ಪುಟ:Mrutyunjaya.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೬

ಮೃತ್ಯುಂಜಯ

ಯಾವ ಊರಿಗೆ ಬೇಕಾದರೂ ಸರಿಯೆ, ನೀರಿನ ಮೇಲೆ ನೇರ ಸಂಚಾರ.
ಮುಂದೆ ಒಂದು ತಿಂಗಳಲ್ಲಿ ನೀರು ಇಳಿಮುಖ. ಅದು ಭೂಮಿಯ
ಪುನರುದಯ. ಹೊಲಗಳಲ್ಲಿ ನೀರು ಉಳಿಸಿ ಹೋದ ಫಲವತ್ತಾದ ಕರಿಮಣ್ಣಿ
ನಲ್ಲಿ ಸುಲಭ ಉಳುಮೆ, ಸರಾಗ ಬಿತ್ತನೆ.
ಎಲ್ಲೆಲ್ಲೂ ಚಟುವಟಿಕೆ. ಜನ ಈಗ ಕೃಷೀವಲರು.
(ಈ ವರ್ಷ ಮಹಾಪೂರದ ಆವಧಿಯ ಮೂರು ತಿಂಗಳ ಕಾಲ ನೀರಾನೆ
ಪ್ರಾಂತದ ರೈತರಲ್ಲಿ ಯಾರಿಗೂ ದೂರಪ್ರದೇಶಗಳಲ್ಲಿನ' ಜೀತದ ದುಡಿಮೆ
ಇರಲಿಲ್ಲ. ಈ ಸಂತೋಷ ಯೋಚನೆಗೂ ಎಡೆಕೊಟ್ಟಿತ್ತು. ಸ್ವತಂತ್ರರು
ಒತ್ತಾಯವಿಲ್ಲ. ಆದರೆ ಹೊಟ್ಟಿಗೆ ? ಮೊದಲ ಅನುಭವ. ಮನೆಯಲ್ಲೇ
ಹಾಯಾಗಿ ಮೈಚಾಚಿ ಬಿದ್ದಿರೋಣ ಎನಿಸಿತು. ಹಲವರಿಗೆ. ಕಾಳುಕಡ್ಡಿ
ಮುಗಿದಾಗ ? ರಾಜಗೃಹದ ಕಣಜಗಳಲ್ಲಿ ಇದ್ದುದರ ಬಹು ಭಾಗ ನೆರವಿನ
ರೂಪದಲ್ಲಿ ವಿನಿಯೋಗವಾಯಿತು. ಮೆನೆಪ್ ಟಾ ಅಂದುಕೊಂಡ: ಮುಂದಿನ
ಸಲ ಹೀಗಾಗಬಾರದು: ಪ್ರವಾಹದ ತೊಂದರೆ ಇರದ ಎತ್ತರ ಸ್ಥಳಗಳಲ್ಲಿ ಖಚಿತ
ಸ್ವರೂಪದ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಬೇಕು....)
ಭೂಮಾಲಿಕರ ಹೊಲಗಳನ್ನು ನೂತನ ಒಡೆಯರಾದ ಬಂಧಮುಕ್ತ
ಸೇವಕರು ಸಾಗು ಮಾಡಿದರು. ಮೆನೆಪ್ ಟಾ ಹೋರಿಗಳನ್ನು ಎರವಲು
ಪಡೆದು ತನ್ನ ಹೊಲವನ್ನು ಉತ್ತ: ಬಿತ್ತಿದ. “ಬೇಡಿ ಮೆನೆಪ್ ಟಾ ಅಣ್ಣ,
ನಿಮ್ಮ ಹೊಲದ ಕೆಲಸ ನಮಗೆ ಬಿಟ್ಟಿಡಿ," ಎಂದು ಹೇಳಿದವರು ಎಷ್ಟೋ జನ.
ಮೆನೆಪ್ ಟಾನ ಉತ್ತರ ಒಂದೇ: “ನನ್ನ ಕೈಲಿ ಆಗದೇಇದಾಗ ನಿಮ್ಮನ್ನು
ಖಂಡಿತ ಕರೀತೇನೆ."
ಮಾಗಿ ಕಾಲಿಟ್ಟಿತು. ಬೀಜಗಳು ಮೊಳಕೆಯೊಡೆದು ಎಳೆಯ ಸಸಿಗಳಾ
ದುವು. ನೀಲನದಿಗೆ ಈಗ ಹಸುರುದಂಡೆ.(ಖ್ನೆಮು ದೇವ, “ತಟಗಳಿಗೆ
ಹಸುರು ಬಳೆವ ಚಿತ್ರಕಾರ.”)
ಕುಯಿಲಿನ ವರೆಗೆ ತುಸು ಅವಕಾಶ. ಇನ್ನು ಅಂಗಳ ಕಣಜಗಳ ದುರಸ್ತಿ.
ಮಂದಿರದ ಉಗ್ರಾಣ ಮತ್ತು ಅರ್ಚಕನ ವಸತಿಗಳ ನಿರ್ಮಾಣ.
ಅಪೆಟ್ ನಾಯಕನನ್ನು ಕಾಣಲು ಬಂದ.