ಪುಟ:Mrutyunjaya.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

౧೮೫

“ ಇವರು ಹೀಗೇ ಬರ್ತಾ ಇದ್ದರೆ ಬೇರೆ ಯಾವ ಕೆಲಸವೂ ಆಗೋದಿಲ್ಲ.
ನಾಳೆ ಸಂಜೆ ಜನ ದೋಣಿಕಟ್ಟೆಯಲ್ಲಿ ಜಮೆಯಾಗೋದೇ ಸರಿ,” ಎಂದ ಖ್ನೆಮ್
ಹೊಟೆಪ್.
ಹಿರಿಯ ಸಮಿತಿ ಸದಸ್ಯರು ರಾತ್ರೆ ಬಹಳ ಹೊತ್ತಿನವರೆಗೂ ರಾಜ
ಗೃಹದಲ್ಲೇ ಇದ್ದರು. ಅವರು ಹೋದ ಮೇಲೂ ಸ್ನೊಫ್ರು ಸೆಬೆಕ್ಖು అದು
ಇದು ಮಾತನಾಡುತ್ತ ಕುಳಿತರು.
"ನಡು ಇರುಳು ಆಯ್ತು. ಇನ್ನು ಮೆನೆಪ್ಟಾ ಅಣ್ಣನನ್ನು ಮನೆಗೆ
ಹೋಗೋದಕ್ಕೆ ಬಿಡೋಣ," ಎಂದ బಟಾ, ತನ್ನ ಒಲವಿನ ಮಡದಿ ಮಕ್ಕಳು
ನಿದ್ದೆಹೋಗಿರಬಹುದೆಂದು ಭಾವಿಸುತ್ತ.
ಆ ರಾತ್ರೆ .....
ತಂದೆಗಾಗಿ ಕಾದು ಕುಳಿತು ಬೇಸತ್ತು ರಾಮೆರಿಪ್ಟಾ ನಿದ್ರಿಸಿದ್ದ.
"ರೊಟ್ಟಿ ಪುನಃ ಬಿಸಿ ಮಾಡಲೆ?” ಎಂದು ನೆಫಿಸ್ ಕೇಳದಳು.
“ ಬೇಡ ನೆಫಿ. ಹಸಿವಿಲ್ಲ.”
“ ನನಗೂ ಅಷ್ಟೆ.”
“ ನೀನೂ ಉಪವಾಸವಿರೋದೇ? ಖಂಡಿತ ಸಲ್ಲದು. (ಆಕೆಯ ಹಿರಿಯ
ಗಾತ್ರದ ಒಡಲನ್ನು ನೋಡುತ್ತ) ಪುಟಾಣಿ ನನ್ನ ಮೇಲೆ ಕೋಪಿಸ್ಕೊಂಡಿರ್ಬೇಕು.
ಕೂತ್ಕೊ. ನೀನು ಉಣ್ಣ ಬೇಕಾದದ್ದು ಇಬ್ಬರ ಊಟ. ಬಾ, ಬಾ.”
“ನೀನೂ ಒಂದು ತುತ್ತು?”
"ಆಗಲಿ. ಆಗಲಿ."
ಉಣ್ಣುವಾಗ ಬೆರಳುಗಳು ಸಂದೇಶ ನೀಡಲಿಲ್ಲ. ರತಿಸುಖಕ್ಕಿಂತಲೂ
ಶ್ರೇಷ್ಠತರವಾಗಿತ್ತು ಅನ್ಯೋನ್ಯ ಸಾಮೀಪ್ಯದ ನೆಮ್ಮದಿ.
"ನೆಜಮುಟ್ ಬಂದಿದ್ಲು."
"ಏನಂತೆ?"
"ಪೆರೋ ನಿನಗೆ ಉಡುಗೊರೆ ಕೊಡಬಹುದಂತೆ."
"ಹುಚ್ಚಮ್ಮ!"
"ನಾನೂ ಹಾಗೇಂತ್ಲೇ ಅವಳನ್ನ ಕರೆದೆ. ....ನಾವು ಸ್ವಾರ್ಥಿಗಳಲ್ಲ.