ಪುಟ:Mrutyunjaya.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್‍ಯುಂಜಯ ಟಾ ರಾಜಗೃಹದಿಂದ బందా. “ಇವತ್ತಿಗೆ ಪಾಠ ಇಷ್‍ಟು ಸಾಕು, ಅಂದ್ರು ಗುರುಗಳು. ಮೆಂಫಿಸ್ ನಿಂದ ಯಾರೋ ಬಂದಿದ್ದಾರೆ. ರಾಜದೂತ ಅಂತೆ. ಕತ್ತಿನಲ್ಲಿ ಎರಡು ಸರಗಳಿವೆ. ಬಂಗಾರದ ಸರ ಅಂತ ಚಿನಿವಾರರ ಹುಡುಗ ರಾನೋಫರ್ ಹೇಳ್ದ. ಕೈಯಲ್ಲಿ ಬಟ್ಟೆಯಲ್ಲಿ ಸುತ್ತಿದ ಒಂದು ಲಿಪಿ ಸುರುಳಿಯೂ ಇದೆ," ಎಂದು ಹುಡುಗ, ಹೆತ್ತವರೊಡನೆ. ರಾಜಕಾರ್ಯ, ಮರಳಿ ಬರುವುದು ತಡವಾಗಲೂಬಹುದು........ ನೆಫಿಸ್ ಒಂದು ರೊಟ್ಟಿ ಹೆಚ್ಚಾಗಿಯೇ ಬಡಿಸಿದಳು. ಗಂಡನೂ ಮಗನೂ ಉಣುವುದನ್ನು ನೋಡುತ್ತ, ಸುಮ್ಮನಿರಲು ಆಗದೆ “ನನ್ನ ಗುಂಡಿಗೆ ಯಾಕೋ ಡವಡವ ಅಸ್ತಿದೆ” ಎಂದಳು ನೆಫಿಸ್. ಮೆನೆಪ್ಟಾ ಮುಗುಳುನಕ್ಕ. ರಾಮೆರಿಪ್ಟಾನೆಂದ : “ಏನು? ಹೆದರೈನಾ ಅಮ್ಮ?” “ಏನಿಲ್ಲವಪ್ಪ,” ಎಂದು ಹೇಳಿ, ನೆಫಿಸ್ ಸುಮ್ಮನಾದಳು. ಮೆನೆಪ ಟಾ ರಾಜಗೃಹ ತಲಪುವಷ್ಟ ರಲ್ಲಿ ಉಳಿದವರು ಬಂದಿದ್ದರು. ಖೈಮ್ ಹೊಟೆಪ್ ಸೂಚಿಸಿದೊಡನೆಯೋ ರಾಜದೂತ ವೇದಿಕೆಯ ಬಳಿ ಸಾರಿ, ನಾಯಕನಿಗೆ ನಮಿಸಿದ: ಸುರುಳಿಯ ಓಲೆಯನ್ನು ಮೆನೆಪಟಾನ ಕೈಗಿತ್ತ, ಪೀಠಗಳತ್ತ ದೃಷ್ಟಿಬೀರಿ, "ಕುಳಿತುಕೋಬಹುದು," ಎಂದು ನಾಯಕ. ದೂತ ನಿಂತೇ ಇದ್ದ. ಅವನೆಂದ: "ಓದಿ ಹೇಳಬೇಕೆ?" ನಾಯಕನಿಗೆ ಚೇಳು ಕುಟುಕಿದಂತಾಯಿತು. ತನಗೆ ಓದು ಬರದು ಎಂದೆ ಆ ಪ್ರಶ್ನೆ? “ಅಗತ್‍ಯವಿಲ್ಲ, " ಎಂದು ಆತ. ಇಪ್ಪವರ್ ನನ್ನು ಕರೆದು, ಓಲೆಯನ್ನು ಆತನಿಗಿತ್ತು, ಓದುವಂತೆ ಸನ್ನೆ ಮಾಡಿದ. ಸುರುಳಿಯ ಮೇಲಣ ರಾಜಮುದ್ರೆಯನ್ನು ಇಪವರ್ ಒಡೆದ. “ಪೆರೋ ಬರೆಸಿದ್ದು, ಅಮಾತ್ಯ ಆಮೆರಬ್ ಅಂಕಿತ ಹಾಕಿದ್ದಾರೆ.” ಎಂಬ ಪೀಠಿಕೆಯ ಬಳಿಕ ಆತ ಓದಿದ :