತ್ತು. ದೇವರು ಹೇಳಿದ್ದು:
"ಬಡವರು ಮತು ದೊಡ್ದ ಮನುಷ್ಯರು ಇಬ್ಬರಿಗೂ ಹಕ್ಕು ಇರಲೆಂದೇ
ಮಹಾ ಪ್ರವಾಹವನ್ನು ನಾನು ಸೃಷಿಸಿದೆ."
ಇದಕ್ಕೂ ಇಪ್ಯುವರ್ ನವ್ಯಾಖ್ಯೆ ಇತ್ತು:
"ನೆನಪಿಡಿ! ನೆನಪಿಡಿ! ದೇವರೆ ಹೇಳಿದ್ದಾನೇ - ಶ್ರೀಮಂತರಿಗೆ
ಇರೋ ಹಕ್ಕು ಬಡವರಿಗೂ ಇದೆ."
ನಾಣ್ನುಡಿಗಲಳನ್ನು ಇಪ್ಯುವರ್ ಹೇಳಿಕೊಡುತ್ತಿದ್ದ:
"ಆಡಿದ ಮಾತು ಹೃದಯಕ್ಕೆ ಇಂಧನ."
ಅವನೆನ್ನುತ್ತಿದ್ದ:
" ಈ ಸುಂದರ ವಾಕ್ಯ ಮರೀಬೇಡಿ! ಬೆಳಗಿನ ಗರ್ಭ್ದೆದಿಂದ್ ರಾ
ಹೊರ ಬರುತ್ತಾನೆ.'"
ಹುಡುಗರು ಆ ಮಾತನ್ನು ಪುನರುಚ್ಚರಿಸುತ್ತಿದ್ದರು.
ರಾಜಗೃಹದ ಈ ಲೆಕ್ಕಗ ಲಿಪಿಕಾರನ ಹರಿಮೆಯನ್ನು ಬಣ್ಣಿಸದ
ದಿನ ವಿಲ್ಲ : "ಲಿಪಿಕಾರನಾಗು......ಆಲಂಕೃತ ಗೋರಿಕಲ್ಲಿಗಿಂತ ಹೆಚ್ಚು ಪರಿಣಾಮ
ಕಾರಿ , ಪುಸ್ತಕ."
ಶಿಷ್ಯರನ್ನು ಆತ ಪ್ರಶ್ನಿಸುತ್ತಿದ್ದ:
"ಲಿಪಿಕಾರ ಏನೇನು ಮಾಡುತ್ತಾನೆ, ಹೇಳಪ್ಪ. ನೀನು...ನೀನು...."
ಸರಿಯಾದ ಉತ್ತರ ರಾಮೆರಿಪ್ ಟಾನಿಂದ ಬರುತಿತ್ತು.
"ಕಸಾಯಿ ಮನೆಗೆ ಹೊರಟ ರಾಸುನಳನ್ನು ಲಿಪಿಕಾರ ಎಣಿಸುತ್ತಾನೆ;
ವಿಕ್ರಯಕ್ಕೆಂದು ಅಳೆಯುವ ಧಾನ್ಯದ ಲೆಕ್ಕನಿಡುತ್ತಾನೆ ; ಕರಾರು-ಉಯಿಲು
ಗಳನ್ನು ಬರೆದು ಕೊಡುತ್ತಾನೆ."