ಪುಟ:Mrutyunjaya.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೭೭ "ಮಕ್ಕಳ ಶಾಲೆ...." "ಇನ್ನೆರಡು ತಿಂಗಳು. ಅನಂತರ ಹೇಗೂ ಕುಯಿಲಿನ ಬಿಡುವು. ಅದು ಮುಗಿದ ಮೆಲೆ ಹೊಸ ಕಟ್ಟಡದಲ್ಲೇ ಶಾಲೆ ನಡೀಲಿ."

"ಆಗಬಹುದು. ನಮ್ಮ ಹುಡುಗನ ಬರಹ ಚೆನ್ನಾಗಿದೆ. 'ಬೆಳಕಿಗೆ ಆಗಮನ' ಪುಸ್ತಕದ ಎರಡು ಮೂರು ಪ್ರತಿ ಮಾಡಿಸ್ತೇನೆ. ಉಗ್ರಾಣದಿಂದ ನೂರು ಪೆಪೈರಸ್ ಹಾಳೆ ಕೊಡಿಸ್ಬೇಕು." “ ಅಷ್ಟು ಇರಲಾರದು. ಇಪ್ಯೂವರ್ಗೆ ಹೇಳ್ತೇನೆ. ಮೊದಲು ಒಂದು ಪ್ರತಿ ಮಾಡಿಸಿ. ಸಾಕು." .......ಮಹಾಪೂರದ ವೇಳೆಯಲ್ಲೇ ನೀರಾನೆ ಪ್ರಾಂತದ ನೂರು ಜನರ ಯೋಧದಳ ರೂಪಿಸಲು ಹೆಮ್ಟಿ ಯೋಜನೆ ಸಿದ್ಧಪಡಿಸಿದ್ದ. ಪೆರೋನ ದಂಡಿನಲ್ಲಿ ಸೈನಿಕರಿಗೆ ಚಿಕ್ಕಂದಿನಿಂದಲೇ ತರಬೇತಿ, ಶಿಕ್ಷಣ ಮುಗಿಯುವವರೆಗೂ ದಂಡಿನ ಕೂಡು ಕೊಠಡಿಗಳಲ್ಲಿ ಬಂಧನ. ಹೊಡೆದು ಬಡೆದು ನೀಡುವ ಯೋಧ ದೀಕ್ಷೆ. ಮನಸ್ಸಿನ ಮೇಲೆ ಬಿಂಬಿಸುವಂತೆ ಹೆಮ್ಟಿ ವಿವರಿಸುತ್ತಿದ್ದ . "ಪೆರೋನ ದಂಡಿಗೆ ನೂಉರಾಳಿಗೊಂದರಂತೆ ಭರ್ತಿಯಾಗ್ವೇಕು. ಅದು ನಿಯಮ. ಅಂಥ ಕಡ್ಡಾಯದ

ಭರ್ತಿ ನಮಗೆ ಬೇಡ. ಇಲ್ಲಿ ಕೂಡುದೊಡ್ಡಿಯೂ

ఇల్ల. ಸ್ವಪ್ರೇರಣೆಯಿಂದ ಯುವಕರು ಬರಲಿ. ಇಡೀ ಪ್ರಾಂತದಿಂದ ಯಾರಾ ದರೂ ಸರಿಯೆ. ಯುದ್ಧ ಭೂಮಿಯಲ್ಲಿ ಆಹಾರ ಸರಬರಾಜಿಲ್ಲದೆ ಹುಲ್ಲು ತಿಂದು ಬದುಕಿದವನು ನಾನು. ನಾವು ಕಟ್ಟೋದು ಅಂಥ ದಳವನ್ನಲ್ಲ. ಯಾರ ಮೇಲೂ ನಮಗೆ ಹಗೆತನವಿಲ್ಲ. ಆಕ್ರಮಣಕ್ಕೆ ನಾವು ಹೋಗೋದಿಲ್ಲ. ಈ ದಳ ಸಜ್ವರಕ್ಷಣೆಗೆ...ಸರಿಯಾ ಖೈಮ್ ಹೊಟೆಪ್ ದಳಪತಿ ಅವರು. ನಾನು ಶಿಕ್ಷಕ...” ಪ್ರಾಂತದ ಎಲ್ಲ ಹಳ್ಳಿಗಳಿಂದ ಹೆಸರು ಕೊಟ್ಟವರು ಬಹಳ ಜನ. ನೂರು ಮಂದಿಯನ್ನು ಹೆಮ್ಟಿ ಆರಿಸಿದ. ಬಿತ್ತನೆ ಮುಗಿಯುತ್ತಲೇ ಅವರೆಲ್ಲ ತರಬೇತಿ ಪಡೆಯಲು ಮುಖ್ಯ ಪಟ್ಟಣಕ್ಕೆ ಬಂದರು, ಹೊರ ವಲಯದಲ್ಲಿ ಶಿಕ್ಷಣ ಶಿಬಿರ ಸಿದ್ಧವಾಯಿತು.