ಪುಟ:Mrutyunjaya.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೧೭೫

ಹಳ್ಳಿಗಳೆಲ್ಲ ಮುಳುಗಡೆಯಾಗುವ ಸಂಭವ. ಹಾಗೆಯೇ ಕೆಲವು ಮೊಳ ಕೆಳಗೇ
ಮಹಾಪೂರ ಮುಕ್ತಾಯವಾದರೆ, ಸಮೃದ್ಧ ಫಸಲು ಸಾಧ್ಯವಾಗದ ಪರಿಸ್ಥಿತಿ.
ಹಾಗೂ ಆಗಲಿಲ್ಲ; ಹೀಗೂ ಆಗಲಿಲ್ಲ. ಹಿತಮಿತಿಯನ್ನು ಮುಟ್ಟ
ಮಹಪೂರ ನಿಂತಿತು. ಅದು ಅವರ ಪಾಲಿಗೆ 'ಒಳ್ಳೆಯ ನೀಲ ' ಸಂವತ್ಸರ.
ಭವಿಷ್ಯದತ್ತ ಹಣಿಕಿ ನೋಡಲು ಅರ್ಚಕ ಅಪೆಟ್ ತನ್ನ ಮಂತ್ರ ತಂತ್ರ
ಜ್ಙಾನವನ್ನೆಲ್ಲ ಬಳಸಿ ಯತ್ನಿಸಿದ್ದ. ಶುಭ ಅಶುಭಗಳ ಮಿಶ್ರ ಸೂಚನೆಗಳು
ಕಂಡಿದ್ದುವು. ಯಾವುದೂ ಸ್ಪಷ್ಟವಾಗಿರಲಿಲ್ಲ. ಶಾಲಾ ಕಟ್ಟಡ ಸಿದ್ಧವಾದೊ
ಡನಯೇ ಉಗ್ರಾಣ ವಸತಿಗಳ ನಿರ್ಮಾಣ ಆರಂಭ ಎಂದು ಇಪ್ಯುವರ್ ತಿಳಿಸಿದ್ದ.
ಹೊಸ ವ್ಯವಸ್ಥೆಯಲ್ಲಿ ఆ ಬಡಪಾಯಿ ಕೊನರಿದ ರೀತಿ ಕಂಡು ಅಪೆಟ್ ಗೆ
ಅಸೂಯೆ. ಜತೆಯಲ್ಲೇ, ಇಪ್ಯುವರ್ ತನ್ನ ವಿರೋಧಿಯಲ್ಲ ಎಂಬ ಅಲ್ಪ
ಸಮಾಧಾನ.
ಈಗ ಅಪೆಟ್ ಹೆಚ್ಚು ಹೆಚ್ಚಾಗಿ ಮಂದಿರಕ್ಕೇ ಅಂಟಿಕೊಂಡಿರುತ್ತಿದ್ದ.
ದೇವರು ಪೂಜೆ ; ಅಸ್ವಸ್ಥರಾಗಿ ಔಷಧಿ ನೀಡಿಕೆ,ಮಂತ್ರ ಚಿಕಿತ್ಸೆ;
ಕಟ್ಟಡ ಕೆಲಸದತ್ತ ಗಮನ.
ನೀಲ ಭರತದ ಹಬ್ಬದಂದು ಮಂದಿರಕ್ಕೆ ಕಳೆಕಟ್ಟಿತು. "ದೇವಮಂದಿರ,
ರಾಜಗೃಹ ಎರಡೂ ಕಡೆ ದೀಪಾಲಂಕಾರ ಇರಬೇಕಪ್ಪ,” ಎಂದಿದ್ದ ಅಪೆಟ್
ಇಪ್ಯುವರ್ ನೊಡನೆ. ನಾರುಗಸೆ ಎಣ್ಣೆಯ ದಾಸ್ತಾನು ಚೆನ್ನಾಗಿತ್ತು. ಬೊಕ್ಕ
ಸದ ಲೆಕ್ಕಿಗ ಕೈ ಬಿಗಿಹಿಡಿಯುವ ಅಗತ್ಯವಿರಲಿಲ್ಲ.
ಮುಖ್ಯ ಪಟ್ಟಣದ ಹೊರವಲಯದ ಹತ್ತಿರ ಹತ್ತಿರಕ್ಕೆ ಬಂದಿತ್ತು,
ರೊಚ್ಚೆನೀರು. ರಾಜಗೃಹದ ಮಹಡಿಯ ಮುಖಮಂಟಪದಲ್ಲಿ ನಿಂತರೆ,
ಜಗತ್ತು ಜಲಮಯವಾಗಿ ತೋರುತ್ತಿತ್ತು. ಆಗ ಅವರ ಊರು, ఒంದು
ಪುಟ್ಟ ದ್ವೀಪ. ಮಹಾಪೂರದ ಅವಧಿಯಲ್ಲಿ ಐಗುಪ್ತದ ಎಲ್ಲ ಪಟ್ಟಣಗಳೂ
ಸಾಗರದ ನಡುಗಡ್ಡೆಗಳಂತೆ ಕಾಣಿಸುತ್ತಿದ್ದವು.(ಮೆನೆಪ್ಟಾ ಬಲ್ಲ: ಜಲ
ಪ್ರಳಯದ ಹಳೆಯ ಕಥೆ ಹೇಳುವಾಗ ಎಲ್ಲ ಕಡೆಯವರೂ 'ಆ ಪ್ರಳಯದಲ್ಲಿ
ಮುಳುಗದೆ ಉಳಿದದ್ದು ನಮ್ಮೂರು ಮಾತ್ರ' ಎನ್ನುತ್ತಿದ್ದರು! ) ಈಗ ನದೀ
ಪಾತ್ರವನ್ನು ಗುರುತಿಸುವುದು ಕಷ್ಟ. ದೋಣಿಗಳಿಗೆ ಅದರ ಅಗತ್ಯವೂ ఇల్ల.