ಪುಟ:Mrutyunjaya.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್‍ಯುಂಜಯ ಖೈಮ್ ಹೊಟೆಪ್ ಗೆ ಚಿಂತೆ, ಶಸ್ತ್ರಗಳಿಲ್ಲದ ದಂಡು ಅದೆಂಥದು? ಈ ಕೆಫ್ಟು ಬರುವನೋ ಇಲ್ಲವೋ, ಶಸ್ತ್ರಾಸ್ತ್ರ ತರುವನೋ ಇಲ್ಲವೋ. ಸ್ನೋಫ್ತಗೂ ಕೆಫ್ರುವಿನ ಯೋಚನೆ. ಅದನ್ನು ಕೊಳ್ಳುತ್ತೇನೆ, ಇದನ್ನು ಕೊಳ್ಳುತ್ತೇನೆ ఎండాను ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದ. ಅದನ್ನು ಗಮನ ದಲ್ಲಿಟ್ಟ ವಸ್ತುಗಳನ್ನು ಸಿದ್ಧಪಡಿಸುವ ಕೆಲಸ ನಡೆದಿತ್ತು ಅಪೂರ್ವ ಸಾಧ್ಯತೆಗಳ ದ್ವೀಪವನ್ನು ದೂರದಿಂದ ಕಂಡಿದ್ದನಲ್ಲ? ನೀರು ಮತ್ತೆ ಆವರಿಸಿತೆ ఆ దిಸ್ವೀಪವನ್ನು ? “ವಾಪಾರ ಕುದುರಿದೆ. ಬರದೆ ಇರಾನಾ ? ಕುಯಿಲಿಗೆ ಇನ್ನೂ ಕಾಲವಿದೆಯಲ್ಲ ?" ಎಂದ ಸೆಮ. ಬಟಾನೆಂದ : "ಕರೆಯೋಲೆ ಬರೆಯೋದಕ್ಕೆ ಪೆರೋಗೆ ಲಿಪಿಕಾರ ಸಿಗದೆ, ನಮಗೊಂದು ಮೆಂಫಿಸ್ ಪ್ರಯಾಣ ತಪ್ಪಿಹೋಯ್ತು!” ಹೀಗೆ ಇವರು ನುಡಿದ ಕೆಲವೇ ದಿನಗಳ ಬಳಿಕ ಒಂದು ಬೆಳಿಗ್ಗೆ

  • * * * *

ಮೆಂಫಿಸ್ನಿಂದ ರಾಜನಾವೆ ಬಂತು. ರಾಜದೂತನೂ ಇಬ್ಬರು ಸಶಸ್ತ್ರ ಭಟರೂ ಕಟ್ಟೆಗೆ ఇళిదారు. దారి ಕೇಳಿಕೊಂಡು ನಾಯಕನ ಮನೆಯತ್ತ ಹೊತಟರು. ನಾವೆ ಬಂದ ಸುದ್ದಿ ಬಟಾನಿಗೆ ಮುಟ್ಟುವುದು ತಡವಾಗಲಿಲ್ಲ. ಆತ ಖೈಮ್ ಹೊಟೆಪ್ಗೆ ತಿಈಸಿದ . ಪಟ್ಟಣದ ರಕ್ಷಕ ಭಟರು ಮಾರ್ಗಮಧ್ರದಲ್ಲಿ ಆಗಂತುಕರನು ತಡೆದರು. ಭಟರ ಮುಖ್ಯಸ್ಥ ಕೇಳಿದ : “ಯಾರು ನೀವು? ಎಲ್ಲಿಂದ ಬಂದಿರಿ? ಮಿತ್ರರಾದರೆ ಸ್ವಗತ.” ದೂತ ಉತ್ತರಿಸಿದ  : “ನಾನು ರಾಜದೂತ. ಮೆಂಫಿಸಿನಿಂದ ನಾವು ಬಂದಿದ್ದೇವೆ. ಶತ್ರುಗಳಲ್ಲ."